ನವದೆಹಲಿ: ಭಾರತದ ಕೋವಿಡ್ -19 ಲಸಿಕೆ ಸರ್ಟಿಫಿಕೇಟ್‌ಗೆ ಮಾನ್ಯತೆ ನೀಡಿದ 99 ದೇಶಗಳಿಗೆ ಕ್ವಾರಂಟೈನ್-ಮುಕ್ತ ಪ್ರಯಾಣಕ್ಕೆ (Quarantine-free travel) ಅನುಮತಿಸಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿ:
ಕೋವಿಡ್-19 ಲಸಿಕೆ ಪಡೆದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಅಲ್ಲದೇ, ಅವರಿಗೆ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಅನುಮತಿಸಲಾಗುತ್ತದೆ.
- ಪ್ರಯಾಣಿಕರು ಲಸಿಕೆ ಪಡೆಯದಿದ್ದಲ್ಲಿ ಅವರ ಆಗಮನದ ನಂತರ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಂತರ ಅವರನ್ನು ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿಸಲಾಗುತ್ತದೆ. ಇಲ್ಲದೇ ಇದ್ದರೆ, ಏಳು ದಿನಗಳವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ.
- ಎಂಟನೇ ದಿನ ಮರು ಪರೀಕ್ಷೆ ಮಾಡಿಸಿ ದೇಶದೊಳಗೆ ಬರಲು ಅನುಮತಿಸಲಾಗುತ್ತದೆ. ಒಂದು ವೇಳೆ ಟೆಸ್ಟ್ನಲ್ಲಿ ಪಾಸಿಟಿವ್ ಕಂಡು ಬಂದರೆ, ಮುಂದಿನ ಏಳು ದಿನಗಳವರೆಗೆ ಅವರನ್ನು (ಸ್ವಯಂ-ಮೇಲ್ವಿಚಾರಣೆ ) ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ.
- ಆರೋಗ್ಯ ಸಚಿವಾಲಯವು ಐದು ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಪೂರ್ವ ಮತ್ತು ನಂತರದ ಪರೀಕ್ಷೆಯಿಂದ ವಿನಾಯಿತಿ ನೀಡಿದೆ. ಒಂದು ವೇಳೆ ಅವರು ಆಗಮಿಸಿದಾಗ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಕೊರೊನಾವೈರಸ್ ಸೋಂಕಿನ ಲಕ್ಷಣ ಕಂಡುಬಂದಲ್ಲಿ, ಅವರು ಪರೀಕ್ಷೆಗೆ ಒಳಗಾಗಬೇಕು. ನಂತರ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ಪಡೆಯುತ್ತಾರೆ ಎಂದು ಮಾರ್ಗಸೂಚಿಗಳು ಹೇಳುತ್ತವೆ.
ಇದನ್ನೂ ಓದಿ: ದೇಶದ ಮೊದಲ ISO ಪ್ರಮಾಣೀಕೃತ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ