ETV Bharat / bharat

ಸೋಂಕಿತರ ಸಂಖ್ಯೆ ತಗ್ಗುತ್ತಿದ್ದರೂ ನಿಲ್ಲದ ಸಾವು.. ದೇಶದಲ್ಲಿ ಮತ್ತೆ 4,194 ಮಂದಿ ಕೊರೊನಾಗೆ ಬಲಿ - ದೇಶದಲ್ಲಿ ಮತ್ತೆ 4,194 ಮಂದಿ ಕೊರೊನಾಗೆ ಬಲಿ

ದೇಶದಲ್ಲಿ ನಿನ್ನೆ ಒಂದೇ ದಿನ 2,57,299 ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, ಮತ್ತೆ 4,194 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Total number of corona cases, deaths, Vaccination in India
ದೇಶದಲ್ಲಿ ಮತ್ತೆ 4,194 ಮಂದಿ ಕೊರೊನಾಗೆ ಬಲಿ
author img

By

Published : May 22, 2021, 9:51 AM IST

ನವದೆಹಲಿ: ಕೆಲ ದಿನಗಳಿಂದ ದೇಶಾದ್ಯಂತ ದಿನವೊಂದರಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷ ಗಡಿಯಿಂದ ಕೆಳಗಿಳಿದಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ.

ಕಳೆದ 24 ಗಂಟೆಗಳ ಅವಧಿಯಲ್ಲಿ 2,57,299 ಹೊಸ ಕೇಸ್​ಗಳು ಪತ್ತೆಯಾಗಿದ್ದು, ಮತ್ತೆ 4,194 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 2,62,89,290 ಹಾಗೂ ಮೃತರ ಸಂಖ್ಯೆ 2,95,525ಕ್ಕೆ ಏರಿಕೆಯಾಗಿದೆ.

  • " class="align-text-top noRightClick twitterSection" data="">

ಒಂದೇ ದಿನ 3,57,630 ಸೋಂಕಿತರು ಗುಣಮುಖ

ಶುಕ್ರವಾರ ಹೊಸದಾಗಿ ಪತ್ತೆಯಾದ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಜಾಸ್ತಿಯಿದ್ದು, 3,57,630 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟು 2,30,70,365 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 29,23,400 ಕೋವಿಡ್​ ಕೇಸ್​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

19 ಕೋಟಿ ಮಂದಿಗೆ ಲಸಿಕೆ

ಲಸಿಕೆಯ ಅಭಾವದಿಂದಾಗಿ ದೇಶಾದ್ಯಂತ ನಿಧಾನಗತಿಯಲ್ಲಿ ವ್ಯಾಕ್ಸಿನೇಷನ್​ ನಡೆಯುತ್ತಿದ್ದು, ಇಲ್ಲಿಯವರೆಗೆ 19,33,72,819 ಮಂದಿ ಲಸಿಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.