ಹೈದರಾಬಾದ್: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,870 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 200 ದಿನಗಳಲ್ಲಿ ಸತತವಾಗಿ ಎರಡನೇ ದಿನ 20,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,82,520ರಷ್ಟಾಗಿದೆ.
- " class="align-text-top noRightClick twitterSection" data="">
378 ಮಂದಿ ಸೋಂಕಿತರು ಕೋವಿಡ್ಗೆ ಬಲಿಯಾಗಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 4,47,751ಕ್ಕೆ ತಲುಪಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಕೇರಳದಲ್ಲೇ 11,196 ಪ್ರಕರಣಗಳು ಪತ್ತೆಯಾಗಿ, 149 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ- ಅಂಶಗಳು ತಿಳಿಸಿವೆ.
ಇದನ್ನೂ ಓದಿ: ವಿಶ್ವ ಹೃದಯ ದಿನ: ಬಾಂಧವ್ಯ ಬೆಸೆಯುವ 'ಹೃದಯ'ದ ಮಹತ್ವ ಇಲ್ಲಿದೆ
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣ 87.66 ಕೋಟಿ (87,66,63,490)ಗೂ ಮೀರಿದೆ. 54,13,332 ಡೋಸ್‌ಗಳನ್ನು ಮಂಗಳವಾರದಂದು ನೀಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಸೆಪ್ಟೆಂಬರ್ 27 ರವರೆಗೆ ಒಟ್ಟು 56,74,50,185 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 15,04,713 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.