ETV Bharat / bharat

ಕೊವ್ಯಾಕ್ಸಿನ್​ ಬೂಸ್ಟರ್​ ಡೋಸ್​ನಿಂದ ಕೊರೊನಾ ಪ್ರತಿಕಾಯಗಳು ಹೆಚ್ಚಳ- ವರದಿ - ಬೂಸ್ಟರ್​ ಡೋಸ್​ನಿಂದ ಕೊರೊನಾ ಪ್ರತಿಕಾಯಗಳು ಹೆಚ್ಚಳ

ಕೊರೊನಾ ಲಸಿಕೆಯ ಬೂಸ್ಟರ್​ ಡೋಸ್​ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಪ್ರತಿಕಾಯಗಳು ಹೆಚ್ಚಲಿವೆ ಎಂದು ಐಸಿಎಂಆರ್​ ವರದಿ ತಿಳಿಸಿದೆ.

booster-dose
ಬೂಸ್ಟರ್​ ಡೋಸ್
author img

By

Published : Mar 29, 2022, 7:56 PM IST

ನವದೆಹಲಿ: ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯ ಬೂಸ್ಟರ್​ ಡೋಸ್​ ನೀಡುತ್ತಿದ್ದು, ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ಮಧ್ಯೆಯೇ ವರದಿಯೊಂದು ಕೊವ್ಯಾಕ್ಸಿನ್​ ಲಸಿಕೆಯ ಬೂಸ್ಟರ್​ ಡೋಸ್​ ಹಾಕಿಸಿಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಪ್ರತಿಕಾಯಗಳು ಇನ್ನಷ್ಟು ಉತ್ಪತ್ತಿಯಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ ಎಂದು ಹೇಳಿದೆ.

ಕೊವ್ಯಾಕ್ಸಿನ್‌ ಲಸಿಕೆಯ ಬೂಸ್ಟರ್ ಡೋಸ್‌ನ ಪರಿಣಾಮವನ್ನು ಪರೀಕ್ಷಿಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಧ್ಯಯನವನ್ನು ನಡೆಸಿದೆ. ವರದಿಯ ಪ್ರಕಾರ ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆದಲ್ಲಿ SARS-CoV-2 ವಿರುದ್ಧ ಪ್ರತಿರೋಧ ಒಡ್ಡುವ ಪ್ರತಿಕಾಯಗಳು ಹೆಚ್ಚಲಿವೆ ಎಂದು ವರದಿ ಸಾಬೀತುಪಡಿಸಿದೆ.

ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವರಾದ ಡಾ.ಭಾರತಿ ಪ್ರವೀಣ್ ಪವಾರ್, ಕೊವ್ಯಾಕ್ಸಿನ್​ ಲಸಿಕೆಯ ಬೂಸ್ಟರ್​ ಡೋಸ್​ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗುವ ಪ್ರತಿಕಾಯಗಳನ್ನು ಇನ್ನಷ್ಟು ಪ್ರಮಾಣದಲ್ಲಿ ಸೃಷ್ಟಿಸುವ ಕುರಿತು ವರದಿ ತಿಳಿಸಿದೆ. ಇದಲ್ಲದೇ, ಅಸ್ಟ್ರಾಜೆನೆಕಾ, ಕೋವಿಶೀಲ್ಡ್‌ನ ಬೂಸ್ಟರ್ ಡೋಸ್‌ಗಳಿಂದ ಪ್ರತಿಕಾಯಗಳು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: 'ದೇಶದ ಆರ್ಥಿಕತೆ ಹೇಗೆ ನಿಭಾಯಿಸಬೇಕೆಂದು ಗೊತ್ತಿದೆ': ಅಂಕಿ-ಅಂಶಸಹಿತ ಪ್ರತಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.