ETV Bharat / bharat

ಪರಮಾಣು ಶಸ್ತ್ರಾಸ್ತ್ರ ಹೆಚ್ಚಿಸಿದ ಭಾರತ, ಚೀನಾ, ಪಾಕಿಸ್ತಾನ: ವರದಿಯಲ್ಲಿ ಬಹಿರಂಗ - ಭಾರತ- ಚೀನಾ ಯುದ್ಧ

ಭಾರತವು 2020ರಲ್ಲಿ 150 ಪರಮಾಣು ದಾಸ್ತಾನು ಹೊಂದಿತ್ತು. ಆದರೆ, 2021ರ ಜನವರಿಯಲ್ಲಿ 156ಕ್ಕೆ ಏರಿಸಿದೆ. ಇನ್ನು ಚೀನಾ 320 ರಿಂದ 350, ಪಾಕಿಸ್ತಾನ 160 ರಿಂದ 165 ಪರಮಾಣು ಶಸ್ತ್ರಾಸ್ತ್ರ ಹೊಂದಿದೆ. ಈ ಮೂರು ದೇಶಗಳು ಕಳೆದ ವರ್ಷ ಸುಮಾರು 41 ಪರಮಾಣು ಶಸ್ತ್ರಾಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿದೆ.

neaucler
neaucler
author img

By

Published : Jun 14, 2021, 3:06 PM IST

ನವದೆಹಲಿ: ಭಾರತ, ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು 2020 ರಲ್ಲಿ ತಮ್ಮ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿವೆ. ಜಾಗತಿಕ ಪರಮಾಣು ದಾಸ್ತಾನು ಸಂಗ್ರಹದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಈ ಬಗ್ಗೆ ಪ್ರಮುಖ ಜಾಗತಿಕ ವಾಚ್‌ಡಾಗ್ ಮತ್ತು ಶಸ್ತ್ರಾಸ್ತ್ರ ವ್ಯಾಪಾರದ ಕುರಿತ ಥಿಂಕ್-ಟ್ಯಾಂಕ್‌ನಿಂದ ಬಿಡುಗಡೆಯಾದ ವರದಿಯಲ್ಲಿ ಬಹಿರಂಗವಾಗಿದೆ.

ವರದಿಯ ಪ್ರಕಾರ, ಭಾರತವು 2020ರಲ್ಲಿ 150 ಪರಮಾಣು ದಾಸ್ತಾನು ಹೊಂದಿತ್ತು. ಆದರೆ 2021 ರ ಜನವರಿಯಲ್ಲಿ 156 ಕ್ಕೆ ಏರಿಸಿದೆ. ಇನ್ನು ಚೀನಾ 320 ರಿಂದ 350, ಪಾಕಿಸ್ತಾನ 160 ರಿಂದ 165 ಪರಮಾಣು ಶಸ್ತ್ರಾಸ್ತ್ರ ಹೊಂದಿದೆ. ಈ ಮೂರು ದೇಶಗಳು ಕಳೆದ ವರ್ಷ ಸುಮಾರು 41 ಪರಮಾಣು ಶಸ್ತ್ರಾಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿದೆ.

ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಬಂದೂಕುಗಳು ಸದ್ದು ಮಾಡುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಸ್ತವಿಕ ಗಡಿಯಲ್ಲಿ 2021 ರ ಫೆಬ್ರವರಿ 24 ರಿಂದ ಗಡಿ ಕದನ ವಿರಾಮ ಘೋಷಿಸಲಾಗಿದೆ. ಕಳೆದ ಜನವರಿ 28 ರವರೆಗೆ 299, 2020 ರಲ್ಲಿ 5,133, 2019 ರಲ್ಲಿ 3,168, ಮತ್ತು 2018ರಲ್ಲಿ 1,629 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿತ್ತು.

ಮತ್ತೊಂದೆಡೆ, ಏಪ್ರಿಲ್ - ಮೇ 2021ರಲ್ಲಿ, ಭಾರತೀಯ ಮತ್ತು ಚೀನಾದ ಸೈನ್ಯಗಳು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಗಲಭೆಯಲ್ಲಿ ತೊಡಗಿದ್ದವು. ಈ ಘಟನೆಯಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ಸೈನಿಕರು ಭಾಗವಹಿಸಿದ್ದರು.

ಆತಂಕಕಾರಿ ಸಂಗತಿಯೆಂದರೆ, ಚೀನಾ ತನ್ನ ಪರಮಾಣು ಪಡೆಗಳನ್ನು ಒಳಗೊಂಡಂತೆ ಮಿಲಿಟರಿಯನ್ನು ಆಧುನೀಕರಣಗೊಳಿಸುವ ಮತ್ತು ಹೆಚ್ಚಿಸುವ ನೀತಿ ಅನುಸರಿಸುತ್ತಿದೆ ಎಂದು ವರದಿಯಾಗಿದೆ. ಈ ಪ್ರಯತ್ನವು ಈ ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸ್ಪರ್ಧೆಯನ್ನು ಉತ್ತೇಜಿಸುವ ಸಾಧ್ಯತೆ ಹೊಂದಿದೆ.

ಈಗಾಗಲೇ, ಯುಎಸ್ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು (1,800) ಹೊಂದಿದೆ. ರಷ್ಯಾ 1,625 ಹೊಂದಿದೆ. ಒಂಬತ್ತು ಪರಮಾಣು-ಸಶಸ್ತ್ರ ರಾಷ್ಟ್ರಗಳು ಇಂತಿದೆ. ಅಮೆರಿಕ, ರಷ್ಯಾ, ಇಂಗ್ಲೆಂಡ್​, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.