ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ. ಸುಮಾರು 558 ದಿನಗಳಿಗಿಂತ ಅತ್ಯಂತ ಕಡಿಮೆ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, 6,822 ಸೋಂಕಿತರು ದೇಶದಲ್ಲಿ ಹೊಸದಾಗಿ ಪತ್ತೆಯಾಗಿದ್ದು, 10 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ 220 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
-
#Unite2FightCorona#LargestVaccineDrive #OmicronVariant
— Ministry of Health (@MoHFW_INDIA) December 7, 2021 " class="align-text-top noRightClick twitterSection" data="
𝗖𝗢𝗩𝗜𝗗 𝗙𝗟𝗔𝗦𝗛https://t.co/urAq6j99aW pic.twitter.com/ksMMiUpJM7
">#Unite2FightCorona#LargestVaccineDrive #OmicronVariant
— Ministry of Health (@MoHFW_INDIA) December 7, 2021
𝗖𝗢𝗩𝗜𝗗 𝗙𝗟𝗔𝗦𝗛https://t.co/urAq6j99aW pic.twitter.com/ksMMiUpJM7#Unite2FightCorona#LargestVaccineDrive #OmicronVariant
— Ministry of Health (@MoHFW_INDIA) December 7, 2021
𝗖𝗢𝗩𝗜𝗗 𝗙𝗟𝗔𝗦𝗛https://t.co/urAq6j99aW pic.twitter.com/ksMMiUpJM7
ಈಗ ದೇಶದಲ್ಲಿ ಸಕ್ರಿಯ ಸೋಂಕಿತರು 95,014 ಮಂದಿ ಇದ್ದು, ಈ ಸೋಂಕಿತರ ಸಂಖ್ಯೆ 554 ದಿನಗಳಲ್ಲೇ ಅತ್ಯಂತ ಕಡಿಮೆ. ಈಗ ಒಟ್ಟು ಸೋಂಕಿತರಲ್ಲಿ ಶೇಕಡಾ 0.27ರಷ್ಟು ಮಂದಿ ಮಾತ್ರ ಸಕ್ರಿಯ ಸೋಂಕಿತರಿದ್ದಾರೆ.
ದಿನಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 0.63ರಷ್ಟಿದ್ದು, ಒಂದು ವಾರದಲ್ಲಿ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 0.78ರಷ್ಟಿದೆ. ಈವರೆಗೆ 3 ಕೋಟಿ 40 ಲಕ್ಷ ಮಂದಿ ಚೇತರಿಕೆ ಕಂಡಿದ್ದು, ಚೇತರಿಕೆ ಕಾಣುವವರ ಪ್ರಮಾಣ 2020ರ ಮಾರ್ಚ್ನಲ್ಲಿದ್ದ ಅಂಕಿ ಅಂಶಗಳಿಗಿಂತ ಹೆಚ್ಚಾಗಿದೆ.
ಕೋವಿಡ್ ಟೆಸ್ಟಿಂಗ್: ಈವರೆಗೆ ಸುಮಾರು 64,94,47,014 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸೋಮವಾರ ಒಂದೇ ದಿನ 10,79,384 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ನೀಡಿದೆ. ಇದರೊಂದಿಗೆ ಸುಮಾರು 128.76 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ.
ಇದನ್ನೂ ಓದಿ: ನಿಮ್ಮ ಕಾರಿಗೆ ಉತ್ತಮ ವಿಮಾ ಪಾಲಿಸಿ ಆಯ್ಕೆ ಬಗೆ ಹೇಗೆ? ಇಲ್ಲಿದೆ ಉತ್ತರ..