ನವದೆಹಲಿ: ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಅಧ್ಯಕ್ಷತೆ ವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಶೆರ್ಪಾಸ್ ಸಭೆಯೊಂದಿಗೆ ಭಾರತ ತನ್ನ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಅಧ್ಯಕ್ಷತೆಯನ್ನು ಪ್ರಾರಂಭಿಸಲಿದೆ.
-
India kicked off its BRICS Chairship with the inaugural three day long Sherpas’ meeting. Secretary (CPV & OIA) chaired the meeting and introduced our themes, priorities and calendar for #BRICS2021. #BRICSIndia2021 #BRICS@15 pic.twitter.com/FBgHNUNxf9
— Anurag Srivastava (@MEAIndia) February 24, 2021 " class="align-text-top noRightClick twitterSection" data="
">India kicked off its BRICS Chairship with the inaugural three day long Sherpas’ meeting. Secretary (CPV & OIA) chaired the meeting and introduced our themes, priorities and calendar for #BRICS2021. #BRICSIndia2021 #BRICS@15 pic.twitter.com/FBgHNUNxf9
— Anurag Srivastava (@MEAIndia) February 24, 2021India kicked off its BRICS Chairship with the inaugural three day long Sherpas’ meeting. Secretary (CPV & OIA) chaired the meeting and introduced our themes, priorities and calendar for #BRICS2021. #BRICSIndia2021 #BRICS@15 pic.twitter.com/FBgHNUNxf9
— Anurag Srivastava (@MEAIndia) February 24, 2021
ಈ ಬಗ್ಗೆ ಟ್ವೀಟ್ ಮಾಡಿರುವ ಅನುರಾಗ್, "ಶೆರ್ಪಾಸ್ನಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಇಲ್ಲಿ ಕಾರ್ಯದರ್ಶಿ (ಸಿಪಿವಿ ಮತ್ತು ಒಐಎ) ಸಭೆಯ ಅಧ್ಯಕ್ಷತೆ ವಹಿಸಿ ನಮ್ಮ ವಿಷಯಗಳು, ಆದ್ಯತೆಗಳು ಮತ್ತು # BRICS2021 ಕ್ಯಾಲೆಂಡರ್ ಬಗ್ಗೆ ತಿಳಿಸಲಿದ್ದಾರೆ" ಎಂದರು.
"ಮುಂದಿನ ಎರಡು ದಿನಗಳಲ್ಲಿ ನಮ್ಮ ಬ್ರಿಕ್ಸ್ ಪಾಲುದಾರರೊಂದಿಗೆ ಉತ್ಪಾದಕ ಚರ್ಚೆಗಳನ್ನು ಮುಂದುವರಿಸಲು ಭಾರತ ಎದುರು ನೋಡುತ್ತಿದೆ" ಎಂದು ಶ್ರೀವಾಸ್ತವ್ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಇದನ್ನು ಓದಿ: ಪತ್ನಿಗಾಗಿ ಪರ್ವತ ಕೊರೆದ ‘ಮೌಂಟೆನ್ ಮ್ಯಾನ್’: ಗ್ರಾಮಸ್ಥರ ಬಾಯಾರಿಕೆ ನೀಗಿಸಿದ ‘ಚಡಾ ಪಹಾನ್’!
ಫೆಬ್ರವರಿ 19 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಬ್ರಿಕ್ಸ್ 2021 ವೆಬ್‌ಸೈಟ್ ಅನ್ನು ಸುಷ್ಮಾ ಸ್ವರಾಜ್ ಭವನದಲ್ಲಿರುವ ಬ್ರಿಕ್ಸ್ ಸಚಿವಾಲಯದಲ್ಲಿ ಉದ್ಘಾಟಿಸಿದ್ದರು. ಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾವು ಫೆ.22ರಂದು ಬೆಂಬಲ ವ್ಯಕ್ತಪಡಿಸಿತ್ತು. ಐದು ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದ ಜೊತೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿದೆ.
-
India looks forward to continuing productive discussions with our BRICS partners over the next two days.
— Anurag Srivastava (@MEAIndia) February 24, 2021 " class="align-text-top noRightClick twitterSection" data="
">India looks forward to continuing productive discussions with our BRICS partners over the next two days.
— Anurag Srivastava (@MEAIndia) February 24, 2021India looks forward to continuing productive discussions with our BRICS partners over the next two days.
— Anurag Srivastava (@MEAIndia) February 24, 2021
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಗಡಿ ಉದ್ವೇಗವು ಅವರ ಬಹುಪಕ್ಷೀಯ ಸಹಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಪ್ರತಿಕ್ರಿಯಿಸಿ, "ಬ್ರಿಕ್ಸ್ ಪ್ರಭಾವಶಾಲಿ ಗುಂಪಾಗಿ ಮಾರ್ಪಟ್ಟಿದೆ ಮತ್ತು ಬೀಜಿಂಗ್ ಆತಿಥೇಯರಾಗಿ ಭಾರತದ ಪ್ರಯತ್ನಗಳನ್ನು ಬೆಂಬಲಿಸಿದೆ" ಎಂದು ಪ್ರತಿಕ್ರಿಯಿಸಿರುವುದಾಗಿ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ವರದಿ ಮಾಡಿದೆ.
"ಬ್ರಿಕ್ಸ್ ಕಾರ್ಯವಿಧಾನಕ್ಕೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ" ಎಂದು ವಾಂಗ್ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದರು.