ETV Bharat / bharat

11ನೇ ಸುತ್ತಿನ ಭಾರತ - ಚೀನಾ ಮಾತುಕತೆ: ಮತ್ತೆ ಮೂರು ಪ್ರದೇಶಗಳಿಂದ ಸೇನೆ ಹಿಂಪಡೆಯುವ ಬಗ್ಗೆ ಚರ್ಚೆ - ಹಾಟ್ ಸ್ಪ್ರಿಂಗ್ಸ್

ಪೂರ್ವ ಲಡಾಖ್​​ನ ಗೋಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ - ಈ ಮೂರು ಪ್ರದೇಶಗಳಿಂದ ಭಾರತ ಮತ್ತು ಚೀನಾ ಸೇನೆಗಳು ಶೀಘ್ರವಾಗಿ ತನ್ನ ಪ್ರಕ್ರಿಯೆ ನಿಷ್ಕ್ರಿಯಗೊಳಿಸಿ, ಸೈನಿಕರನ್ನು ವಾಪಸ್​ ಕರೆಯಿಸಿಕೊಳ್ಳುವ ಕುರಿತು ಉಭಯ ರಾಷ್ಟ್ರಗಳು ಇಂದು ಚರ್ಚಿಸಿವೆ.

India and China hold 11th round of military talks
11ನೇ ಸುತ್ತಿನ ಭಾರತ-ಚೀನಾ ಮಾತುಕತೆ
author img

By

Published : Apr 9, 2021, 5:13 PM IST

ನವದೆಹಲಿ: ಪೂರ್ವ ಲಡಾಖ್​ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಇರುವ ಚುಶುಲ್​ನಲ್ಲಿ ಇಂದು ಭಾರತ ಮತ್ತು ಚೀನಾ ನಡುವಿನ 11 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.

ಇಂದು ಬೆಳಗ್ಗೆ 10.30ಕ್ಕೆ ಸಭೆ ಆರಂಭವಾಗಿದ್ದು, ಪೂರ್ವ ಲಡಾಖ್​​ನ ಗೋಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ - ಈ ಮೂರು ಪ್ರದೇಶಗಳಿಂದ ಭಾರತ ಮತ್ತು ಚೀನಾ ಸೇನೆಗಳು ಶೀಘ್ರವಾಗಿ ತನ್ನ ಪ್ರಕ್ರಿಯೆ ನಿಷ್ಕ್ರಿಯಗೊಳಿಸಿ, ಸೈನಿಕರನ್ನು ವಾಪಸ್​​ ಕರೆಯಿಸಿಕೊಳ್ಳುವ ಕುರಿತು ಚರ್ಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯುಎಸ್​ನಲ್ಲಿ ಭಾರತೀಯ ದಂಪತಿ ಶವವಾಗಿ ಪತ್ತೆ, ಬಾಲ್ಕನಿಯಲ್ಲಿ ಅಳುತ್ತ ನಿಂತಿದ್ದ ಮಗು ನೀಡಿತು ಸುಳಿವು..

2020ರ ಜೂನ್​ ತಿಂಗಳಲ್ಲಿ ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಎರಡು ದೇಶಗಳ ಯೋಧರ ನಡುವೆ ಸಂಘರ್ಷ ನಡೆದ ಬಳಿಕ ಇಲ್ಲಿಯವರೆಗೆ 10 ಬಾರಿ ಸಭೆ ನಡೆಸಲಾಗಿದೆ. ಪ್ಯಾಂಗಾಂಗ್​​​ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಉಭಯ ರಾಷ್ಟ್ರಗಳು ತಮ್ಮ ಸೇನೆ ಹಿಂದಕ್ಕೆ ಕರೆಯಿಸಿಕೊಂಡ ಬೆನ್ನಲ್ಲೆ ಫೆಬ್ರವರಿ 20ರಂದು ಸತತ 16 ಗಂಟೆಗಳ ಕಾಲ 10ನೇ ಸುತ್ತಿನ ಮಾತುಕತೆ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.