ವಾಷಿಂಗ್ಟನ್: ಭಾರತವು ವೆಚ್ಚದ ಪರಿಣಾಮ ಹಾಗೂ ದೇಶದಲ್ಲೇ ತಯಾರಿಸಬಹುದಾದಂತಹ ಸಮೂಹ ಕ್ಷಿಪ್ರ ಸಾರಿಗೆಗಾಗಿ ವಿದ್ಯುತ್ ಆಧಾರಿತ ತಂತ್ರಜ್ಞಾನವನ್ನು ಎದುರು ನೋಡುತ್ತಿದ್ದೇವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಭಾರತಕ್ಕೆ ಮೂಲಸೌಕರ್ಯ ಮರುನಿರ್ಮಾಣ 2.0', ರೀಇಮೇಜಿನಿಂಗ್ ಇಂಡಿಯಾ 2.0 ಸರಣಿಯ ಭಾಗವಾಗಿ ಅಲ್ಲಿನ ಜನರನ್ನು ಉದ್ದೇಶಿ ಮಾತನಾಡಿದ ಅವರು, ಬೆಟ್ಟ, ಜನದಟ್ಟಣೆ, ನಗರ ಪ್ರದೇಶಗಳಲ್ಲಿ ಪರ್ಯಾಯ ಸಾರಿಗೆ ಪರಿಹಾರವಾಗಿ ರೋಪ್‌ವೇಗಳ ಅಭಿವೃದ್ಧಿಗೆ ಸಾರಿಗೆ ಸಚಿವಾಲಯ ಮುಂದಾಗಿದೆ. ರೋಪ್ ವೇಗಳು, ಕೇಬಲ್ ಕಾರ್ ಮತ್ತು ವಿಶೇಷವಾಗಿ ಲಘು ರೈಲು ಸಾರಿಗೆಯ ತಂತ್ರಜ್ಞಾನದಲ್ಲಿ ಕೆಲಸ ಮಾಡಲು ತುಂಬಾ ಸ್ಪಷ್ಟವಾಗಿ ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲವು ಯುಎಸ್ ಕಂಪನಿಗಳು ತಂತ್ರಜ್ಞಾನದೊಂದಿಗೆ ನಮ್ಮನ್ನ ಸಂಪರ್ಕಿಸಿವೆ ಎಂತಲೂ ಹೇಳಿದ್ದಾರೆ. ಇಂಡಿಯಾ@75 ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಫೌಂಡೇಶನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಡಯಾಸ್ಪೊರಾ ಸ್ಟಡೀಸ್ (FIIDS) ಸಂಸ್ಥೆಗಳು ಸಿಲಿಕಾನ್ ವ್ಯಾಲಿ ಮಾಸಿಕ ಸಂವಾದಕ್ಕೆ ಸಚಿವರನ್ನು ಆಹ್ವಾನಿಸಿತ್ತು.
ನಾವು ತಂತ್ರಜ್ಞಾನದ ಹುಡುಕಾಟದಲ್ಲಿದ್ದೇವೆ. ಎಲೆಕ್ಟ್ರಾನಿಕ್ ವಾಹನಗಳಲ್ಲಿ ವೆಚ್ಚ ಪರಿಣಾಮಕಾರಿಯಾಗಿರುವುದರಿಂದ ಸಾಮೂಹಿಕ ಕ್ಷಿಪ್ರ ಸಾರಿಗೆ (ಸಿಸ್ಟಮ್)ಯನ್ನು ಭಾರತದಲ್ಲಿ ತಯಾರಿಸಬಹುದು ಎಂದಿದ್ದಾರೆ. ಆ ಮೂಲಕ ಎಲೆಕ್ಟ್ರಾನಿಕ್ ವಾಹನಗಳ ಬಗ್ಗೆ ಭಾರತ ಕೈಗೊಳ್ಳುತ್ತಿರುವ ಕ್ರಮಗಳನ್ನು ಸಿಲಿಕಾನ್ ವ್ಯಾಲಿಯ ಭಾರತೀಯ - ಅಮೆರಿಕನ್ನರಿಗೆ ವಿವರಿಸಿದರು.
ದೇಶದಲ್ಲಿ 11 ರೋಪ್‌ವೇ ಯೋಜನೆಗಳು: ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಸಿಕ್ಕಿಂನಲ್ಲಿ ಸಂಪರ್ಕವನ್ನು ಹೆಚ್ಚಿಸಲು 11 ರೋಪ್‌ವೇ ಯೋಜನೆಗಳನ್ನು ಸರ್ಕಾರ ಯೋಜಿಸುತ್ತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳ ದಕ್ಷತೆಯನ್ನು ಹೆಚ್ಚಿಸಲು ಎಲ್ಲಾ ಬಂದರುಗಳು ಮತ್ತು ಒಳನಾಡಿನ ನೀರಿನ ತ್ಯಾಜ್ಯ ಖನಿಜಗಳನ್ನು ಸಂಪರ್ಕಿಸುವ ಸರಕುಗಳ ತ್ವರಿತ ಚಲನೆಯನ್ನು ಸಕ್ರಿಯಗೊಳಿಸಲು ಬಂದರು ಸಂಪರ್ಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
2,050 ಕಿಲೋಮೀಟರ್ ಉದ್ದದ 65 ಯೋಜನೆಗಳನ್ನು ಬಂದರು ಸಂಪರ್ಕಕ್ಕಾಗಿ ಯೋಜಿಸಲಾಗಿದೆ. ಸದ್ಯ ಈ ಅಭಿವೃದ್ಧಿಯ ಯೋಜನೆಗಳು ವಿವಿಧ ಹಂತಗಳ ಕಾಮಗಾರಿಯಲ್ಲಿ ಇವೆ. ಭಾರತವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯುದ್ಧ ವಿಮಾನಗಳಿಗಾಗಿ 29 ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ರಕ್ಷಣಾ ದೃಷ್ಟಿಕೋನದಿಂದ ಅವು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿವೆ. ಅಮೆರಿಕದ ಕಂಪನಿಗಳು ಭಾರತದಲ್ಲಿ ಬಂದು ಹೂಡಿಕೆ ಮಾಡುವಂತೆ ಸಚಿವ ಗಡ್ಕರಿ ಇದೇ ವೇಳೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2024ರ ವೇಳೆಗೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಅಮೆರಿಕ ರಸ್ತೆಗಳಂತೆ ಅಭಿವೃದ್ಧಿ: ನಿತಿನ್ ಗಡ್ಕರಿ