ETV Bharat / bharat

ಪಾಕಿಸ್ತಾನ​, ಬಾಂಗ್ಲಾದೇಶ ಸೈನಿಕರೊಂದಿಗೆ ಭಾರತೀಯ ಯೋಧರ ಸಿಹಿ ವಿನಿಮಯ - ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯೋತ್ಸವದ ನಿಮಿತ್ತ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸೈನಿಕರೊಂದಿಗೆ ಭಾರತೀಯ ಯೋಧರು ಸಿಹಿ ವಿನಿಮಯ ಮಾಡಿಕೊಂಡರು.

Independence Day: BSF personnel exchange sweets at border
ಸ್ವಾತಂತ್ರ್ಯೋತ್ಸವ: ಪಾಕ್​, ಬಾಂಗ್ಲಾ ಸೈನಿಕರೊಂದಿಗೆ ಭಾರತೀಯ ಯೋಧರ ಸಿಹಿ ವಿನಿಮಯ
author img

By

Published : Aug 15, 2022, 3:49 PM IST

ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಭಾರತೀಯ ಯೋಧರು ಅಂತಾರಾಷ್ಟ್ರೀಯ ಗಡಿಗಳಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸೈನಿಕರೊಂದಿಗೆ ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರ ಮತ್ತು ಪಂಜಾಬ್​ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರು ಪಾಕ್​ ರೇಂಜರ್​ಗಳಿಗೆ ಸಿಹಿ ಪೊಟ್ಟಣ ನೀಡಿದರು. ಇದಕ್ಕೆ ಪ್ರತಿಯಾಗಿ ಪಾಕ್​ ರೇಂಜರ್​ಗಳು ಸಿಹಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸಾಂಬಾ, ಕುತ್ವಾ ಮತ್ತು ಆರ್​ಎಸ್‌ಪುರ ಹಾಗೂ ಅಖ್ನೂರ್​ ಗಡಿಯಲ್ಲಿ ಮತ್ತು ಪಂಜಾಬ್​ನ ಅಟ್ಟಾರಿ ಮತ್ತು ವಾಘಾ ಗಡಿಯಲ್ಲೂ ಬಿಎಸ್​ಎಫ್​ ಹಾಗೂ ಪಾಕಿಸ್ತಾನ ರೇಂಜರ್​ಗಳು ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಫುಲ್ಬರಿ ಗಡಿಯಲ್ಲಿ ಬಾಂಗ್ಲಾದೇಶದ ಸೈನಿಕರೊಂದಿಗೆ ಭಾರತೀಯ ಯೋಧರು ಸಿಹಿ ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ದೇಶಿ ಗನ್​ ಸೆಲ್ಯೂಟ್‌, ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.