ETV Bharat / bharat

ಚೀನಾ ಮತ್ತೆ ಗಡಿ ತಂಟೆ: ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ, ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್​ ಆಗ್ರಹ - ರಾಜನಾಥ್​ ಸಿಂಗ್​ ಉನ್ನತ ಮಟ್ಟದ ಸಭೆ

ಅರುಣಾಚಲಪ್ರದೇಶದಲ್ಲಿ ಚೀನಾ ಸೈನಿಕರು ಉದ್ಧಟತನ ಮೆರೆದ ಬೆನ್ನಲ್ಲೇ ಅಲರ್ಟ್​ ಆಗಿರುವ ಕೇಂದ್ರ ಸರ್ಕಾರ ಸೇನಾಧಿಕಾರಿಗಳ ಜೊತೆ ಸಭೆ ನಡೆಸಿದೆ. ಅಲ್ಲದೇ ಗಡಿಯಲ್ಲಿ ಜೆಟ್​ ವಿಮಾನಗಳನ್ನು ಸನ್ನದ್ಧ ರೂಪದಲ್ಲಿಟ್ಟಿದೆ.

india china face off in tawang sector
ಚೀನಾ ಮತ್ತೆ ಗಡಿ ತಂಟೆ
author img

By

Published : Dec 13, 2022, 11:33 AM IST

ನವದೆಹಲಿ: ಗಡಿಯಲ್ಲಿ ಚೀನಾ ಮತ್ತೆ ಖ್ಯಾತೆ ತೆಗೆದಿದೆ. ಅರುಣಾಚಲಪ್ರದೇಶದ ವಾಸ್ತವ ಗಡಿರೇಖೆ ದಾಟಿ ಬಂದ ಚೀನಾ ಸೈನಿಕರನ್ನು, ಭಾರತೀಯ ಸೈನಿಕರು ತಡೆದಾಗ ಹೊಡೆದಾಟ ನಡೆದಿದೆ. ಗಲಾಟೆಯಲ್ಲಿ ಉಭಯ ಸೈನಿಕರು ಗಾಯಗೊಂಡಿದ್ದಾರೆ. ಇದೀಗ ಸಂಸತ್​ನಲ್ಲಿ ಸದ್ದು ಮಾಡುತ್ತಿದೆ. ಸದನಗಳಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್​ ಕೇಳಿದೆ.

ಸಂಸದ ಮನೀಶ್​ ತಿವಾರಿ ಅರುಣಾಲಪ್ರದೇಶದಲ್ಲಿ ಚೀನಾದ ಗಡಿ ತಂಟೆ ಬಗ್ಗೆ ಆತಂಕವಿದೆ. ಆ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ಸಂಸತ್ತಿನಲ್ಲಿ ಚರ್ಚೆ ಮೂಲಕ ಈ ಬಗ್ಗೆ ಗಮನ ಸೆಳೆಯಬೇಕಾಗಿದೆ. ಹಲವು ಸುತ್ತಿನ ಮಾತುಕತೆಯ ಬಳಿಕವೂ ಚೀನಾ ಕಾಲುಕೆರೆದು ದೇಶದ ಮೇಲೆ ಬರುತ್ತಿರೋದೇಕೆ ಎಂದು ನೋಟಿಸ್​ನಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಚೀನಾ ತಂಟೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಉಭಯ ಸದನಗಳಿಂದ ಕಾಂಗ್ರೆಸ್​ ನೋಟಿಸ್​ ನೀಡಿದೆ.

ರಾಜನಾಥ್​ ಸಿಂಗ್​ ಉನ್ನತ ಮಟ್ಟದ ಸಭೆ: ಚೀನಾ ಗಡಿಯಲ್ಲಿ ಕಿರಿಕ್​ ನಡೆಸಿದ ಬೆನ್ನಲ್ಲೇ, ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ​ಅವರು ಇಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್​) ಜನರಲ್ ಅನಿಲ್ ಚೌಹಾಣ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ದಾಟಿ ಬಂದ ಚೀನಾ ಸೈನಿಕರು ಹೊಡೆದಾಡಿದ್ದರ ಬಗ್ಗೆ ಸೇನಾ ಮುಖ್ಯಸ್ಥರಲ್ಲಿ ಸಿಂಗ್​ ವಿವರಣೆ ಕೇಳಿದರು. ಅಲ್ಲದೇ, ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಹಾಗೂ 2 ಗಂಟೆಗೆ ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಹೇಳಿಕೆ ನೀಡಲಿದ್ದಾರೆ.

ಗಡಿಯಲ್ಲಿ ಸೇನಾ ವಿಮಾನಗಳ ಸಿದ್ಧತೆ: ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಚೀನಾಗೆ ಸೆಡ್ಡು ಹೊಡೆಯಲು ಭಾರತೀಯ ಸೇನೆ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಸೇನಾ ಜೆಟ್​ ವಿಮಾನಗಳನ್ನು ಸನ್ನದ್ಧವಾಗಿಟ್ಟಿದೆ. 2-3 ದಿನಗಳಿಂದ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಕಾರಣ ಸೇನೆ ಮುನ್ನೆಚ್ಚರಿಕೆ ವಹಿಸಿದೆ.

ಕೆಲವು ದಿನಗಳಿಂದ ಚೀನಾದ ಡ್ರೋನ್​ಗಳು ಅರುಣಾಚಲಪ್ರದೇಶದಲ್ಲಿ ಗಡಿ ರೇಖೆ ದಾಟಿ ಹಾರಿ ಬರುತ್ತಿವೆ. ಇದು ವಾಯುಗಡಿ ಉಲ್ಲಂಘನೆಯಾಗಿದ್ದು, ಈ ಬೆದರಿಕೆಯನ್ನು ತಡೆಯಲು ಭಾರತೀಯ ಸೇನೆ ಸುಕೋಯ್​30ಎಂಕೆಐ ಜೆಟ್​ ವಿಮಾನಗಳನ್ನು ಸನ್ನದ್ಧವಾಗಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಓದಿ: ಕಾಶ್ಮೀರದ ತುಬಲ್​ ಪ್ರದೇಶದಲ್ಲಿ ಐಇಡಿ ಸ್ಫೋಟಕ ವಸ್ತು ಪತ್ತೆ: ಬಿಡಿಎಸ್​ ಕಾರ್ಯಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.