ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದ್ದು 4,575 ಹೊಸ ಪ್ರಕರಣಗಳು ದಾಖಲಾಗಿವೆ. 145 ಮಂದಿ ಮೃತಪಟ್ಟಿದ್ದಾರೆ. ನಿನ್ನೆ 7,416 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಚೇತರಿಕೆಯ ದರವು ಶೇ.98.69ಕ್ಕೆ ತಲುಪಿದೆ. ಇನ್ನು, ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.11ಕ್ಕೆ ತಗ್ಗಿದೆ. ದೈನಂದಿನ ಸೋಂಕಿತರ ದರವು ಶೇ.0.51 ರಷ್ಟಿದ್ದರೆ ವಾರದ ಧನಾತ್ಮಕತೆಯ ದರವು ಶೇ.0.62 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
- ಒಟ್ಟು ಪ್ರಕರಣಗಳು: 4,29,75,883
- ಒಟ್ಟು ಸಾವುಗಳು: 5,15,355
- ಸಕ್ರಿಯ ಪ್ರಕರಣಗಳು: 46,962
- ವಸೂಲಿ: 4,24,13,566
ಲಸಿಕೆ ನೀಡಿಕೆ ಪ್ರಕ್ರಿಯೆ ದೇಶದಲ್ಲಿ ಭರದಿಂದ ಸಾಗುತ್ತಿದ್ದು, ನಿನ್ನೆ 18,69,103 ಡೋಸ್‌ಗಳನ್ನು ವಿತರಿಸಲಾಗಿದೆ. ಒಟ್ಟು ಲಸಿಕೆ ನೀಡಿಕೆ ಸಂಖ್ಯೆ 1,79,33,99,555ಕ್ಕೆ ತಲುಪಿದೆ.
ಜಾಗತಿಕವಾಗಿ ಸೋಂಕಿತರ ಸಂಖ್ಯೆ ಹೆಚ್ಚಳ: ಜಗತ್ತಿನಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹೊಸದಾಗಿ 16,02,748 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 45 ಕೋಟಿ ತಲುಪಿದೆ. ಇನ್ನೂ 6,812 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 60,35,954ಕ್ಕೆ ಏರಿಕೆಯಾಗಿದೆ.
- ಜರ್ಮನಿಯೊಂದರಲ್ಲೇ ಒಂದೇ ದಿನದಲ್ಲಿ 1,93,013 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 583 ಮಂದಿ ಸಾವು
- ಅಮೆರಿಕದಲ್ಲಿ 29,632 ಮಂದಿಗೆ ಸೋಂಕು ತಗಲಿದೆ. 1,128 ಸೋಂಕಿತರು ಸಾವನ್ನಪ್ಪಿದ್ದಾರೆ
- ರಷ್ಯಾದಲ್ಲಿ ಒಟ್ಟು 66,576 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 652 ಜನರು ಸಾವನ್ನಪ್ಪಿದ್ದಾರೆ
- ಬ್ರೆಜಿಲ್‌ನಲ್ಲಿ 75,495 ಮಂದಿಗೆ ಸೋಂಕು ದೃಢಪಟ್ಟಿದ್ದು, 518 ಮಂದಿ ಬಲಿಯಾಗಿದ್ದಾರೆ
ಇದನ್ನೂ ಓದಿ: ದೇಶದಲ್ಲಿ 5,921 ಕೋವಿಡ್ ಪ್ರಕರಣ, 289 ಸೋಂಕಿತರ ಸಾವು