ETV Bharat / bharat

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್‌ ಸೋಂಕು: 20,409 ಹೊಸ ಪ್ರಕರಣ, 47 ಸಾವು - ಕೊರೊನಾ ಸಕ್ರಿಯ ಪ್ರಕರಣಗಳು

ದೇಶದಲ್ಲಿ ಕಳೆದೊಂದು ದಿನದಲ್ಲಿ ಕಂಡುಬಂದ ಕೋವಿಡ್ ಪ್ರಕರಣಗಳ ಮಾಹಿತಿ ಇಲ್ಲಿದೆ.

ಕೋವಿಡ್
COVID 19
author img

By

Published : Jul 29, 2022, 11:11 AM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,409 ಹೊಸ ಕೋವಿಡ್‌ ಕೇಸ್​​​ಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ 4,39,79,730 ಕ್ಕೆ ಏರಿಕೆಯಾಗಿದೆ. 47 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸದ್ಯಕ್ಕೆ ದೇಶದಲ್ಲಿ 1,43,988 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳ ಅವಧಿಯಲ್ಲಿ 2,335 ಸಕ್ರಿಯ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದೇಶಾದ್ಯಂತ ಈವರೆಗೆ ಒಟ್ಟು 4,33,09,484 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಾವಿನ ಪ್ರಮಾಣ ಶೇ. 1.20 ರಷ್ಟಿದ್ದರೆ, ಚೇತರಿಕೆ ದರ ಶೇ. 98.48 ರಷ್ಟಿದೆ.

ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 203.60 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಗುರುವಾರ 38,63, 960 ಡೋಸ್​ ಲಸಿಕೆ ನೀಡಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್​​​ ಮೆಡಿಕಲ್​ ರಿಸರ್ಚ್ ​ ಪ್ರಕಾರ, ಜುಲೈ 28 ರ ವರೆಗೆ ಒಟ್ಟು 87,44,06,798 ಮಂದಿಯನ್ನ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ 3,98,761 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ದೆಹಲಿ ಕೋವಿಡ್​ ವರದಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ 1,128 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 19,51,930 ಕ್ಕೆ ಏರಿಕೆಯಾಗಿದೆ. ನಿನ್ನೆ 17,188 ಮಂದಿಯನ್ನ ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಟ್ಟು 26,307 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 116 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಒಡಿಶಾದಲ್ಲಿ 1,020 ಕೇಸ್​ಗಳು ವರದಿಯಾಗಿವೆ.

ಇದನ್ನೂ ಓದಿ: ಕೊರೊನಾ ನಂತರ ರೈತನ ಕೈಹಿಡಿದ ಅನಾನಸ್.. ಬೆಳೆ ಉತ್ತೇಜನಕ್ಕೆ ಎಂ.ಡಿ - 2 ತಳಿ ಪರಿಚಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.