ನವದೆಹಲಿ: ನಿಧಾನವಾಗಿ ದೇಶದಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗುತ್ತಿದ್ದು, ಮೂರನೇ ಅಲೆ ಸಮೀಪಿಸುವ ಮುನ್ನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಎಚ್ಚರಿಸುತ್ತಾ ಬರುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,32,364 ಸೋಂಕಿತರು ಪತ್ತೆಯಾಗಿದ್ದು, 2,713 ಮಂದಿ ಅಸುನೀಗಿದ್ದಾರೆ.
ಭಾರತದಲ್ಲಿ ಈವರೆಗೆ ಒಟ್ಟು 2,85,74,350 ಜನರು ವೈರಸ್ ಸುಳಿಯಲ್ಲಿ ಸಿಲುಕಿದ್ದು, 3,40,702 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 2,65,97,655 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುರುವಾರ ಒಂದೇ ದಿನದಲ್ಲಿ 2,07,071 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ: ಸರ್ಕಾರವನ್ನು ಎಚ್ಚರಿಸುವಂತೆ ಪ್ರತಿಪಕ್ಷಗಳಿಗೆ ಬುದ್ಧಿಜೀವಿಗಳ ಪತ್ರ
35 ಕೋಟಿ ಸ್ಯಾಂಪಲ್ಗಳ ಟೆಸ್ಟ್
ಜೂನ್ 3ರವರೆಗೆ 35,74,33,846 ಸ್ಯಾಂಪಲ್ಗಳನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದ್ದು, ನಿನ್ನೆ ಒಂದೇ ದಿನ 20,75,428 ಮಂದಿಯನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
22.41 ಕೋಟಿ ಮಂದಿಗೆ ಲಸಿಕೆ
ಜನವರಿ 16ರಿಂದ ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧದ ಹೋರಾಟದಲ್ಲಿನ ಮುಂಚೂಣಿ ಕಾರ್ಮಿಕರು, 18 ವರ್ಷ ಮೇಲ್ಪಟ್ಟವರು ಸೇರಿ ಒಟ್ಟು 22,41,09,448 ಮಂದಿಗೆ ಲಸಿಕೆ ನೀಡಲಾಗಿದೆ.