ನವದೆಹಲಿ: ಎರಡನೇ ಅಲೆಯಲ್ಲಿ ರೂಪಾಂತರ ಪಡೆದ ಕೊರೊನಾ ವೈರಸ್ ತೀವ್ರತೆಯೋ ಅಥವಾ ವೈದ್ಯಕೀಯ ಸೌಲಭ್ಯಗಳ ಕೊರತೆಯೋ ಗೊತ್ತಿಲ್ಲ, ದೇಶದಲ್ಲಿ ಹೊಸ ಸೋಂಕಿತರ ಪ್ರಮಾಣ ತಗ್ಗಿದರೂ ಮೃತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,549 ಕೋವಿಡ್ ಕೇಸ್ಗಳು ಪತ್ತೆಯಾಗಿದೆ. ಆದರೆ 488 ಮಂದಿ ಸೋಂಕಿತರು ಅಸು ನೀಗಿದ್ದಾರೆ. ಈ ಮೂಲಕ ದೇಶದಲ್ಲಿನ ಒಟ್ಟು ಕೋವಿಡ್ ಕೇಸ್ಗಳ ಸಂಖ್ಯೆ 3,45,55,431 ಹಾಗೂ ಮೃತರ ಸಂಖ್ಯೆ 4,67,468ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನ ವಸತಿ ಶಾಲೆಯಲ್ಲೂ ಕೊರೊನಾ ಸ್ಫೋಟ: 33 ವಿದ್ಯಾರ್ಥಿಗಳಿಗೆ ಸೋಂಕು
ಇನ್ನು ಗುಣಮುಖರ ಪ್ರಮಾಣ ಶೇ.96.33ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,10,133ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದಾಖಲೆಯ 120 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ನಿನ್ನೆಯವರೆಗೆ ದಾಖಲೆ ಮಟ್ಟದಲ್ಲಿ 120 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ಅನ್ನು ಜನರಿಗೆ ನೀಡಲಾಗಿದೆ.