ETV Bharat / bharat

India Covid update: ದೇಶದಲ್ಲಿ 11,919 ಹೊಸ ಕೇಸ್​ ಪತ್ತೆ.. 470 ಮಂದಿ ಬಲಿ - COVID cases update news

ನಿನ್ನೆ ಒಂದೇ ದಿನ 11,919 ಕೋವಿಡ್​ ಪ್ರಕರಣ(COVID cases)ಗಳು ಪತ್ತೆಯಾಗಿದ್ದು, 470 ಮಂದಿ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಕೇರಳ ರಾಜ್ಯವೊಂದರಲ್ಲೇ 6,849 ಪ್ರಕರಣಗಳು ಹಾಗೂ 61 ಸಾವು ವರದಿಯಾಗಿದೆ.

India Covid Report
India Covid Report
author img

By

Published : Nov 18, 2021, 1:11 PM IST

ನವದೆಹಲಿ: ಕಳೆದ 2 ತಿಂಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ (COVID Cases) ಕಡಿಮೆಯಿದೆ. ಆದರೆ, ಸಾವಿನ ಸಂಖ್ಯೆ(COVID Deaths)ಯಲ್ಲಿ ಇಳಿಕೆಯಾಗುತ್ತಿಲ್ಲ. 150 ರಿಂದ 800ರ ವರೆಗೂ ಸಾವಿನ ಸಂಖ್ಯೆ ವರದಿಯಾಗುತ್ತಿದೆ.

ಬುಧವಾರ ಒಂದೇ ದಿನ 11,919 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 470 ಮಂದಿ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟು ಕೇಸ್​ಗಳ ಸಂಖ್ಯೆ 3,44,78,517 ಆಗಿದ್ದರೆ, ಮೃತರ ಸಂಖ್ಯೆ 4,64,623ಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಶೇ.98.28 ರಷ್ಟು (India's COVID recovery rate) ಅಂದ್ರೆ 3,38,85,132 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.0.37ಕ್ಕೆ ಕೆಳಗಿಳಿದಿದ್ದು, ಸದ್ಯ 1,36,308 ಕೇಸ್​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.

ಇದನ್ನೂ ಓದಿ: Skin To Skin Contact: 'ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ರೆ ಲೈಂಗಿಕ ದೌರ್ಜನ್ಯವಲ್ಲ' ಎಂಬ ಬಾಂಬೆ ಹೈಕೋರ್ಟ್​ ತೀರ್ಪು ರದ್ದುಗೊಳಿಸಿದ ಸುಪ್ರೀಂ

ನಿನ್ನೆ ಪತ್ತೆಯಾದ 11,919 ಕೋವಿಡ್​ ಸೋಂಕಿತರು ಮತ್ತು 470 ಮಂದಿ ಸಾವಿನ ಪೈಕಿ ಕೇರಳ ರಾಜ್ಯವೊಂದರಲ್ಲೇ 6,849 ಪ್ರಕರಣಗಳು ಹಾಗೂ 61 ಜನರು ಮೃತಪಟ್ಟಿದ್ದಾರೆ.

114.46 ಕೋಟಿ ಡೋಸ್​ ವ್ಯಾಕ್ಸಿನೇಷನ್​ (India covid vaccination)

ಜನವರಿ 16ರಿಂದ ದೇಶಾದ್ಯಂತ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ 114.46 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.