ETV Bharat / bharat

ಅಬ್ದುಲ್ ಕಯ್ಯುಮ್ ನಿಯಾಜಿ POK ನೂತನ ಪ್ರಧಾನಿ.. ನೇಮಕ ಆದೇಶ ಹೊರಡಿಸಿದ Imran Khan - lawmaker Abdul Qayyum Niazi

ಸುದೀರ್ಘ ಸಮಾಲೋಚನೆ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಪಾಕ್ ಆಕ್ರಮಿತ ಕಾಶ್ಮೀರದ ಮುಂದಿನ ಪ್ರಧಾನಿಯಾಗಿ ಶಾಸಕರಾದ ಅಬ್ದುಲ್ ಕಯ್ಯುಮ್ ನಿಯಾಜಿಯನ್ನು ನೇಮಕ ಮಾಡಿದ್ದಾರೆ.

pok
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​
author img

By

Published : Aug 4, 2021, 5:51 PM IST

ಇಸ್ಲಾಮಾಬಾದ್​: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ತಮ್ಮ ಪಕ್ಷದ ಶಾಸಕರಾದ ಅಬ್ದುಲ್ ಕಯ್ಯುಮ್ ನಿಯಾಜಿಯನ್ನು ಪಾಕ್ ಆಕ್ರಮಿತ ಕಾಶ್ಮೀರದ ಮುಂದಿನ ಪ್ರಧಾನಿಯಾಗಿ ನೇಮಿಸಿದ್ದಾರೆ.ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಬ್ಬಾಸ್ ಪುರ್ - ಪೂಂಚ್ ಪ್ರದೇಶದಿಂದ ನಿಯಾಜಿ ಗೆಲುವು ಸಾಧಿಸಿದ್ದರು.

53 ಸದಸ್ಯರ ಸದನದಲ್ಲಿ ಇಮ್ರಾನ್​ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ - ಇ - ಇನ್ಸಾಫ್ (ಪಿಟಿಐ) ಪಕ್ಷವು 32 ಸ್ಥಾನಗಳನ್ನು ಪಡೆದುಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಸರ್ಕಾರ ರಚಿಸುತ್ತಿರುವುದು ಇದೇ ಮೊದಲು.

POK ನಲ್ಲಿ ನಡೆದ ಇತ್ತೀಚಿನ ಚುನಾವಣೆಯನ್ನು ಭಾರತ ತಿರಸ್ಕರಿಸಿದೆ. ಇದು ಪಾಕಿಸ್ತಾನದ "ತನ್ನ ಅಕ್ರಮ ಆಕ್ರಮಿತ ಮರೆಮಾಚುವ" ಪ್ರಯತ್ನ ಈ ಬಗ್ಗೆ ತಾನು ತೀವ್ರ ಪ್ರತಿಭಟನೆಯನ್ನು ಮಾಡಿದ್ದಾಗಿ ಭಾರತ ಹೇಳಿದೆ.

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿ, ಪ್ರಧಾನಿ ಖಾನ್ ಅವರು PoKಯಲ್ಲಿ ಪಿಟಿಐ ಸರ್ಕಾರವನ್ನು ಮುನ್ನಡೆಸಲು ನಿಯಾಜಿ ಅವರನ್ನು ಆಯ್ಕೆ ಮಾಡಿದರು ಎಂದು ತಿಳಿಸಿದ್ದಾರೆ. ಸುದೀರ್ಘ ಸಮಾಲೋಚನೆ ಮತ್ತು ಕೆಲವು ಸಲಹೆಗಳ ಪರಿಶೀಲನೆಯ ನಂತರ, ಪಾಕಿಸ್ತಾನದ ಪ್ರಧಾನಿ ಪಿಟಿಐ ಪಕ್ಷ ಅಧ್ಯಕ್ಷ ಇಮ್ರಾನ್ ಖಾನ್ ಅವರು ಹೊಸದಾಗಿ ಚುನಾಯಿತರಾದ ಶಾಸಕ ಶ್ರೀ ಅಬ್ದುಲ್ ಕಯ್ಯುಮ್ ನಿಯಾಜಿ ಅವರನ್ನು ಪಿಒಕೆ ಪ್ರಧಾನಿ ಹುದ್ದೆಗೆ ನಾಮ ನಿರ್ದೇಶನ ಮಾಡಿದ್ದಾರೆ ಎಂದು ಅವರು ಬರೆದಿದ್ದಾರೆ.

ನಿಯಾಜಿ ಎರಡು ವರ್ಷಗಳ ಹಿಂದೆ ಪಿಟಿಐಗೆ ಸೇರುವ ಮೊದಲು ಅಖಿಲ ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಸಮ್ಮೇಳನದ ಸದಸ್ಯರಾಗಿದ್ದರು. ಅವರು 2006ರಲ್ಲಿ ಮುಸ್ಲಿಂ ಸಮ್ಮೇಳನದ ವೇದಿಕೆಯಿಂದ ಆಯ್ಕೆಯಾದರು ಮತ್ತು ಆಹಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇಮ್ರಾನ್​ ಶುಕ್ರವಾರ ಮತ್ತು ಶನಿವಾರ ಸರ್ದಾರ್ ತನ್ವೀರ್ ಇಲ್ಯಾಸ್, ಬ್ಯಾರಿಸ್ಟರ್ ಸುಲ್ತಾನ್ ಮಹಮೂದ್, ಖವಾಜಾ ಫಾರೂಕ್, ಸಾದಿಕ್ ಮತ್ತು ನಿಯಾಜಿ ಸೇರಿದಂತೆ ಇತರ ಚುನಾಯಿತ ಸದಸ್ಯರನ್ನು ಸಂದರ್ಶಿಸಿದ್ದರು.

ಸದನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್) ಕ್ರಮವಾಗಿ 12 ಮತ್ತು 7 ಸ್ಥಾನಗಳನ್ನು ಹೊಂದಿವೆ. ಆಲ್ ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ್ ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್ ಪಾರ್ಟಿ ತಲಾ ಒಂದು ಸ್ಥಾನ ಗೆದ್ದಿದೆ. ಆಡಳಿತ ಪಕ್ಷದ ಅಭ್ಯರ್ಥಿಗಳಾದ ಅನ್ವರುಲ್ ಹಕ್ ಮತ್ತು ರಿಯಾಜ್ ಗುಜ್ಜಾರ್ ಅವರು ಕ್ರಮವಾಗಿ ಸ್ಪೀಕರ್ ಮತ್ತು ಉಪ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಇನ್ನು ಪಿಒಕೆಯಲ್ಲಿನ ಚುನಾವಣೆಗಳ ಕುರಿತಾಗಿ ಮಾತನಾಡುತ್ತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನವು "ಈ ಭಾರತೀಯ ಭೂಪ್ರದೇಶಗಳ ಮೇಲೆ ಯಾವುದೇ ಸ್ಥಾನಮಾನವನ್ನು ಹೊಂದಿಲ್ಲ" ಮತ್ತು ಪಾಕ್​ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಭಾರತೀಯ ಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.