ETV Bharat / bharat

ದೇಶದಲ್ಲಿ ಇದೇ ಮೊದಲು! ವಿಧಾನಸಭೆ ಕ್ಷೇತ್ರದ 201 ಬೂತ್‌ಗಳ ಸಂಪೂರ್ಣ ಚುನಾವಣಾ ಜವಾಬ್ದಾರಿ ಮಹಿಳೆಯರ ಹೆಗಲಿಗೆ

author img

By PTI

Published : Nov 17, 2023, 1:51 PM IST

Chhattisgarh assembly elections: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸಭೆ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಿಕೊಂಡಿದ್ದಾರೆ.

Raipur North assembly
ರಾಯ್‌ಪುರ ಉತ್ತರ ವಿಧಾನಸಭಾ ಕ್ಷೇತ್ರ

ರಾಯ್‌ಪುರ(ಛತ್ತೀಸ್‌ಗಢ): ರಾಜಧಾನಿ ರಾಯ್‌ಪುರದ ವಿಧಾನಸಭಾ ಕ್ಷೇತ್ರವೊಂದರ ಎಲ್ಲಾ 201 ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನ ಪ್ರಕ್ರಿಯೆಯ ಹೊಣೆಗಾರಿಕೆಯನ್ನು ಮಹಿಳೆಯರಿಗೆ ವಹಿಸಲಾಗಿದೆ. ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಮಹಿಳೆಯರು ವಿಧಾನಸಭೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ 70 ಸ್ಥಾನಗಳಿಗೆ ನಡೆಯುತ್ತಿರುವ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಯ್‌ಪುರ ನಗರದ ಉತ್ತರ ಕ್ಷೇತ್ರದಲ್ಲಿ 201 ಮತಗಟ್ಟೆಗಳಿದ್ದು, ಎಲ್ಲವೂ ‘ಸಂಗ್ವಾರಿ ಬೂತ್‌’ ಆಗಿವೆ. ಅಧ್ಯಕ್ಷರಿಂದ ಹಿಡಿದು ಮತಗಟ್ಟೆ ಅಧಿಕಾರಿಯವರೆಗೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಅಂದರೆ ಇಡೀ ವಿಧಾನಸಭೆಯಲ್ಲಿ ಅಧ್ಯಕ್ಷೆ, ಮತಗಟ್ಟೆ ಅಧಿಕಾರಿ, ಭದ್ರತಾ ಸಿಬ್ಬಂದಿ ಸೇರಿದಂತೆ 804 ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ, ಇದರೊಂದಿಗೆ ಸುಮಾರು 200 ಮಹಿಳೆಯರನ್ನು ಮೀಸಲು ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಛತ್ತೀಸ್‌ಗಢದ ಮುಖ್ಯ ಚುನಾವಣಾಧಿಕಾರಿ ಹಾಗೂ ಐಎಎಸ್ ಅಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಳೆ, "ಲಿಂಗ ಸಮಾನತೆಯ ವಿಷಯದಲ್ಲಿ ಛತ್ತೀಸ್‌ಗಢವು ದೇಶದಲ್ಲಿ ಗಮನ ಸೆಳೆದಿದೆ. ಪ್ರತಿ ಹಂತದಲ್ಲೂ ಪುರುಷರಿಗಿಂತ ಮಹಿಳೆಯರ ಭಾಗವಹಿಸುವಿಕೆ ಅಧಿಕವಿದೆ. ಪರಿಣಾಮ ರಾಜಧಾನಿ ರಾಯ್‌ಪುರದ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕೆಲಸವನ್ನು ಮಹಿಳೆಯರಿಗೆ ವಹಿಸಲಾಗಿದೆ. ಇಲ್ಲಿನ ಲಿಂಗ ಅನುಪಾತವು ಸಹ ಆರೋಗ್ಯಕರವಾಗಿದೆ. ಅಂದರೆ ಪ್ರತಿ 1010 ಮಹಿಳೆಯರಿಗೆ 1000 ಪುರುಷರು ಇದ್ದಾರೆ. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ" ಎಂದರು.

ರಾಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸರ್ವೇಶ್ವರ ನರೇಂದ್ರ ಭುರೆ ಮಾತನಾಡಿ, ಚುನಾವಣಾ ಪ್ರಕ್ರಿಯೆಯ ಆರಂಭದಲ್ಲಿಯೇ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಮಹಿಳೆಯರಿಗೆ ವಹಿಸುವ ಆಲೋಚನೆ ಬಂದಿತು. ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾದ ನಂತರ ಯೋಜನೆ ರೂಪಿಸಲಾಗಿದೆ. ಇಡೀ ತಂಡವು ಮಹಿಳೆಯರನ್ನು ಒಳಗೊಂಡಿರುವುದು ಐತಿಹಾಸಿಕ ಘಟನೆ. ಈ ಮಹತ್ವದ ಜವಾಬ್ದಾರಿಯನ್ನು ಅವರು ನಿರ್ವಹಿಸುವ ವಿಶ್ವಾಸವಿದೆ. ರಾಯ್‌ಪುರ ನಗರ ದಕ್ಷಿಣ ವಿಭಾಗದಲ್ಲಿ ಅರ್ಧದಷ್ಟು ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮಧ್ಯಪ್ರದೇಶದ 230, ಛತ್ತೀಸ್​ಗಢದ 70 ಕ್ಷೇತ್ರಗಳಿಗೆ ಮತದಾನ

ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕೆಲಸ ನಿಭಾಯಿಸುತ್ತಿರುವ ಉಮಾ ವರ್ಮಾ ಮಾತನಾಡಿ, ಜಿಲ್ಲಾಡಳಿತ ನಮಗೆ ಜವಾಬ್ದಾರಿ ವಹಿಸಿರುವುದು ಸಂತಸದ ವಿಚಾರ. ಅತ್ಯಂತ ಜವಾಬ್ದಾರಿಯಿಂದ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದರು. ಮತ್ತೋರ್ವ ಮಹಿಳೆ ನಿಶಾ ರಾಮ್‌ಟೆಕೆ ಮಾತನಾಡಿ, ಪುರುಷ ಅಧಿಕಾರಿಗಳಿಲ್ಲದಿದ್ದರೂ ಮಹಿಳಾ ಅಧಿಕಾರಿಗಳು ಮತದಾನದಂತಹ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಅವಕಾಶ ನೀಡಲಾಗಿದೆ. ಇದು ಇಡೀ ದೇಶಕ್ಕೆ ಉದಾಹರಣೆಯಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.