ETV Bharat / bharat

ದೆಹಲಿ ಲೋಕಸಭಾ ಸೀಟು ಹಂಚಿಕೆ: ಆಪ್​- ಕಾಂಗ್ರೆಸ್​ ನಡುವೆ ಇಂದು ಚರ್ಚೆ

ದೆಹಲಿ ಲೋಕಸಭೆ ಸೀಟು ಹಂಚಿಕೆ ಕುರಿತು ಆಪ್​ ಮತ್ತು ಕಾಂಗ್ರೆಸ್​ ನಡುವೆ ಇಂದು ಮೊದಲ ಸುತ್ತಿನ ಸಭೆ ನಡೆಯಲಿದೆ.

ದೆಹಲಿ ಲೋಕಸಭಾ ಸೀಟು ಹಂಚಿಕೆ
ದೆಹಲಿ ಲೋಕಸಭಾ ಸೀಟು ಹಂಚಿಕೆ
author img

By ETV Bharat Karnataka Team

Published : Jan 8, 2024, 12:24 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹುಟ್ಟಿಕೊಂಡಿರುವ I.N.D.I.A ಕೂಟದಲ್ಲಿ ಸೀಟು ಹಂಚಿಕೆ ತಲೆನೋವಾಗಿದೆ. ಬಿಹಾರದಲ್ಲಿ ಜೆಡಿಯು ಮತ್ತು ಕಾಂಗ್ರೆಸ್​ ನೇರಾನೇರ ಬೈದಾಡಿಕೊಂಡಿವೆ. ಇದರ ಬೆನ್ನಲ್ಲೇ ದಿಲ್ಲಿಯಲ್ಲಿನ ಲೋಕಸಭಾ ಸೀಟು ಹಂಚಿಕೆಯ ಬಗ್ಗೆ ಇಂದು ಆಮ್​ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ ಮಾತುಕತೆಗೆ ಸಿದ್ಧವಾಗಿವೆ.

ಉಭಯ ಪಕ್ಷಗಳ ನಡುವೆ ಇಂದು ಮೊದಲ ಸುತ್ತಿನ ಮಾತುಕತೆ ನಡೆಯಲಿದೆ. 7 ಲೋಕಸಭಾ ಸ್ಥಾನಗಳ ಪೈಕಿ ಯಾರು ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಇಂದಿನ ಸಭೆಗೆ ಆಪ್​ ಪಕ್ಷದ ಪರವಾಗಿ ಸಂಸದ ಸಂದೀಪ್ ಪಾಠಕ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್​ನಿಂದ ಸಂದೀಪ್ ದೀಕ್ಷಿತ್, ಅಭಿಷೇಕ್ ದತ್ ಇನ್ನಿತರರು ಸಭೆಗೆ ಹಾಜರಾಗಲಿದ್ದಾರೆ.

ಸೀಟು ಹಂಚಿಕೆ ಬಗ್ಗೆ ಶೀಘ್ರ ನಿರ್ಧಾರ: ಪಂಜಾಬ್​ ಮತ್ತು ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷ ರಾಜ್ಯಗಳ ಮೇಲೆ ಹಿಡಿತ ಹೊಂದಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸಲಾಗುವುದು. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಲ್ಲ ಪಕ್ಷಗಳು ಸೀಟು ಹಂಚಿಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಚರ್ಚೆ ಆಯಾ ಪಕ್ಷಗಳು ನಾಯಕರೊಂದಿಗೆ ಚರ್ಚೆ ನಡೆಯಲಿದೆ ಎಂದು ಆಪ್​ ಸಂಸದ ಸಂಸದ ಸಂದೀಪ್ ಪಾಠಕ್ ಹೇಳಿದರು.

ಸೀಟು ಹಂಚಿಕೆ ಪ್ರಕ್ರಿಯೆ ಸರಿಯಾದ ದೆಸೆಯಲ್ಲಿ ಸಾಗುತ್ತಿದೆ. ಇಂದು ಕಾಂಗ್ರೆಸ್​ ಜೊತೆಗೆ ಚರ್ಚೆ ನಡೆಯಲಿದೆ. ಎಲ್ಲ ಪಾಲುದಾರ ಪಕ್ಷಗಳು ಗಂಭೀರತೆ ಕಾಪಾಡಲಿವೆ. ಸಾಧ್ಯವಾದಷ್ಟು ಬೇಗ ಸೀಟು ಹಂಚಿಕೆ ಮುಗಿಯಲಿದೆ. ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪರಿಗಣಿಸಿ, ಸೀಟು ಹಂಚಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

ಮೈತ್ರಿಗೆ ಗೆಲುವು ಭರವಸೆ: ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಮಾತನಾಡಿ, ದಿಲ್ಲಿಯಲ್ಲಿ ಮಾತ್ರ ಆಪ್​ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯವಿದೆ. ರಾಷ್ಟ್ರೀಯ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಮೈತ್ರಿಯಿಂದಾಗಿ ಯಾರು, ಯಾವ ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಶೀಘ್ರವೇ ಇತ್ಯರ್ಥವಾಗಬೇಕು ಎಂದರು.

ಇನ್ನೊಬ್ಬ ಕಾಂಗ್ರೆಸ್​ ನಾಯಕ ಅಭಿಷೇಕ್ ದತ್, ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ದೆಹಲಿ ಜನರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಬೇಸತ್ತಿದ್ದಾರೆ. ಹೀಗಾಗಿ ಮೈತ್ರಿ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದರೆ ಗೆಲುವು ಸಾಧಿಸಬಹುದು ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಸೀಟು ಕಿತ್ತಾಟ: ನಿತೀಶ್​ಕುಮಾರ್​ ನೇತೃತ್ವದ ಜೆಡಿಯು ಪಕ್ಷ ಕಾಂಗ್ರೆಸ್​ ಕೇಳಿದಷ್ಟು ಸೀಟು ಹಂಚಿಕೆ ಮಾಡಲು ಸಾಧ್ಯವಿಲ್ಲ. ಕೇವಲ ನಾಲ್ಕು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲಾಗುವುದು ಎಂದು ನೇರವಾಗಿ ಹೇಳಿತ್ತು. ಇದು ಕಾಂಗ್ರೆಸ್​ ಆಕ್ಷೇಪಕ್ಕೆ ಕಾರಣವಾಗಿದೆ. ಸರಿಯಾದ ರೀತಿಯಲ್ಲಿ ಹಂಚಿಕೆಯಾಗದಿದ್ದಲ್ಲಿ ಮೈತ್ರಿಗೇ ನಷ್ಟವಾಗಲಿದೆ ಎಂದು ಕೈ ಪಕ್ಷ ಹೇಳಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಬಿಹಾರದಲ್ಲಿ ಕಡಿಮೆ ಸ್ಥಾನ ಕೊಟ್ಟರೆ ಮಹಾಘಟಬಂಧನ್​ಗೇ ನಷ್ಟ-ಕಾಂಗ್ರೆಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.