ETV Bharat / bharat

ದೇಶದಲ್ಲಿ ಸಾವಿರ ಗಡಿ ದಾಟಿದ ಒಮಿಕ್ರಾನ್​​ ಪ್ರಕರಣ: ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಕೇಸ್​​ - ಭಾರತದ ಒಮಿಕ್ರಾನ್ ಪ್ರಕರಣಗಳ ವರದಿ

Omicron cases in India: ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಸಾವಿರ ಗಡಿ ದಾಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1,270 ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Dec 31, 2021, 11:04 AM IST

ನವದೆಹಲಿ: ದೇಶದಲ್ಲಿ ಹೊಸದಾಗಿ 16,764 ಹೊಸ ಕೋವಿಡ್​​-19 ಪ್ರಕರಣಗಳು ಪತ್ತೆಯಾಗಿವೆ. 220 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 4,81,080ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 7,585 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 3,42,66,363 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ ದೇಶದಲ್ಲಿ 91,361 ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆಯ ಪ್ರಮಾಣ ಶೇ. 98.36 ರಷ್ಟಿದೆ.

1,270ಕ್ಕೆ ಏರಿಕೆಯಾದ ಒಮಿಕ್ರಾನ್ ಕೇಸ್​​:

ದೇಶದಲ್ಲಿ ಒಮಿಕ್ರಾನ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ನಿನ್ನೆ (ಗುರುವಾರ) 309 ಹೊಸ ಒಮಿಕ್ರಾನ್ ಕೇಸ್​​ಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,270ಕ್ಕೆ ಏರಿದೆ. ಈ ಪೈಕಿ 374 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ರಾಜ್ಯವಾರು ಒಮಿಕ್ರಾನ್​​ ಪ್ರಕರಣಗಳ ಮಾಹಿತಿ

  • COVID19 | India reports 16,764 new cases, 7,585 recoveries and 220 deaths in the last 24 hours.

    Active caseload currently stands at 91,361. Recovery Rate currently at 98.36%

    Omicron case tally stands at 1,270. pic.twitter.com/zbKKRiP4kW

    — ANI (@ANI) December 31, 2021 " class="align-text-top noRightClick twitterSection" data=" ">
  • ಮಹಾರಾಷ್ಟ್ರ 450 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ.
  • ದೆಹಲಿ-320
  • ಕೇರಳ-109
  • ಗುಜರಾತ್-97
  • ರಾಜಸ್ಥಾನ-69
  • ತೆಲಂಗಾಣ-62

ಒಟ್ಟು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ರೂಪಾಂತರಿ ಒಮಿಕ್ರಾನ್​​ ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳೆಂದರೆ ..

ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಉತ್ತರಾಖಂಡ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ಲಡಾಖ್, ಮಣಿಪುರ ಮತ್ತು ಪಂಜಾಬ್.

ಇದನ್ನೂ ಓದಿ: ಡಿ.28ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್​ ದೃಢ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.