ETV Bharat / bharat

The Sino-Indian border: ಗಡಿಯಲ್ಲಿ ಮತ್ತೊಂದು ಕಠಿಣ ಚಳಿಗಾಲಕ್ಕೆ ಭಾರತ ಸೇನೆ ಸಜ್ಜು - ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ

ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಚೀನಾದ ಜೊತೆಗೆ ಸೇನೆಯು ಚಳಿಗಾಲವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧತೆ ನಡೆಸಿದೆ. ಗಡಿ ರಕ್ಷಣೆಗಾಗಿ ಸೇನಾ ನಿಯೋಜನೆಗೆ ಯಾವುದೇ ಹಿಂಜರಿಕೆ ಇಲ್ಲ. ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ಇತರ ಸಲಕರಣೆಗಳನ್ನುಗಡಿಗೆ ಸಾಗಿಸುತ್ತಿದೆ.

The Sino-Indian border
ಭಾರತ ಚೀನಾ ಗಡಿ ವಿವಾದ
author img

By

Published : Nov 9, 2021, 9:50 PM IST

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಭಾರತವು ತನ್ನ ಸೈನಿಕರನ್ನು ಉತ್ತಮವಾಗಿ ಬೆಂಬಲಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಈ ಮಧ್ಯೆ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳು ಸವಾಲಾಗಿ ಉಳಿದಿವೆ.

ಪೀಪಲ್ಸ್ ಲಿಬರೇಶನ್ ಆರ್ಮಿ ಪಡೆಗಳ ಉಪಸ್ಥಿತಿಯನ್ನು ಎದುರಿಸಲು ಈ ಚಳಿಗಾಲದಲ್ಲಿ ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆ (LAC) ಬಳಿ ಸಾಕಷ್ಟು ಪಡೆಗಳು, ಶಸ್ತ್ರಾಸ್ತ್ರಗಳು ಮತ್ತು ಬೆಂಬಲ ಸಾಧನ ನಿಯೋಜನೆಗಾಗಿ ಭಾರತೀಯ ಸೇನೆಯು ಸಜ್ಜಾಗಿದೆ ಎಂದು ಹಿರಿಯ ಸೇವಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಗಡಿಯು ಸುಮಾರು 3,488 ಕಿ.ಮೀಗಳಷ್ಟು ಉದ್ದವಾಗಿದೆ ಮತ್ತು ಹೆಚ್ಚಾಗಿ ಪರ್ವತ ಭೂಪ್ರದೇಶವನ್ನು ಒಳಗೊಂಡಿದೆ. ವೆಚ್ಚಗಳು ಅಗಾಧವಾಗಿದ್ದರೂ ಸಹ ಭಾರತೀಯ ಪಡೆಗಳು LAC ಉದ್ದಕ್ಕೂ ದೀರ್ಘಾವಧಿಯವರೆಗೆ ಶಸ್ತ್ರಸಜ್ಜಿತವಾಗಿವೆ.

ಚಳಿಗಾಲದಲ್ಲಿ ಇಲ್ಲಿನ ತಾಪಮಾನ -40 ಡಿಗ್ರಿ:

ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಸುಮಾರು ಮೈನಸ್ 40 ಡಿಗ್ರಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ತಪ್ಪು ಮಾಡಿದರೂ ಬದುಕುಳಿದವರ ಮೇಲಿನ ಭರವಸೆಯನ್ನು ಬಿಡಬೇಕಾಗುತ್ತದೆ. ಈಗಾಗಲೇ LAC (Lac Indian Army) ನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಚೀನಾದ ಜೊತೆಗೆ ಸೇನೆಯು ಚಳಿಗಾಲವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧತೆ ನಡೆಸಿದೆ. ಗಡಿ ರಕ್ಷಣೆಗಾಗಿ ಸೇನಾ ನಿಯೋಜನೆಗೆ ಯಾವುದೇ ಹಿಂಜರಿಕೆ ಇಲ್ಲ. ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ಇತರ ಸಲಕರಣೆಗಳನ್ನುಗಡಿಗೆ ಸಾಗಿಸುತ್ತಿದೆ.

ಓದಿ: ಸೇರಿಗೆ ಸವ್ವಾ ಸೇರು.. ಚೀನಾ ಮಣಿಸಲು ಭಾರತ ಸರ್ವ ರೀತಿಯಲ್ಲೂ ಸನ್ನದ್ಧ

ಪೂರ್ವ ಲಡಾಖ್‌ನಲ್ಲಿ ಚೀನಾಕ್ಕೆ ಮಿಲಿಟರಿ ನಿಯೋಜನೆಗಳು ಮತ್ತು ಹೊಸ ರಚನೆಗಳು ಆತಂಕಕಾರಿ ದರದಲ್ಲಿ ಮುಂದುವರೆದಿದೆ. ಅಕ್ಟೋಬರ್‌ನಲ್ಲಿ, ಸೇನಾ ಮುಖ್ಯಸ್ಥ ನರವಣೆ ಅವರು ಚೀನಾದ ಪಡೆಗಳು ಅಲ್ಲಿಯೇ ಇದ್ದರೆ ಭಾರತೀಯ ಪಡೆಗಳು ಹಿಮ್ಮೆಟ್ಟಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತವು ಈಗಾಗಲೇ 50,000 ಕ್ಕೂ ಹೆಚ್ಚು ಸೈನಿಕರು, ಫಿರಂಗಿಗಳು, ಮುಖ್ಯ ಯುದ್ಧ ಟ್ಯಾಂಕ್‌ಗಳು, ವಾಯು ರಕ್ಷಣಾ, ಕ್ಷಿಪಣಿಗಳು, ಇಗ್ಲಾ-ಎಸ್ ವಾಯು ರಕ್ಷಣಾ ವ್ಯವಸ್ಥೆ, ಪಿನಾಕಲ್ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಹೈ ಮೊಬಿಲಿಟಿ ವಾಹನಗಳನ್ನು ಸ್ಥಳಾಂತರಿಸಿದೆ.

ಆರು ತಿಂಗಳಲ್ಲಿ ಒಬ್ಬ ಯೋಧನಿಗೆ 11 ಲಕ್ಷ ರೂ. ವೆಚ್ಚ:

ಗಡಿಯಲ್ಲಿ ಸೇನೆಯನ್ನು ನಿಯೋಜಿಸುವಲ್ಲಿ ಭಾರತ ಹಿಂಜರಿಯಲಿಲ್ಲ. ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ಇತರ ಸಲಕರಣೆಗಳನ್ನು ಗಡಿಗೆ ಸಾಗಿಸುತ್ತಿದೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಪ್ರತಿ ಸೈನಿಕನಿಗೆ 15,000 ಡಾಲರ್​ ಅಂದರೆ ಸರಿ ಸುಮಾರು 11 ಲಕ್ಷ ರೂ. ವೆಚ್ಚವಾಗುತ್ತದೆ. ಸೇನೆಯು ಪಡಿತರ, ಔಷಧಗಳು, ಇಂಜಿನಿಯರಿಂಗ್ ಉಪಕರಣಗಳು, ಮದ್ದುಗುಂಡುಗಳು, ಇತರ ಉಪಕರಣಗಳು, ಬಟ್ಟೆ ಮತ್ತು ವಾಹನಗಳನ್ನು ತೀವ್ರ ಚಳಿಯ ಪರಿಸ್ಥಿತಿಯಲ್ಲಿ ಬಳಸುತ್ತಿದೆ ಎಂದು ಸೇನಾ ಸಾರಿಗೆ ಪರಿಣಿತ ಮೇಜರ್ ಜನರಲ್ ಅಮೃತಪಾಲ್ ಸಿಂಗ್ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಓದಿ: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಗಡಿ ಸಂಘರ್ಷ; 13ನೇ ಸುತ್ತಿನ ಮಾತುಕತೆಯೂ ವಿಫಲ

ಪ್ರತಿಯೊಬ್ಬ ಸೈನಿಕನಿಗೆ ಒಟ್ಟು 80 ಬಗೆಯ ವಸ್ತುಗಳು ಬೇಕಾಗುತ್ತವೆ. ಸೈನಿಕರು ಉಷ್ಣವನ್ನು ತಡೆದುಕೊಳ್ಳುವ ಸಲುವಾಗಿ, ವಾಹನಗಳ ಬಳಕೆಗೆ ಭಾರೀ ಸೀಮೆಎಣ್ಣೆ, ವಿಶೇಷ ಡೀಸೆಲ್ ಮತ್ತು ಪೆಟ್ರೋಲ್ ಅತ್ಯಗತ್ಯ. ಈ ಕ್ರಮದಲ್ಲಿ ಭಾರತ ಸರ್ಕಾರವು 50 ಲಕ್ಷ ಟನ್‌ಗಳಷ್ಟು ಸರಕುಗಳನ್ನು ಗಡಿಯುದ್ದಕ್ಕೂ ಕಳುಹಿಸುತ್ತಿದೆ.

ಸಿ-17 ವಿಮಾನಗಳಿಗೆ ಗಂಟೆಗೆ 2.5 ಕೋಟಿ ರೂ. ವೆಚ್ಚ:

ಈ ಕೆಲವು ಸರಬರಾಜುಗಳನ್ನು ಅಗತ್ಯಗಳಿಗೆ ಅನುಗುಣವಾಗಿ ರವಾನಿಸಬೇಕು. ಇನ್ನು ಕೆಲವರು ಟ್ರಕ್‌ಗಳಲ್ಲಿ ಹೋಗುತ್ತಾರೆ. ಒಂದು ಲಾರಿಯಲ್ಲಿ 10 ಟನ್ ಸರಕು ಸಾಗಣೆಗೆ 1.1 ಲಕ್ಷ ರೂ. ಖರ್ಚು ಮಾಡಬೇಕು. 50 ಟನ್ ಭಾರವನ್ನು ಹೊತ್ತೊಯ್ಯಬಲ್ಲ ಸಿ-17 ವಿಮಾನಕ್ಕೆ ಗಂಟೆಗೆ 2.5 ಕೋಟಿ ರೂ. ವೆಚ್ಚವಾಗುತ್ತದೆ.

ಭಾರತೀಯ ಸೈನಿಕರನ್ನು ಚಳಿಯಿಂದ ರಕ್ಷಿಸಲು ನಿಯಂತ್ರಣ ರೇಖೆಯ ಉದ್ದಕ್ಕೂ ವಿಶೇಷ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಅವರಿಗೆ ವಿದ್ಯುತ್, ಶುದ್ಧ ನೀರು ಮತ್ತು ಕ್ಯಾಂಪ್ ಹೀಟರ್​ಗಳನ್ನು ಒದಗಿಸಲಾಗಿದೆ. ಇವುಗಳನ್ನು ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ರೇಖೆಯ ಉದ್ದಕ್ಕೂ ನಿರ್ಮಿಸಲಾಗಿದೆ. ಇದಕ್ಕಾಗಿ 738 ಕೋಟಿ ರೂ. ಇದರ ಜೊತೆಗೆ ಹೆಚ್ಚಿನ ಬಂಕರ್‌ಗಳ ಅಗತ್ಯವಿದೆ ಎಂದು ಸೇನಾ ಅಧಿಕಾರಿಗಳು ಹೇಳುತ್ತಾರೆ. ಅಷ್ಟೇ ಅಲ್ಲ, ಆಯುಧ, ಮದ್ದುಗುಂಡು, ವಾಹನಗಳನ್ನು ಚಳಿಯಿಂದ ರಕ್ಷಿಸಲು ವಿಶೇಷ ರಚನೆಗಳನ್ನು ಮಾಡಲಾಗುತ್ತಿದೆ.

ಕಣ್ಗಾವಲು ವಿಶೇಷ ವ್ಯವಸ್ಥೆ:

ದಟ್ಟವಾದ ಹಿಮದಲ್ಲಿ ಗಸ್ತು ತಿರುಗುವುದು ಸುಲಭವಲ್ಲ. ಈ ಕ್ರಮದಲ್ಲಿ ಗುಪ್ತಚರ ಮತ್ತು ಗುರಿ ಕಣ್ಗಾವಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ, ಯುದ್ಧತಂತ್ರದ ಡ್ರೋನ್‌ಗಳು, ವಿಚಕ್ಷಣ ಮತ್ತು ವೀಕ್ಷಣಾ ವ್ಯವಸ್ಥೆಗಳು, ಯುದ್ಧಭೂಮಿ ರಾಡಾರ್‌ಗಳು ಮತ್ತು ಭೂಮಿಯ ಕೆಳಗಿನ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ಸಹ ಬಳಸಲು ಸಿದ್ಧಪಡಿಸಲಾಗುತ್ತಿದೆ. ಈ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತಕ್ಕೆ ಮುಂದಿನ ಎರಡು ವರ್ಷಗಳಲ್ಲಿ 3.6 ಸಾವಿರ ಕೋಟಿ ರೂ. ಖರ್ಚಾಗಬಹುದು.

ಗಡಿ ವಿವಾದದ ಕುರಿತು 1962 ರಲ್ಲಿ ಉಭಯ ದೇಶಗಳ ನಡುವೆ ಯುದ್ಧ ನಡೆದಿತ್ತು. ಚೀನಾ- ಭಾರತ ನಡುವಿನ ಯುದ್ದದಲ್ಲಿ ಭಾರತ ಪರಾಭವಗೊಂಡಿತು. ಬಳಿಕ ಹಲವಾರು ದ್ವಿಪಕ್ಷೀಯ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಹೊರತಾಗಿಯೂ ಅದು ಬಗೆಹರಿಯಲಿಲ್ಲ.

ಓದಿ: ಗಲ್ವಾನ್ ಸಂಘರ್ಷದ ವಿಡಿಯೋ ರಿಲೀಸ್ ಮಾಡಿದ ಚೀನಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.