ETV Bharat / bharat

ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿ, 'ಗ್ಲೋಬಲ್​ ಸೌತ್​' ಪರಿಕಲ್ಪನೆ ಹೊಸದಲ್ಲ: ಕಾಂಗ್ರೆಸ್ - ಗ್ಲೋಬಲ್​ ಸೌತ್​ ವಿಚಾರ

ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಗ್ಲೋಬಲ್​ ಸೌತ್​ ವಿಚಾರವನ್ನು ಎತ್ತುತ್ತಿದ್ದು, ಇದು ಹೊಸ ವಿಚಾರವಲ್ಲ. ಭಾರತ ಯಾವಾಗಲೂ ಅಭಿವೃದ್ಧಿ ಶೀಲ ರಾಷ್ಟ್ರಗಳ ಧ್ವನಿಯಾಗಿದೆ ಎಂದು ಕಾಂಗ್ರೆಸ್​ ಹೇಳಿದೆ.

ಗ್ಲೋಬಲ್​ ಸೌತ್
ಗ್ಲೋಬಲ್​ ಸೌತ್
author img

By ETV Bharat Karnataka Team

Published : Sep 10, 2023, 7:28 PM IST

ನವದೆಹಲಿ: ಜಿ20 ಶೃಂಗಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಾರತ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್​ ಸೌತ್​ (ಜಾಗತಿಕ ದಕ್ಷಿಣ) ಬಗ್ಗೆ ಜಿ20ಯಲ್ಲಿ ಪ್ರಸ್ತಾಪಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಲಿಪ್ತ ರಾಷ್ಟ್ರಗಳ ಗುಂಪಿನ ಭಾರತವು ಯಾವಾಗಲೂ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿದೆ. ಗ್ಲೋಬಲ್ ಸೌತ್ ಪರಿಕಲ್ಪನೆಯು ಹಳೆಯದಾಗಿದೆ. ಕೇಂದ್ರ ಸರ್ಕಾರ ಜಿ 20 ಅಧ್ಯಕ್ಷತೆಯನ್ನು ದೊಡ್ಡದಾಗಿ ಬಿಂಬಿಸಿದೆ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.

ಈ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿರುವ ಕಾಂಗ್ರೆಸ್​ ನಾಯಕ ಸಲ್ಮಾನ್ ಸೋಜ್, ಜಿ20 ನಾಯಕತ್ವದ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚಾಗಿ ನಡೆದುಕೊಂಡಿದೆ. ಕಳೆದ ವರ್ಷ ಇಂಡೋನೇಷ್ಯಾ ಜಿ 20 ನಾಯಕತ್ವ ವಹಿಸಿತ್ತು. ಮುಂದಿನ ವರ್ಷ ಬ್ರೆಜಿಲ್ ಅಧಿಕಾರ ವಹಿಸಿಕೊಳ್ಳಲಿದೆ. ಹೀಗಾಗಿ ಅದರಲ್ಲಿ ವಿಶೇಷವೇನಿಲ್ಲ. ಹಿಂದೆ ಅಮೆರಿಕ ಮತ್ತು ಕೆನಡಾ ಗುಂಪನ್ನು ಮುನ್ನಡೆಸಿದ್ದವು. ಭವಿಷ್ಯದಲ್ಲಿ ಚೀನಾ ಕೂಡ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಭಾರತ ಅಭಿವೃದ್ಧಿ ರಾಷ್ಟ್ರಗಳ ದನಿ: ಇನ್ನು, ಗ್ಲೋಬಲ್ ಸೌತ್ ವಿಚಾರಕ್ಕೆ ಬಂದರೆ, ದಕ್ಷಿಣ ಗೋಳಾರ್ಧದಲ್ಲಿ ಬರುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಭಿವೃದ್ಧಿಶೀಲ ದೇಶಗಳಾಗಿವೆ. ಅವುಗಳ ಪರವಾಗಿ ಭಾರತ ಯಾವಾಗಲೂ ದನಿ ಎತ್ತುತ್ತದೆ. ಜಾಗತಿಕ ದಕ್ಷಿಣದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿದೆ. ಚೀನಾ ಕೂಡ ಇನ್ನೊಂದು ಪ್ರಬಲ ರಾಷ್ಟ್ರವಾಗಿದೆ. ಆದರೂ, ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗುವ ಭಾರತ ದನಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಚೀನಾವು ಆಫ್ರಿಕನ್ ರಾಷ್ಟ್ರಗಳೊಂದಿಗೆ ಮತ್ತು ಲ್ಯಾಟಿನ್ ಅಮೆರಿಕದೊಂದಿಗೆ ಬಲವಾದ ಸಂಪರ್ಕವನ್ನು ಸಾಧಿಸಿದೆ. ಹೀಗಾಗಿ ಭಾರತದ ನಿರ್ಧಾರಗಳನ್ನು ಒಪ್ಪಿಕೊಳ್ಳುವುದು ಆ ದೇಶಗಳಿಗೆ ಅಷ್ಟು ಸುಲಭವಲ್ಲ. ಆದಾಗ್ಯೂ, ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದೆ. ಭಾರತದ ಒಪ್ಪಿಗೆಯಿಲ್ಲದೇ, ಏನೂ ಆಗದು. ಚೀನಾ ಕೂಡ ಇದನ್ನು ಅರಿತಿದೆ. ಭಾರತವು ಏಷ್ಯಾದ ಪ್ರಮುಖ ಶಕ್ತಿಯಾಗಿದೆ ಮತ್ತು ಅದು ಹಾಗೆಯೇ ಮುಂದುವರಿಯಲಿದೆ ಎಂದರು.

ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಮಾತನಾಡಿ, ಗ್ಲೋಬಲ್ ಸೌತ್​ನಲ್ಲಿ ಬರುವ ಎಲ್ಲ ರಾಷ್ಟ್ರಗಳಿಗೆ ಯಾವುದೇ ದೇಶ ಬಾಸ್​ ಆಗಲು ಸಾಧ್ಯವಿಲ್ಲ. ಕಾರಣ ಈ ಪ್ರದೇಶದಲ್ಲಿ ಅನೇಕ ಸಾರ್ವಭೌಮ ರಾಷ್ಟ್ರಗಳಿವೆ. ಜಿ 20 ಶೃಂಗಸಭೆಯು ಬಹಳ ಪ್ರಾಮುಖ್ಯತೆ ಪಡೆದಿದೆ. ಕಳೆದ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಶೃಂಗಸಭೆಗಿಂತಲೂ ಹೆಚ್ಚಿನ ಘೋಷಣೆಗಳು ನಮ್ಮಲ್ಲಿ ನಡೆದ ಶೃಂಗದಲ್ಲಿ ಬಂದಿದ್ದು ಶ್ಲಾಘನೀಯ ಎಂದಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆ ನಡೆದ 'ಭಾರತ ಮಂಟಪ'ಕ್ಕೆ ನುಗ್ಗಿದ ಮಳೆ ನೀರು, ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.