ETV Bharat / bharat

ಬಂಡವಾಳ ಹರಿವಿನಿಂದಾಗುವ ಅಪಾಯಗಳನ್ನು ಎದುರಿಸುವ ಉಪಾಯ ಭಾರತಕ್ಕಿದೆ: ಐಎಂಎಫ್​ - ಬಂಡವಾಳ ಹರಿವಿನಿಂದಾಗುವ ಅಪಾಯಗಳನ್ನು ಎದುರಿಸುವ ಉಪಾಯ ಭಾರತಕ್ಕಿದೆ

ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಸಂಖ್ಯೆಯ ವಿದೇಶಿ ನೇರ ಹೂಡಿಕೆ ಪಡೆದಿರುವ ಭಾರತ, ಬಂಡವಾಳ ಹರಿವಿನಿಂದಾಗುವ ಅಪಾಯಗಳನ್ನು ಎದುರಿಸಲು ಕೆಲವು ಸುರಕ್ಷಾ ಕ್ರಮಗಳನ್ನು ಹೊಂದಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬುಧವಾರ ತಿಳಿಸಿದೆ.

IMF
ಅಂತಾರಾಷ್ಟ್ರೀಯ ಹಣಕಾಸು ನಿಧಿ
author img

By

Published : Mar 31, 2022, 10:50 AM IST

ವಾಷಿಂಗ್ಟನ್( ಅಮೆರಿಕ): ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಸಂಖ್ಯೆಯ ವಿದೇಶಿ ನೇರ ಹೂಡಿಕೆಯನ್ನು ಪಡೆದಿರುವ ಭಾರತ, ಬಂಡವಾಳ ಹರಿವಿನಿಂದಾಗುವ ಅಪಾಯಗಳನ್ನು ಎದುರಿಸಲು ಕೆಲವು ಸುರಕ್ಷಾ ಕ್ರಮಗಳನ್ನು ಹೊಂದಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬುಧವಾರ ತಿಳಿಸಿದೆ.

ಬಂಡವಾಳ ಹರಿವು ಹಲವಾರು ಪ್ರಯೋಜನಗಳನ್ನು ಹೊಂದಿದ್ದು, ಅವುಗಳು ಹಣಕಾಸಿಗೆ ಅಗತ್ಯವಿರುವ ಹೂಡಿಕೆಗಳು. ಕೆಲವು ಅಪಾಯಗಳ ವಿರುದ್ಧ ವಿಮೆಯಾಗಿ ಸಹಾಯ ಮಾಡುತ್ತವೆ. ಭಾರತದಲ್ಲಿ ಬಂಡವಾಳ ಹರಿವು ಹೊಂದುವುದರಿಂದ ಹಾಗೂ ಆ ಬಂಡವಾಳದ ಹರಿವನ್ನು ಸ್ವೀಕರಿಸುವುದರಿಂದ ಹಲವಾರು ದೇಶಗಳಿಗೆ ಅನೇಕ ಪ್ರಯೋಜನಗಳಿವೆ ಐಎಂಎಫ್​ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಸುದ್ದಿಗಾರರಿಗೆ ತಿಳಿಸಿದರು.

ಐಎಂಎಫ್​ ಬುಧವಾರ ಬಂಡವಾಳ ಹರಿವಿನ ಉದಾರೀಕರಣ ಮತ್ತು ನಿರ್ವಹಣೆಯ ಕುರಿತಾದ ಸಾಂಸ್ಥಿಕ ನೋಟದ ವಿಮರ್ಶೆ (IV) ಕುರಿತು ಒಂದು ಪ್ರಬಂಧ ಬಿಡುಗಡೆ ಮಾಡಿದೆ. 2012ರಲ್ಲಿ ಈ ವಿಮರ್ಶೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಬಂಡವಾಳ ಹರಿವುಗಳಿಗೆ ಸಂಬಂಧಿಸಿದ ನೀತಿಗಳ ಬಗ್ಗೆ ಹಣಕಾಸು ಸಲಹೆಗಳಿಗೆ ಇದು ಆಧಾರವಾಗಿದೆ. ಪಾಳಿಸಿ ಮೇಕರ್ಸ್​ಗೆ ಟೂಲ್​ಕಿಟ್​ ವಿಸ್ತರಿಸುವ ಪ್ರಮುಖ ಬದಲಾವಣೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೋಪಿನಾಥ್​, ದೊಡ್ಡ ಪ್ರಮಾಣದ ಬಂಡವಾಳ ಒಳಹರಿವು ಹೊಂದುವುದರಿಂದ ಹಲವು ರೀತಿಯ ಹಣಕಾಸಿನ ಅಪಾಯಗಳಿವೆ. ಭಾರತದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯ ಬಂಡವಾಳ ನಿರ್ಬಂಧಗಳು ಜಾರಿಯಲ್ಲಿವೆ. ಹೊರಗಿನ ಪರಿಸರ ಬದಾಲಾದ ಸಂದರ್ಭ ಸರ್ಕಾರ ಈ ನಿರ್ಬಂಧಗಳನ್ನು ಪೂರ್ವಭಾವಿಯಾಗಿ ಬಳಸಿಕೊಳ್ಳುತ್ತದೆ. ಕಾರ್ಪೊರೇಟ್‌ಗಳು ಮಾಡಬಹುದಾದ ಬಾಹ್ಯ ಸಾಲದ ಮೊತ್ತದ ಮೇಲೆ ನಿರ್ಬಂಧಗಳನ್ನು ಹಾಕುತ್ತದೆ.

ಇದನ್ನೂ ಓದಿ: ರೈಲಿನಲ್ಲಿ ಮಹಿಳೆಯ ಕೆನ್ನೆಗೆ ಮುತ್ತು: ಏಳು ವರ್ಷ ವಿಚಾರಣೆ, ಈಗ ಶಿಕ್ಷೆ ಪ್ರಕಟ

ಭಾರತದ ಆರ್ಥಿಕತೆಯು ಬಂಡವಾಳ ಹರಿವಿನ ವಿಷಯದಲ್ಲಿ ಕೆಲವು ಸುರಕ್ಷತೆಗಳನ್ನು ಹೊಂದಿದೆ. ಭಾರತ ತನ್ನ ಬಂಡವಾಳ ಖಾತೆಗಳನ್ನು ಉದಾರಿಕರಣಗೊಳಿಸುವ ಕಾರ್ಯದಲ್ಲಿದೆ. ಅದರ ಹಣಕಾಸು ಮಾರುಕಟ್ಟೆಗಳು ಹೆಚ್ಚಾಗುತ್ತಿದ್ದಂತೆ, ಅದರ ಹಣಕಾಸು ಸಂಸ್ಥೆಗಳು ಕೂಡ ಹೆಚ್ಚಾಗುತ್ತವೆ. ಆಗ ಸಾಮಾನ್ಯವಾಗಿ ಬಂಡವಾಳ ಹರಿವು ಹೆಚ್ಚಾಗುತ್ತದೆ ಎಂದು ಗೋಪಿನಾಥ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.