ಹೈದರಾಬಾದ್: ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಅಸ್ತಮಾ ದಾಳಿಗೆ ಒಳಗಾಗುವ ಅಪಾಯ ಹೆಚ್ಚಿದೆ. ಉಸಿರಾಟದ ಸೋಂಕುಗಳು ಅಸ್ತಮಾಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ನಗರ ಪ್ರದೇಶಗಳಲ್ಲಿ ಗಾಳಿಯಲ್ಲಿನ ಮಾಲಿನ್ಯಕಾರಕಗಳಂತಹ ಸೋಂಕು ರಹಿತ ಅಂಶಗಳು, ವಿಶೇಷವಾಗಿ ಓಝೋನ್ ಮತ್ತು ಇತರ ಸೂಕ್ಷ್ಮ ಕಣಗಳು ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ತಿಳಿಸುತ್ತದೆ. ಮಕ್ಕಳಲ್ಲಿ ಅಸ್ತಮಾ ದಾಳಿಯನ್ನು ಪ್ರಚೋದಿಸುತ್ತದೆ. ಅಧ್ಯಯನವು ವಾಯು ಮಾಲಿನ್ಯ ಮತ್ತು ಅಸ್ತಮಾ ದಾಳಿಯ ನಡುವಿನ ಸಂಬಂಧವನ್ನು ವಿಶ್ಲೇಷಿಸಿದೆ.
ಓಝೋನ್, ಇತರ ಕಣಗಳಿಂದ ಅಸ್ತಮಾ ದಾಳಿಗೆ ಪ್ರಚೋದನೆ: ಗಾಳಿಯಲ್ಲಿ ಹೆಚ್ಚಿದ ಮಾಲಿನ್ಯದ ಮಟ್ಟ, ವಿಶೇಷವಾಗಿ ಓಝೋನ್ ಮತ್ತು ಇತರ ಕಣಗಳು, ಅಸ್ತಮಾ ದಾಳಿಯನ್ನು ಪ್ರಚೋದಿಸಬಹುದು. ಶ್ವಾಸಕೋಶದ ಕಾರ್ಯವನ್ನು ದುರ್ಬಲಗೊಳಿಸಬಹುದು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಲ್ಲಿ ಈ ಕಣಗಳು ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು.
ಸಂಶೋಧಕ ಡಾ.ಅಲನ್ ಡಾಡ್ಜರ್ ಮಾಹಿತಿ: ನ್ಯೂಯಾರ್ಕ್ ಮೆಡಿಕಲ್ ಕಾಲೇಜಿನಲ್ಲಿ ಪೀಡಿಯಾಟ್ರಿಕ್ಸ್ ಮತ್ತು ಪಲ್ಮನಾಲಜಿ ವಿಭಾಗದ ಮುಖ್ಯಸ್ಥ ಮತ್ತು ಸಂಶೋಧಕರಲ್ಲಿ ಒಬ್ಬರಾದ ಡಾ.ಅಲನ್ ಡಾಡ್ಜರ್ ಅವರ ಪ್ರಕಾರ, ಅಸ್ತಮಾಕ್ಕೆ ಸಂಬಂಧಿಸಿದ ವೈರಲ್ ಸೋಂಕುಗಳು ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿದೆ. ಅಸ್ತಮಾದ ಅತ್ಯಂತ ತೀವ್ರವಾದ ಪ್ರಕರಣಗಳು ಶ್ವಾಸಕೋಶ ಪ್ರದೇಶದ ಸೋಂಕುಗಳು ಅಥವಾ ಶೀತ ಕಾರಣ ಎಂದು ಅವರು ಹೇಳುತ್ತಾರೆ. ಇದು ಪ್ರತಿವರ್ಷ ವಿಶೇಷವಾಗಿ ಚಳಿಗಾಲದಲ್ಲಿ ವೈರಲ್ ಸೋಂಕುಗಳು ಮತ್ತು ಆಸ್ತಮಾದ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ತೀವ್ರವಾದ ಅಸ್ತಮಾ ದಾಳಿ: ಹೆಚ್ಚಿನ ಮಟ್ಟದ ವಾಯುಮಾಲಿನ್ಯವಿರುವ ಪ್ರದೇಶಗಳಲ್ಲಿ ಚಳಿಗಾಲದ ಅವಧಿಯಲ್ಲಿ ತೀವ್ರವಾದ ಅಸ್ತಮಾ ದಾಳಿ ಹೆಚ್ಚಾಗುವುದು ಸಾಮಾನ್ಯವಾಗಿದೆ. ಈ ಸಂಶೋಧನೆಯು ಹೆಚ್ಚಿನ ಮಟ್ಟದ ವಾಯುಮಾಲಿನ್ಯವು ವೈರಲ್ ಸೋಂಕು ಮತ್ತು ವೈರಲ್ ಸೋಂಕು ಅಲ್ಲದ ಆಸ್ತಮಾ ದಾಳಿ ಬಗ್ಗೆ ತಿಳಿಸುತ್ತದೆ. ಆದರೆ, ಒಂದೇ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಾಯುಮಾಲಿನ್ಯಕಾರಕಗಳ ಪ್ರಭಾವ ಬೀರುವುದು ಭಿನ್ನವಾಗಿದೆ.
ಅಧ್ಯಯನದಲ್ಲಿ, ಸಂಶೋಧಕರು ಮೊದಲು ಯುಎಸ್ನ ಕೆಲವು ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಮತ್ತು ಹದಿಹರೆಯದವರಲ್ಲಿ ಆಸ್ತಮಾದ ತೀವ್ರತೆ ಮತ್ತು ಅವರ ನಗರಗಳಲ್ಲಿನ ವಾಯು ಮಾಲಿನ್ಯದ ಮಟ್ಟಗಳ ನಡುವಿನ ಸಂಬಂಧವನ್ನು ಪರಿಶೀಲಿಸಿದರು. ಅವರು ಕೆಲವು ಹಳೆಯ ವೀಕ್ಷಣಾ ಅಧ್ಯಯನಗಳು ಮತ್ತು ಭಾಗವಹಿಸಿದವರ ಪ್ರೊಫೈಲ್‌ಗಳಿಂದ ಡೇಟಾ ವಿಶ್ಲೇಷಣೆ ಮಾಡಲಾಗಿದೆ. ವೈರಲ್ ಸೋಂಕು ಮತ್ತು ವೈರಲ್ ಸೋಂಕು ರಹಿತ ಅಸ್ತಮಾ ಉಲ್ಬಣಗೊಳ್ಳುವಿಕೆಯ ಆಧಾರವಾಗಿರುವ ಆಣ್ವಿಕ ಕಾರ್ಯವಿಧಾನ ಅರ್ಥಮಾಡಿಕೊಳ್ಳಲು ಪೂರಕವಾಗಿದೆ.
ಅಮೆರಿಕದ ಒಂಬತ್ತು ನಗರಗಳಲ್ಲಿ ಅಧ್ಯಯನ: ಈ ಅಧ್ಯಯನಕ್ಕಾಗಿ, ಲೇಖಕರು ಎಂಯುಪಿಪಿಐಟಿಎಸ್1 (ಮೆಕ್ಯಾನಿಸಂಸ್ ಅಂಡರ್‌ಲೈಯಿಂಗ್ ಆಸ್ತಮಾ ಎಕ್ಸ್‌ಸರ್ಬೇಷನ್ಸ್ ಪ್ರಿವೆಂಟೆಡ್ ಮತ್ತು ಪರ್ಸಿಸ್ಟೆಂಟ್ ವಿತ್ ಇಮ್ಯೂನ್- ಬೇಸ್ಡ್ ಥೆರಪಿ) ಭಾಗವಹಿಸಿದವರ ಡೇಟಾ ಬಳಸಿದ್ದಾರೆ. ಎಂಯುಪಿಪಿಐಟಿಎಸ್1 ಅನ್ವಯ ಯುನೈಟೆಡ್ ಸ್ಟೇಟ್ಸ್‌ನ ಒಂಬತ್ತು ನಗರಗಳಲ್ಲಿ ವಾಸಿಸುವ ತೀವ್ರ ಪೀಡಿತ ಅಸ್ತಮಾ ಹೊಂದಿರುವ 6ರಿಂದ 17ವರ್ಷದೊಳಗಿನ 208 ಮಕ್ಕಳ ಡೇಟಾ ಆಧರಿಸಿ ಅಧ್ಯಯನ ನಡೆಸಲಾಗಿದೆ.
ಶ್ವಾಸಕೋಶದ ಕಾರ್ಯ, ಮೂಗಿನ ದ್ರವದ ಮಾದರಿ: ಭಾಗವಹಿಸುವುದರಲ್ಲಿ ಉಸಿರಾಟದ ಕಾಯಿಲೆಯ ಲಕ್ಷಣಗಳ ಪ್ರಾರಂಭದ ಸಮಯದಿಂದ ಶ್ವಾಸಕೋಶದ ಕಾರ್ಯ ಮತ್ತು ಮೂಗಿನ ದ್ರವದ ಮಾದರಿಗಳ ಮೇಲಿನ ಡೇಟಾವನ್ನು ಸಂಗ್ರಹಿಸಲಾಗಿದೆ. ಉಸಿರಾಟದ ಕಾಯಿಲೆಯು ವೈರಲ್ ಸೋಂಕಿನಿಂದ ಉಂಟಾಗಿದೆಯೇ ಅಥವಾ ವೈರಸ್ ಅಲ್ಲದ ಅಂಶದಿಂದ ಉಂಟಾಗಿದೆಯೇ ಎಂದು ನಿರ್ಧರಿಸಲು ಸಂಶೋಧಕರು ಮೂಗಿನ ದ್ರವದ ಮಾದರಿಗಳನ್ನು ಸಹ ಬಳಸಿದ್ದಾರೆ. ಈ ಸಂಶೋಧನೆಯಲ್ಲಿ, ಭಾಗವಹಿಸುವವರು ಸೋಂಕಿನ ಸಮಯದಲ್ಲಿ ಆಸ್ತಮಾ ದಾಳಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಆಧರಿಸಿ ವರ್ಗೀಕರಿಸಲಾಗಿದೆ.
ಜೊತೆಗೆ ಸಂಶೋಧಕರು ಅಧ್ಯಯನದಲ್ಲಿ ಭಾಗವಹಿಸುವವರ ಭೌಗೋಳಿಕ ಪ್ರದೇಶದಲ್ಲಿನ ಮಾಲಿನ್ಯದ ಪ್ರಮಾಣವನ್ನು ಪರೀಕ್ಷಿಸಲು ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಸಂಗ್ರಹಿಸಿದ ವಾಯು ಗುಣಮಟ್ಟದ ಸೂಚ್ಯಂಕ ಮತ್ತು ಮಾಲಿನ್ಯಕಾರಕಗಳ ಸಾಂದ್ರತೆ ಡೇಟಾ ಸಹ ಬಳಕೆ ಮಾಡಿದರು. ಎಂಯುಪಿಪಿಐಟಿಎಸ್1 ಜೊತೆಗೆ ಸಂಶೋಧನೆ ಎಂಟು ಪ್ರಮುಖ ಯುಸ್ ನಗರಗಳಲ್ಲಿ ಕಡಿಮೆ - ಆದಾಯದ ಕುಟುಂಬಗಳಲ್ಲಿ ವಾಸಿಸುವ 6 ರಿಂದ 20 ವರ್ಷ ವಯಸ್ಸಿನ 419 ವ್ಯಕ್ತಿಗಳ ಮತ್ತೊಂದು ಅಧ್ಯಯನದ ಡೇಟಾವನ್ನು ಬಳಸಿದೆ.
ಗಾಳಿಯ ಗುಣಮಟ್ಟದ ಸೂಚ್ಯಂಕ ಮೌಲ್ಯಗಳು: ಎಂಯುಪಿಪಿಐಟಿಎಸ್1 ಅಧ್ಯಯನದಲ್ಲಿ ಭಾಗವಹಿಸಿದವರ ದತ್ತಾಂಶದ ಆಧಾರದ ಮೇಲೆ, ವೈರಲ್ ಅಲ್ಲದ ಆಸ್ತಮಾ ಉಲ್ಬಣಗೊಳ್ಳುವ ಭಾಗವಹಿಸುವವರು ಹಾಗೂ ವೈರಲ್ ಆಸ್ತಮಾ ಉಲ್ಬಣಗೊಳ್ಳುವವರಿಗಿಂತ ರೋಗಲಕ್ಷಣದ ಪ್ರಾರಂಭದ ಒಂಬತ್ತು ದಿನಗಳ ನಂತರ, ಹೆಚ್ಚಿನ ಗಾಳಿಯ ಗುಣಮಟ್ಟದ ಸೂಚ್ಯಂಕ ಮೌಲ್ಯಗಳನ್ನು ಹೊಂದಿರುವುದು ಕಂಡುಬಂದಿದೆ. ಇದರ ಜೊತೆಗೆ, ವೈರಲ್ ಅಲ್ಲದ ಆಸ್ತಮಾ ಉಲ್ಬಣಗಳೊಂದಿಗೆ ಭಾಗವಹಿಸುವವರಲ್ಲಿ ಶ್ವಾಸಕೋಶದ ಕಾರ್ಯದೊಂದಿಗೆ ಗಾಳಿಯ ಗುಣಮಟ್ಟದ ಸೂಚ್ಯಂಕ ಮೌಲ್ಯಗಳು ಋಣಾತ್ಮಕ ಸಂಬಂಧ ಹೊಂದಿವೆ.
ಆಳವಾದ ಸಂಶೋಧನೆ ನಡೆಸುವುದು ಅಗತ್ಯ: ಗಾಳಿಯ ಗುಣಮಟ್ಟ ಸೂಚ್ಯಂಕ ಮತ್ತು ವೈರಲ್ ಅಲ್ಲದ ಅಸ್ತಮಾದ ಹರಡುವಿಕೆಯ ನಡುವೆ ಇದೇ ರೀತಿಯ ಸಂಬಂಧ ಇರುವುದನ್ನು ಗಮನಿಸಲಾಗಿದೆ. ಈ ಎರಡೂ ಅಧ್ಯಯನಗಳ ದತ್ತಾಂಶವು ವೈರಲ್ ಅಲ್ಲದ ಅಸ್ತಮಾ ದಾಳಿಗೊಳಗಾದ ಮಕ್ಕಳ ವಸತಿ ಪ್ರದೇಶಗಳಲ್ಲಿ ಓಝೋನ್ ಮತ್ತು ಸೂಕ್ಷ್ಮ ಕಣಗಳ (ಪಿಎಂ2.5) ಸಾಂದ್ರತೆಯು ಅಧಿಕವಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಕುರಿತು ಇನ್ನೂ ಹೆಚ್ಚು ಆಳವಾದ ಸಂಶೋಧನೆ ನಡೆಯುವುದು ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲ್ಯದಲ್ಲಿನ ಬೊಜ್ಜು ಕಾಲನಂತರದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಲಿದೆ... ಅಧ್ಯಯನ