ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾವುದೇ ರಾಷ್ಟ್ರವೂ ನಮ್ಮ ದೇಶದ ಆಂತರಿಕ ವಿಚಾರದಲ್ಲಿ ತಲೆ ಹಾಕಬಾರದೆಂದು ಕೆಲವು ದಿನಗಳ ಹಿಂದೆ ಭಾರತ ಸರ್ಕಾರ ಸೂಚನೆ ನೀಡಿತ್ತು. ಆದರೆ ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ದೇಶದ ಆಂತರಿಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ.
ತಮ್ಮ ದೇಶದಲ್ಲಿರುವ ಮುಸ್ಲಿಂ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತವನ್ನು ಮತ್ತೆ ಒತ್ತಾಯಿಸುತ್ತಿದ್ದೇವೆ. ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರ ನಡೆಸುವವರ ಮತ್ತು ದ್ವೇಷ ಪ್ರಚೋದಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಟ್ವೀಟ್ ಮಾಡಿದೆ.
-
Our response to media queries regarding recent statement by General Secretariat of the OIC: https://t.co/jXZh7Axr5G pic.twitter.com/hqPyBJSZUA
— Arindam Bagchi (@MEAIndia) February 15, 2022 " class="align-text-top noRightClick twitterSection" data="
">Our response to media queries regarding recent statement by General Secretariat of the OIC: https://t.co/jXZh7Axr5G pic.twitter.com/hqPyBJSZUA
— Arindam Bagchi (@MEAIndia) February 15, 2022Our response to media queries regarding recent statement by General Secretariat of the OIC: https://t.co/jXZh7Axr5G pic.twitter.com/hqPyBJSZUA
— Arindam Bagchi (@MEAIndia) February 15, 2022
ಇಸ್ಲಾಮಿಕ್ ಸಹಕಾರ ಸಂಘಟನೆಯ ಕಾರ್ಯಾಲಯ ಕೋಮುವಾದಿ ಮನಸ್ಥಿತಿಯನ್ನು ಹೊಂದಿದೆ. ಇದು ವಾಸ್ತವದ ಕುರಿತು ತಿಳಿದುಕೊಳ್ಳಲು ಬಯಸುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಭಾರತದ ವಿರುದ್ಧ ಹರಿಹಾಯುವುದನ್ನು ಮುಂದುವರೆಸಿವೆ. ಇದರಿಂದಾಗಿ ತನಗೆ ತಾನೇ ಹಾನಿಯುಂಟು ಮಾಡಿಕೊಳ್ಳುತ್ತದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಪಿಯು, ಪದವಿ ಕಾಲೇಜು ಪುನಾರಂಭ: ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ