ETV Bharat / bharat

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಇಂದು ಕೊನೆ ದಿನ: ಗಡುವು ತಪ್ಪಿದರೆ ಏನಾಗುತ್ತೆ? - Etv Bharat kannada

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಂದು ಕಡೆಯ ದಿನ. ಒಂದು ವೇಳೆ ನೀವು ಇಂದು ಐಟಿಆರ್ ಸಲ್ಲಿಸಲು ವಿಫಲವಾದ್ರೆ ದೊಡ್ಡ ಮೊತ್ತದ ಬಡ್ಡಿ ಹಣ ಕಟ್ಟಬೇಕಾಗುತ್ತದೆ.

ಆದಾಯ ತೆರಿಗೆ ರಿಟರ್ನ್ಸ್‌
Income Tax Return
author img

By

Published : Jul 31, 2022, 9:33 AM IST

ನವದೆಹಲಿ: 2021-22 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಇಂದು (ಜುಲೈ 31) ಕೊನೆಯ ದಿನಾಂಕ. ಇದರ ನಡುವೆ ಅನೇಕ ತೆರಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಡುವು ವಿಸ್ತರಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಐಟಿ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಒಂದು ವೇಳೆ ಜುಲೈ 31 ರ ಮೊದಲು ನೀವು ಐಟಿಆರ್ ಸಲ್ಲಿಸಲು ವಿಫಲವಾದರೆ ಏನಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಗಡುವು ಮುಗಿದ ಬಳಿಕವೂ ತಡವಾಗಿ ಈ ವರ್ಷದ ಡಿಸೆಂಬರ್‌ 31ರ ವರೆಗೂ ಐಟಿಆರ್‌ ದಾಖಲಿಸಲು ಅವಕಾಶವಿರುತ್ತದೆ. ಆದರೆ, ದಂಡ ತೆರಬೇಕಾಗುತ್ತದೆ. 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234A ಪ್ರಕಾರ ಬಡ್ಡಿ ಕಟ್ಟಬೇಕು. ವಾರ್ಷಿಕ ಆದಾಯ 5 ಲಕ್ಷ ರೂ.ವರೆಗೆ ಇರುವ ತೆರಿಗೆದಾರರಿಗೆ ವಿಳಂಬ ಶುಲ್ಕ 1,000 ರೂ. ಹಾಗು ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ 5,000 ರೂಪಾಯಿಯವರೆಗೂ ದಂಡ ವಿಧಿಸಲಾಗುತ್ತದೆ.

ಜುಲೈ 31, 2022 ರವರೆಗೆ ನೀವು ತೆರಿಗೆಯನ್ನು ಪಾವತಿಸದಿದ್ದರೆ ಬಾಕಿ ಇರುವ ಮೊತ್ತದ ಮೇಲೆ ಶೇಕಡಾ 1 ರಷ್ಟು ಬಡ್ಡಿ ಅನ್ವಯವಾಗುತ್ತದೆ. ಹೀಗಾಗಿ, ದಂಡದಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡವರು ಇಂದೇ ಬಾಕಿ ಇರುವ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿ. ಒಂದು ವೇಳೆ ನೀವು ಡಿಸೆಂಬರ್ 31 ರ ಗಡುವನ್ನೂ ಸಹ ತಪ್ಪಿಸಿಕೊಂಡರೆ ನಿಮ್ಮ ವಾರ್ಡ್‌ನ ಆದಾಯ ತೆರಿಗೆ ಆಯುಕ್ತರಿಗೆ ಕ್ಷಮಾದಾನಕ್ಕಾಗಿ ಮನವಿ ಸಲ್ಲಿಸಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಜುಲೈ 25, 2022 ರವರೆಗೆ ಮೂರು ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.