ರಾಜ್ಯ...
- ಬೆ. 8ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ
- ಬೆಳಗ್ಗೆ 10.30ಕ್ಕೆ ಕಂದಾಯ ಸಚಿವ ಆರ್.ಅಶೋಕ್ ದೊಡ್ಡಬಳ್ಳಾಪುರಕ್ಕೆ ಭೇಟಿ
- ಬೆಳಗ್ಗೆ 11ಕ್ಕೆ ಶೇಶಾದ್ರಿಪುರಂ ಕಾಲೇಜಿನಲ್ಲಿ ಕೋವಿರಕ್ಷಾ ಬಗ್ಗೆ ಸುದ್ದಿಗೋಷ್ಠಿ
- ಬೆಳಗ್ಗೆ 11.30ಕ್ಕೆ ವಿಕಾಸಸೌಧ - ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್ ಪ್ರಗತಿ ಪರಿಶೀಲನಾ ಸಭೆ
- ಬೆಳಗ್ಗೆ 11.30ಕ್ಕೆ ಕೃಷ್ಣದಲ್ಲಿ ವಿಮಾನ ನಿಲ್ದಾಣ ಯೋಜನೆಗಳ ಕುರಿತು ಸಿಎಂ ಸಭೆ
- ಸಂಜೆ 4.30ಕ್ಕೆ ಕೃಷ್ಣದಲ್ಲಿ ನವಿಲೆ ಜಲಾಶಯ ಯೋಜನೆ ಕುರಿತು ಸಿಎಂ ಸಭೆ
- ಇಂದು ಉಪ ಕುಲಪತಿಗಳ ಜೊತೆ ಡಿಸಿಎಂ ಅಶ್ವತ್ಥ ನಾರಾಯಣ ವಿಡಿಯೋ ಕಾನ್ಫರೆನ್ಸ್
- ಇಂದು ಜಿಂದಾಲ್ ಸಂಸ್ಥೆಗೆ 3.667 ಎಕರೆ ಜಮೀನು ಪರಭಾರೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ
- ಇಂದು ರಾಜ್ಯದಲ್ಲಿನ ಕೆರೆಗಳ ಸಂರಕ್ಷಣೆ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್ಗಳ ವಿಚಾರಣೆ
- ಇಂದು ಶಿಕ್ಷಣ ಸಚಿವರು ಮತ್ತು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆ
ರಾಷ್ಟ್ರ...
- ಯಮುನಾ ಎಕ್ಸ್‌ಪ್ರೆಸ್ ಹೈವೇಯಲ್ಲಿ ಪ್ರಯಾಣಿಸುವವರಿಗೆ ಖುಷಿ ಸುದ್ದಿ, ಇಂದಿನಿಂದ ಫಾಸ್ಟ್‌ಟ್ಯಾಗ್ ಜಾರಿಗೆ
- ಗುಜರಾತ್ನ ಗಾಂಧಿನಗರದಲ್ಲಿ ಇಂದು ಬಿಜೆಪಿ ಶಾಸಕರ ಪ್ರಮುಖ ಸಭೆ
- ಗುಜರಾತ್ನಲ್ಲಿ ಇಂದಿನಿಂದ ಲವ್ ಜಿಹಾದ್ ಕಾನೂನು ಜಾರಿ
- ನವದೆಹಲಿ: ಚಿನ್ನಾಭರಣಗಳ ಹಾಲ್ ಮಾರ್ಕಿಂಗ್ ಇಂದಿನಿಂದ ಪ್ರಾರಂಭ
- ನವದೆಹಲಿ: ಬಂದ್ ಆಗಿದ್ದ 12ಕ್ಕೂ ಹೆಚ್ಚು ರೈಲುಗಳು ಇಂದಿನಿಂದ ಮತ್ತೆ ಪ್ರಾರಂಭ
- ಹರಿಯಾಣದ ಗುರುಗ್ರಾಮ್‌ನಲ್ಲಿ ಇಂದಿನಿಂದ ಸೆರೋ ಸಮೀಕ್ಷೆ ಪ್ರಾರಂಭ