ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 14,989 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 98 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,11,39,516 ಕ್ಕೆ ಏರಿಕೆಯಾಗಿದೆ.
13,123 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 1,08,12,044 ಮಂದಿ ಗುಣಮುಖರಾಗಿದ್ದಾರೆ. 1,70,126 ಸಕ್ರಿಯ ಪ್ರಕರಣಗಳಿದ್ದು, ಈಗಾಗಲೇ 1,56,20,749 ಜನರು ವಾಕ್ಸಿನೇಷನ್ ಪಡೆದಿದ್ದಾರೆ.
ಇನ್ನು ಒಟ್ಟಾರೆಯಾಗಿ 1,57,346 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.