ನವದೆಹಲಿ: ಈವರೆಗೆ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶಕ್ಕೆ ಹೆಮ್ಮೆ ತಂದುಕೊಟ್ಟ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇಂದು ಒಲಿಂಪಿಕ್ ದಿನವಾದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಸಾಧನೆಯನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ವಿವಿಧ ಒಲಿಂಪಿಕ್ನಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಈ ಒಲಿಂಪಿಯನ್ಗಳು ಬೇರೆ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
-
Today, on Olympic Day, I appreciate all those who have represented India in various Olympics over the years. Our nation is proud of their contributions to sports and their efforts towards motivating other athletes.
— Narendra Modi (@narendramodi) June 23, 2021 " class="align-text-top noRightClick twitterSection" data="
">Today, on Olympic Day, I appreciate all those who have represented India in various Olympics over the years. Our nation is proud of their contributions to sports and their efforts towards motivating other athletes.
— Narendra Modi (@narendramodi) June 23, 2021Today, on Olympic Day, I appreciate all those who have represented India in various Olympics over the years. Our nation is proud of their contributions to sports and their efforts towards motivating other athletes.
— Narendra Modi (@narendramodi) June 23, 2021
ಇದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ಕೋವಿಡ್ನಿಂದ ಮುಂದೂಡಲ್ಪಟ್ಟಿರುವ ಒಲಿಂಪಿಕ್ ಪಂದ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ.
ಒಲಿಂಪಿಕ್ ರಸಪ್ರಶ್ನೆ
ಒಲಿಂಪಿಕ್ ಕ್ರೀಡಾಪಟುಗಳಿಗೆ ಶುಭಾಶಯ ಕೋರುವುದರ ಜೊತೆಗೆ ಟ್ವಿಟ್ಟರ್ನಲ್ಲಿ 'ಮೈ ಗವರ್ನಮೆಂಟ್' ವೆಬ್ಸೈಟ್ಗೆ ಲಿಂಕ್ ನೀಡಿರುವ ಪ್ರಧಾನಿ ಮೋದಿ, ಅಲ್ಲಿನ ಒಲಿಂಪಿಕ್ ಕುರಿತಂತೆ, ಕ್ರೀಡೆಗಳ ಕುರಿತಂತೆ, ಆಯೋಜಿಸಿರುವ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
-
In a few weeks, @Tokyo2020 begins. Wishing the very best to our contingent, which consists of our finest athletes. In the run up to the games, here is an interesting quiz on MyGov. I urge you all, specially my young friends to take part. https://t.co/De25nciIUZ
— Narendra Modi (@narendramodi) June 23, 2021 " class="align-text-top noRightClick twitterSection" data="
">In a few weeks, @Tokyo2020 begins. Wishing the very best to our contingent, which consists of our finest athletes. In the run up to the games, here is an interesting quiz on MyGov. I urge you all, specially my young friends to take part. https://t.co/De25nciIUZ
— Narendra Modi (@narendramodi) June 23, 2021In a few weeks, @Tokyo2020 begins. Wishing the very best to our contingent, which consists of our finest athletes. In the run up to the games, here is an interesting quiz on MyGov. I urge you all, specially my young friends to take part. https://t.co/De25nciIUZ
— Narendra Modi (@narendramodi) June 23, 2021
ಈ ಒಲಿಂಪಿಕ್ ರಸಪ್ರಶ್ನೆ ಜೂನ್ 17ರಂದೇ ಆರಂಭವಾಗಿದ್ದು, ಜುಲೈ 22ರೊಳಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕ್ವಿಜ್ನಲ್ಲಿ ಗೆಲ್ಲುವ ದಿನಕ್ಕೆ ಒಬ್ಬರಿಗೆ ಇ-ಸರ್ಟಿಫಿಕೇಟ್ ಮತ್ತು ಟೀಂ ಇಂಡಿಯಾ ಜರ್ಸಿ ಅಥವಾ ತಮ್ಮ ಫೇವರಿಟ್ ಒಲಿಂಪಿಯನ್ ಅನ್ನು ಭೇಟಿಯಾಗುವ ಅವಕಾಶ ಕೂಡಾ ಇರುವ ಸಾಧ್ಯತೆಯಿದೆ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.