ETV Bharat / bharat

ದೇಶದಲ್ಲಿ ನಿನ್ನೆ 46,759 ಕೋವಿಡ್​ ಸೋಂಕಿತರು ಪತ್ತೆ; ಕೇರಳದಲ್ಲೇ 32,801 ಮಂದಿಗೆ ವೈರಸ್

ದೇಶದಲ್ಲಿನ ಒಟ್ಟು ಕೋವಿಡ್​ ಕೇಸ್​ಗಳ ಸಂಖ್ಯೆ 3,26,49,947ಕ್ಕೆ ಏರಿಕೆಯಾಗಿದೆ. ಆದರೆ ಇವರಲ್ಲಿ 3,18,52,802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

India COVID-19 tracker:
ದೇಶದಲ್ಲಿ ನಿನ್ನೆ 46,759 ಕೋವಿಡ್​ ಸೋಂಕಿತರು ಪತ್ತೆ
author img

By

Published : Aug 28, 2021, 10:08 AM IST

ನವದೆಹಲಿ: ಭಾರತದಲ್ಲಿ ಮತ್ತೆ ಕೋವಿಡ್​ ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮೂರನೇ ಅಲೆಯ ಭೀತಿ ಉದ್ಭವಿಸುತ್ತಿದೆ. ನಿನ್ನೆ ಒಂದೇ ದಿನ 46,759 ಮಂದಿ ಸೋಂಕಿತರು ಪತ್ತೆಯಾಗಿದ್ದು, 509 ಸೋಂಕಿತರು ಬಲಿಯಾಗಿದ್ದಾರೆ. ಈ ಪೈಕಿ ಕೇರಳದಲ್ಲೇ 31,374 ಕೇಸ್​ಗಳು ಹಾಗೂ 179 ಸಾವಿನ ವರದಿಯಾಗಿದೆ.

ಚೇತರಿಕೆ ಪ್ರಮಾಣ ಶೇ.97.56ಕ್ಕೆ ಏರಿಕೆ

ದೇಶದಲ್ಲಿನ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,26,49,947ಕ್ಕೆ ಹಾಗೂ ಮೃತರ ಸಂಖ್ಯೆ 4,37,370ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.97.56 ರಷ್ಟು ಅಂದರೆ 3,18,52,802 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ ಶೇ.1.10 ರಷ್ಟು ( 3,59,775) ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ

62.29 ಕೋಟಿ ಡೋಸ್​ ವ್ಯಾಕ್ಸಿನೇಷನ್

ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾಭಿಯಾನ ಆರಂಭಿಸಲಾಗಿದ್ದು, ಈವರೆಗೆ 62,29,89,134 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 1,03,35,290 ಜನರು ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.