ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,150 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,30,34,217 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದೊಂದು ದಿನದಲ್ಲಿ ಸೋಂಕಿಗೊಳಗಾದ 83 ಮಂದಿ ಸಾವನ್ನಪ್ಪುವ ಮೂಲಕ ಒಟ್ಟು ಮೃತರ ಸಂಖ್ಯೆ 5,21,656ಕ್ಕೆ ಏರಿದೆ ಕಂಡಿದೆ.
ದಿನೇ ದಿನೆ ಸೋಂಕಿನ ಪ್ರಕರಣ ಇಳಿಮುಖವಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11,365ಕ್ಕೆ ಇಳಿದಿದೆ. ಸದ್ಯ ಶೇ. 0.03ರಷ್ಟು ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಪ್ರಾರಂಭವಾದಾಗಿನಿಂದ ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದವರ ಸಂಖ್ಯೆ 4,25,01,196 ರಷ್ಟಿದ್ದು, ಚೇತರಿಕೆಯ ಪ್ರಮಾಣವು ಶೇ. 98.76ರಷ್ಟು ತಲುಪಿದೆ. ಸದ್ಯಕ್ಕೆ ವಾರದ ಕೋವಿಡ್ ಪಾಸಿಟಿವಿಟಿ ದರವು ಶೇ. 0.23ರಷ್ಟಿದ್ದರೆ, ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ. 0.25 ರಷ್ಟಿದೆ.
ಮತ್ತೊಂದೆಡೆ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರೆದಿದೆ. ರಾಷ್ಟ್ರವ್ಯಾಪಿ ಇದುವರೆಗೆ ಒಟ್ಟು 185.55 ಕೋಟಿ ಲಸಿಕಾ ಡೋಸ್ ನೀಡಲಾಗಿದೆ.
ಇದನ್ನೂ ಓದಿ: ಟೊರೊಂಟೊದಲ್ಲಿ ಗುಂಡಿಕ್ಕಿ ಭಾರತೀಯ ವಿದ್ಯಾರ್ಥಿ ಹತ್ಯೆ..!