ನವದೆಹಲಿ: ಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಏರಿಕೆಗೆ ಸಾಕ್ಷಿಯಾಗಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,380 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪಾಸಿಟಿವ್ ದರವು ಶೇಕಡಾ 0.53 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.
- " class="align-text-top noRightClick twitterSection" data="">
ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 313 ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿ ಬುಧವಾರ 2,067 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇದರೊಂದಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳು 13,433 ರಷ್ಟಿದೆ.
ಓದಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆ.. 40 ಮಂದಿ ಸಾವು
ಕಳೆದ 24 ಗಂಟೆಗಳಲ್ಲಿ ಒಟ್ಟು 1,231 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,14,479 ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ 98.76 ಶೇ ಆಗಿದೆ. ಸಚಿವಾಲಯದ ಪ್ರಕಾರ ಇಂದು 56 ರೋಗಿಗಳು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,22,062ಕ್ಕೆ ತಲುಪಿದೆ. ದೈನಂದಿನ ಪ್ರಕರಣಗಳ ಪಾಸಿಟಿವ್ ದರವು 0.49 ಶೇಕಡಾದಿಂದ (ಬುಧವಾರ) 0.53 ಶೇಕಡಾಕ್ಕೆ (ಗುರುವಾರ) ಏರಿಕೆ ಕಂಡಿದೆ.
ಕಳೆದ 24 ಗಂಟೆಗಳಲ್ಲಿ 4,49,114 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 83.33 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನಿರ್ವಹಿಸಲಾದ ಒಟ್ಟು ಲಸಿಕೆ ಡೋಸ್ಗಳ ಸಂಖ್ಯೆ 1,87,07,08,111ಕ್ಕೆ ಆಗಿದೆ.