ETV Bharat / bharat

ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನ.. ಅವೈಜ್ಞಾನಿಕ ವರದಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಭಾರತ

author img

By

Published : Oct 15, 2021, 8:32 PM IST

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ ಪಾಕ್​, ಬಾಂಗ್ಲಾ ಹಾಗೂ ನೇಪಾಳಕ್ಕಿಂತಲೂ ಕೆಳಗಿನ ಸ್ಥಾನ ನೀಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Hunger Index
Hunger Index

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index)ದಲ್ಲಿ ಭಾರತಕ್ಕೆ 101ನೇ ಸ್ಥಾನ ನೀಡಲಾಗಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತ ಹಿಂದಿನ ಸ್ಥಾನ ನೀಡಲಾಗಿದೆ. ಹೀಗಾಗಿ ಇದಕ್ಕೆ ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಐರಿಷ್ ಸಂಘಟನೆಯಾದ ಕನ್ಸರ್ನ್​ ವರ್ಲ್ಡ್​​​ವೈಡ್ (Concern Worldwide) ಮತ್ತು ಜರ್ಮನ್ ಸಂಘಟನೆ ವೆಲ್ಟ್ ಹಂಗರ್ ಹಿಲ್ಫ್​ (Welt Hunger Hilfe) ವರದಿಯನ್ನು ಪ್ರಕಟಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಇದೊಂದು ಅವೈಜ್ಞಾನಿಕ ವರದಿ ಎಂದು ಹೇಳಿದೆ. ಪಾಕಿಸ್ತಾನ, ಬಾಂಗ್ಲಾ ಮತ್ತು ನೇಪಾಳಕ್ಕಿಂತಲೂ ಭಾರತ ಕೆಳ ಸ್ಥಾನದಲ್ಲಿರುವುದು ನಿರಾಸೆ ಮೂಡಿಸಿದ್ದು, ಇದಕ್ಕಾಗಿ ಬಳಕೆ ಮಾಡಿರುವ ವಿಧಾನ ಅವೈಜ್ಞಾನಿಕವಾಗಿದೆ ಎಂದಿದೆ.

ವರದಿಗಾಗಿ ಬಳಕೆ ಮಾಡಿರುವ ವಿಧಾನ ಸರಿಯಾಗಿಲ್ಲ. ಅಭಿಪ್ರಾಯ ಸಂಗ್ರಹದ ವೇಳೆ ದೂರವಾಣಿ ಮೂಲಕ ನಡೆಸಲಾಗಿದ್ದು, ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿಧಾನ ಬಳಕೆ ಮಾಡಿಲ್ಲ ಎನ್ನುವ ವಾದವನ್ನು ಭಾರತ ಮುಂದಿಟ್ಟಿದೆ.

ಇದನ್ನೂ ಓದಿರಿ: ಜಾಗತಿಕ ಹಸಿವು ಸೂಚ್ಯಂಕ: ನೆರೆಯ ರಾಷ್ಟ್ರಗಳಿಗಿಂತ ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚು

ಕೇಂದ್ರ ಸರ್ಕಾರ ತಿಳಿಸಿರುವ ಪ್ರಕಾರ, ಕೋವಿಡ್​ ಸಂದರ್ಭದಲ್ಲಿ ಇಡೀ ದೇಶದ ಜನರಿಗೆ ಆಹಾರ ಭದ್ರತೆ ಯೋಜನೆ ಒದಗಿಸಲಾಗಿತ್ತು. ಆದರೆ, ವರದಿಯಲ್ಲಿ ಇದನ್ನ ಸಂಪೂರ್ಣವಾಗಿ ಕಡೆಗಣನೆ ಮಾಡಲಾಗಿದ್ದು, ಅಭಿಪ್ರಾಯ ಸಂಗ್ರಹದ ವೇಳೆ ಸರ್ಕಾರದಿಂದ ಯಾವುದೇ ರೀತಿಯ ಮಾಹಿತಿ ಕಲೆ ಹಾಕಿಲ್ಲ ಎಂದು ತಿಳಿಸಿದೆ.

ಕೋವಿಡ್ ಸೋಂಕಿನಿಂದ ಬಳಲಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತ ಉತ್ತಮ ಮಟ್ಟದಲ್ಲಿದೆ. ಜೊತೆಗೆ ಪೌಷ್ಟಿಕಾಂಶ ಅನುಪಾತದಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದೆ.

Govt shocked on India's ranking on Hunger Index
ಅವೈಜ್ಞಾನಿಕ ವರದಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಭಾರತ

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 116 ರಾಷ್ಟ್ರಗಳ ಪೈಕಿ 101 ಆಗಿದೆ. 2020ನೇ ವರ್ಷದ ಅವಧಿಯಲ್ಲಿ 107 ರಾಷ್ಟ್ರಗಳ ಪೈಕಿ ಭಾರತ 94 ಸ್ಥಾನದಲ್ಲಿದ್ದು, ಈಗ 12 ಸ್ಥಾನಗಳ ಕುಸಿತ ಕಂಡಿದೆ. ಈ ವರ್ಷದ ಶ್ರೇಯಾಂಕದ ಪ್ರಕಾರ ಪಾಕಿಸ್ತಾನ (92 ಸ್ಥಾನ) , ನೇಪಾಳ (76ನೇ ಸ್ಥಾನ), ಬಾಂಗ್ಲಾದೇಶ (76ನೇ ಸ್ಥಾನ ) ರಾಷ್ಟ್ರಗಳಿಗಿಂತ ಹಸಿವಿನ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ.

ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್ ಪ್ರಕಾರ ನೋಡುವುದಾದರೆ, 2000ನೇ ಇಸವಿಯಲ್ಲಿ 38.8 ಅಂಕ ಗಳಿಸಿದ್ದ ಭಾರತ, 2012 ಮತ್ತು 2021ರ ನಡುವೆ 27.5 ಮತ್ತು 28.8 ಅಂಕಗಳ ನಡುವೆ ಕಾಣಿಸಿಕೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.