ನವದೆಹಲಿ : ಇಂದು ರಾಷ್ಟ್ರೀಯ ಮತದಾರರ ದಿನ. ಪ್ರತಿ ವರ್ಷ ಹೆಚ್ಚಿನ ಯುವ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಜನವರಿ 25ರಂದು ರಾಷ್ಟ್ರೀಯ ವೋಟರ್ಸ್ ಡೇ ಆಚರಣೆ ಮಾಡಲಾಗ್ತದೆ.
ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ಮಾತನಾಡಿದರು.
ಈ ವೇಳೆ ದೇಶದಲ್ಲಿ 95.3 ಕೋಟಿಗೂ ಅಧಿಕ ಮತದಾರರಿದ್ದು, ಇದರಲ್ಲಿ 49 ಕೋಟಿ ಪುರುಷರು ಹಾಗೂ 46 ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದು ತಿಳಿಸಿದರು. ಜೊತೆಗೆ ದೇಶದಲ್ಲಿ 1.92 ಕೋಟಿ ಹಿರಿಯ ನಾಗರಿಕ ವೋಟರ್ಸ್ ಇರುವ ಮಾಹಿತಿ ಹಂಚಿಕೊಂಡರು.
-
Message from the Chief Election Commissioner of India Shri Sushil Chandra on the eve of 12th National Voters’ Day.
— Election Commission of India #SVEEP (@ECISVEEP) January 24, 2022 " class="align-text-top noRightClick twitterSection" data="
#NationalVotersDay #NVD2022 #ECI #ElectionCommissionOfIndia pic.twitter.com/6OXgzZVkcC
">Message from the Chief Election Commissioner of India Shri Sushil Chandra on the eve of 12th National Voters’ Day.
— Election Commission of India #SVEEP (@ECISVEEP) January 24, 2022
#NationalVotersDay #NVD2022 #ECI #ElectionCommissionOfIndia pic.twitter.com/6OXgzZVkcCMessage from the Chief Election Commissioner of India Shri Sushil Chandra on the eve of 12th National Voters’ Day.
— Election Commission of India #SVEEP (@ECISVEEP) January 24, 2022
#NationalVotersDay #NVD2022 #ECI #ElectionCommissionOfIndia pic.twitter.com/6OXgzZVkcC
ಈಗಾಗಲೇ ಘೋಷಣೆಯಾಗಿರುವ ಪಂಚರಾಜ್ಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಕೋವಿಡ್ ಸುರಕ್ಷಿತ ಚುನಾವಣೆ ನಡೆಸಲು ನಾವು ಸಿದ್ಧರಾಗಿದ್ದು, ಇದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆ ಈಗಾಗಲೇ ಬಹುತೇಕ ಪೂರ್ಣಗೊಂಡಿವೆ ಎಂದರು.
ಇದನ್ನೂ ಓದಿರಿ: ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ಬಡ ಪ್ರತಿಭೆಗೆ 'ಬೊಲೆರೋ' ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ!
ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಕೋವಿಡ್ ಆರ್ಭಟ ಜೋರಾಗಿದ್ದು, ಇದರ ಮಧ್ಯೆ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ.
ಆದರೆ, ಮತದಾರರ ಸಹಕಾರದಿಂದಾಗಿ ಈವರೆಗೆ ಎಲ್ಲ ಚುನಾವಣೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇದೀಗ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲೂ ಅದೇ ರೀತಿಯಲ್ಲಿ ಚುನಾವಣೆ ನಡೆಸಲು ಸಜ್ಜಾಗಿದ್ದೇವೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ