ETV Bharat / bharat

ದೇಶದಲ್ಲಿ ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ಶೇ 94 ಚೇತರಿಕೆ ಪ್ರಮಾಣ - coronavirus affected in India last 24 hours

ಇಂದು ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,62,664 ರೋಗಿಗಳು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

Covid Update
ಇಂದು ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ
author img

By

Published : Jun 9, 2021, 11:32 AM IST

ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ದಿನನಿತ್ಯ ನಾಲ್ಕು ಲಕ್ಷದವರೆಗೂ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿತ್ತು. ನಿನ್ನೆ 86,498 ಕೇಸ್​ಗಳು ಪತ್ತೆಯಾಗಿ ಕೊಂಚ ನಿರಾಳ ಎನ್ನುವಷ್ಟರಲ್ಲಿ ಮತ್ತೆ ಇಂದು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಈವರೆಗಿನ ಅಂಕಿಅಂಶ:

ಕಳೆದೊಂದು ದಿನದ ಅವಧಿಯಲ್ಲಿ ದೇಶದಲ್ಲಿ 92,596 ಕೇಸ್​ಗಳು ಪತ್ತೆಯಾಗಿವೆ. ಸಾವಿನ ಪ್ರಮಾಣವೂ ಏರಿಕೆಯಾಗಿದ್ದು, 2,219 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 2,90,89,069 ಹಾಗೂ ಮೃತರ ಸಂಖ್ಯೆ 3,53,528 ಕ್ಕೆ ಏರಿಕೆಯಾಗಿದೆ.

ಇಂದು 1,62,664 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಸದ್ಯ ಭಾರತದಲ್ಲಿ 12,31,415 ಕೊರೊನಾ ಕೇಸ್​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ ಪರೀಕ್ಷೆ:

ಜೂನ್ 8 ರವರೆಗೆ 37,01,93,563 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 19,85,967 ಸ್ಯಾಂಪಲ್ಸ್​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ICMR ತಿಳಿಸಿದೆ.

24 ಕೋಟಿ ಡೋಸ್ ವ್ಯಾಕ್ಸಿನೇಷನ್​​

ದೇಶಾದ್ಯಂತ ಈವರೆಗೆ ಕೋವಿಡ್​ ಲಸಿಕೆಯ 23,90,58,360 ಡೋಸ್​ಗಳನ್ನು ನೀಡಲಾಗಿದ್ದು, 18.93 ಕೋಟಿ ಮಂದಿಗೆ ಮೊದಲ ಡೋಸ್​ ಹಾಗೂ 4.65 ಕೋಟಿ ಜನರು ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.