ನವದೆಹಲಿ: ಲಡಾಕ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ಇಂದು 9ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಯಲಿದ್ದು, ಇಲ್ಲಿಯವರೆಗೆ ನಡೆದಿರುವ ಸಭೆಗಳಲ್ಲಿ ಯಾವುದೇ ರೀತಿಯ ಅಂತಿಮ ನಿರ್ಣಯ ಕೈಗೊಳ್ಳದ ಕಾರಣ ಇಂದಿನ ಮಾತುಕತೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಓದಿ: ಚೀನಾ ಆಕ್ರಮಣಕಾರಿಯಾಗಿದ್ದರೆ ನಮ್ಮ ಪ್ರತಿಕ್ರಿಯೆಯೂ ಹಾಗೆಯೇ ಇರಲಿದೆ: ಆರ್ಕೆಎಸ್ ಭದೌರಿಯಾ
ಈಗಾಗಲೇ ಉಭಯ ಸೇನೆ ಮಧ್ಯೆ 8 ಸುತ್ತಿನ ಮಾತುಕತೆ ನಡೆದಿದ್ದು, ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ) ವಿಚಾರವಾಗಿ ಈ ಮಾತುಕತೆ ನಡೆಯುತ್ತಿದೆ. ಈ ಹಿಂದೆ ನವೆಂಬರ್ 6ರಂದು ಕೊನೆ ಸಭೆ ನಡೆದಿದ್ದು, ಅಲ್ಲಿಂದ ಇಚೇಗೆ ಯಾವುದೇ ಮಾತುಕತೆ ನಡೆದಿಲ್ಲ.
ಬೆಳಿಗ್ಗೆ 9.30 ರ ಸುಮಾರಿಗೆ ಮೊಲ್ಡೊದಲ್ಲಿ ಪ್ರಾರಂಭವಾಗಲಿದ್ದು, ಕಾರ್ಪ್ಸ್ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆ ಇದಾಗಿದೆ. 2020ರ ಗಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು. ಇದಾದ ಬಳಿಕ ಮೇಲಿಂದ ಮೇಲೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ.
ಪೂರ್ವ ಲಡಾಖ್ನ ವಿವಿಧ ಸ್ಥಳಗಳಲ್ಲಿ ಈಗಾಗಲೇ ಭಾರತೀಯ ಸೇನೆ 50 ಸಾವಿರ ಸೈನಿಕರಿಗೆ ನಿಯೋಜನೆ ಮಾಡಿದ್ದು, ಯುದ್ಧದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ಅರುಣಾಚಲಪ್ರದೇಶದ ವಿವಾದಿತ ಸ್ಥಳದಲ್ಲಿ ಚೀನಾ ಕೆಲವೊಂದು ಮನೆ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನು ಚೀನಾ ಆಕ್ರಮಣಕಾರಿಯಾಗಿದ್ದರೆ ನಮ್ಮ ಪ್ರತಿಕ್ರಿಯೆಯೂ ಸಹ ಅದೇ ರೀತಿಯಾಗಿರುತ್ತದೆ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಸ್ ಭದೌರಿಯಾ ಹೇಳಿದ್ದಾರೆ.