ETV Bharat / bharat

ಮುಂಬೈ ದಾಳಿ ಮರೆಯಲು ಅಸಾಧ್ಯ.. ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ : ನಮೋ - PM modi on terror attack

2008ರಲ್ಲಿ ದಾಳಿ ನಡೆಸಿದ್ದ 10 ಲಷ್ಕರ್​-ಎ-ತೊಯ್ಬಾ ಉಗ್ರರು ಪ್ರಮುಖವಾಗಿ ಛತ್ರಪತಿ ಶಿವಾಜಿ ಟರ್ಮಿನಲ್​​, ಒಬೆರಾಯ ಟ್ರೈಡೆಂಟ್​, ತಾಜ್​ ಹೋಟೆಲ್​​, ಲಿಯೋಪೋಲ್ಡ್​ ಕೆಫೆ ಸೇರಿದಂತೆ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು..

PM modi on  terror attack
PM modi on terror attack
author img

By

Published : Nov 26, 2021, 4:17 PM IST

ನವದೆಹಲಿ : 26/11 ಮುಂಬೈ ಉಗ್ರರ ದಾಳಿ ಮರೆಯಲು ಸಾಧ್ಯವಿಲ್ಲ. ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಸಂವಿಧಾನದ ದಿನದ ಪ್ರಯುಕ್ತ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 26/11 ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ದಾಳಿಯಲ್ಲಿ ಭಯೋತ್ಪಾದಕರನ್ನ ಹಿಮ್ಮೆಟ್ಟಿಸಿರುವ ವೀರ ಭಾರತೀಯ ಯೋಧರಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ಶೌರ್ಯಕ್ಕೆ ದೇಶ ಯಾವಾಗಲೂ ಕೃತಜ್ಞತೆಯಿಂದಿರುತ್ತದೆ ಎಂದಿದ್ದಾರೆ.

ಇದನ್ನೂ ಓದಿರಿ: ಪೆನ್ಸಿಲ್​​ ಕದ್ದ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟಾಣಿಗಳು: ಮಕ್ಕಳ ಮಾತು ಕೇಳಿದ್ರೆ ನೀವೂ ನಗ್ತೀರಾ!

2008ರಲ್ಲಿ ದಾಳಿ ನಡೆಸಿದ್ದ 10 ಲಷ್ಕರ್​-ಎ-ತೊಯ್ಬಾ ಉಗ್ರರು ಪ್ರಮುಖವಾಗಿ ಛತ್ರಪತಿ ಶಿವಾಜಿ ಟರ್ಮಿನಲ್​​, ಒಬೆರಾಯ ಟ್ರೈಡೆಂಟ್​, ತಾಜ್​ ಹೋಟೆಲ್​​, ಲಿಯೋಪೋಲ್ಡ್​ ಕೆಫೆ ಸೇರಿದಂತೆ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಸೆರೆ ಸಿಕ್ಕಿದ್ದ ಅಜ್ಮಲ್​ ಕಸಬ್​ಗೆ 2012ರಲ್ಲಿ ಗಲ್ಲಿಗೇರಿಸಲಾಯಿತು.

ಪಾಕ್​ಗೆ ಸಮನ್ಸ್​​ : 2008ರ ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನದ ರಾಂಜತಾಂತ್ರಿಕರಿಗೆ ಸಮನ್ಸ್​ ಜಾರಿ ಮಾಡಿತ್ತು. ಕೃತ್ಯಕ್ಕೆ ಕಾರಣರಾದವರ ತ್ವರಿತ ವಿಚಾರಣೆಗೆ ಒತ್ತಾಯಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.