ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹಗುರ ಯುದ್ಧ ವಿಮಾನ (ಎಲ್‌ಸಿಎ)ದ ಎರಡನೇ ತಯಾರಿಕಾ ಕಾರ್ಯಕ್ಷೇತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಉದ್ಘಾಟಿಸಿದರು. ಭಾರತವು ತನ್ನ ಗಡಿಗಳನ್ನು ಕಾಪಾಡಿಕೊಳ್ಳಲು ಇತರ ದೇಶಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂದು ಇದೇ ವೇಳೆ ಹೇಳಿದರು.
-
Karnataka: Defence Minister Rajnath Singh arrives at Hindustan Aeronautics Limited (HAL) Airport in Bengaluru.
— ANI (@ANI) February 2, 2021 " class="align-text-top noRightClick twitterSection" data="
He will inaugurate HAL’s second LCA (Light Combat Aircraft) production line today and attend Aero India show to be held from February 3 to 5. pic.twitter.com/XpoadWWBNI
">Karnataka: Defence Minister Rajnath Singh arrives at Hindustan Aeronautics Limited (HAL) Airport in Bengaluru.
— ANI (@ANI) February 2, 2021
He will inaugurate HAL’s second LCA (Light Combat Aircraft) production line today and attend Aero India show to be held from February 3 to 5. pic.twitter.com/XpoadWWBNIKarnataka: Defence Minister Rajnath Singh arrives at Hindustan Aeronautics Limited (HAL) Airport in Bengaluru.
— ANI (@ANI) February 2, 2021
He will inaugurate HAL’s second LCA (Light Combat Aircraft) production line today and attend Aero India show to be held from February 3 to 5. pic.twitter.com/XpoadWWBNI
"ನಮ್ಮ ದೇಶದ ರಕ್ಷಣೆಗಾಗಿ ನಾವು ಇತರ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿರಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಎಚ್ಎಎಲ್ಗೆ ಇನ್ನೂ ಬೇಡಿಕೆ ಹೆಚ್ಚಾಗಲಿದೆ" ಎಂದು ಸಿಂಗ್ ಭರವಸೆ ವ್ಯಕ್ತಪಡಿಸಿದ್ರು.
"ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ಎಚ್‌ಎಎಲ್ ಸಶಸ್ತ್ರ ಪಡೆಗಳಿಂದ 48,000 ಕೋಟಿ ರೂ. ಆರ್ಡರ್ಗಳನ್ನು ಪಡೆದಿದೆ. ಇದು ಸ್ಥಳೀಯ ರಕ್ಷಣಾ ಸಂಗ್ರಹದ ದೃಷ್ಟಿಯಿಂದ ಅತಿದೊಡ್ಡ ಸಂಗ್ರಹವಾಗಿದೆ. ಇದು ಭಾರತೀಯ ಏರೋಸ್ಪೇಸ್ ಕ್ಷೇತ್ರಕ್ಕೆ ಹೊಸ ಆಯಾಮ ನೀಡುತ್ತದೆ" ಎಂದು ರಕ್ಷಣಾ ಸಚಿವರು ಹೇಳಿದರು.
ಓದಿ: ಟ್ರ್ಯಾಕ್ಟರ್ನಲ್ಲಿ ವಧು-ವರರ ಮೆರವಣಿಗೆ.. ರೈತರ ಪ್ರತಿಭಟನೆಗೆ ಸಾಥ್ ನೀಡಿದ ಸತಿಪತಿ..
ಹಲವಾರು ದೇಶಗಳು ತೇಜಸ್ ಎಂ 1 ಎ ಖರೀದಿಸಲು ಆಸಕ್ತಿ ತೋರಿಸಿವೆ. ಎಚ್‌ಎಎಲ್ ಇತರ ದೇಶಗಳಿಂದ ಶೀಘ್ರದಲ್ಲೇ ಆರ್ಡರ್ಗಳನ್ನು ಪಡೆಯಲಿದೆ ಎಂದು ಸಚಿವರು ಹೇಳಿದರು.
ತೇಜಸ್ ಯುದ್ಧ ವಿಮಾನ ಸ್ಥಳೀಯ ವಿಮಾನವಷ್ಟೇ ಅಲ್ಲ, ಎಂಜಿನ್ ಸಾಮರ್ಥ್ಯ, ರೇಡಾರ್ ವ್ಯವಸ್ಥೆ, ದೃಶ್ಯ ವ್ಯಾಪ್ತಿಯನ್ನೂ ಮೀರಿ ಹಲವಾರು ನಿಯತಾಂಕಗಳಲ್ಲಿ ವಿದೇಶಿ ವಿಮಾನಗಳಿಗಿಂತ ಉತ್ತಮವಾಗಿದೆ ಮತ್ತು ಅಗ್ಗದ ದರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.