ETV Bharat / bharat

ವೃದ್ಧಾಪ್ಯದ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಆಯುರ್ವೇದದ ಪರಿಹಾರಗಳು

author img

By

Published : Mar 6, 2021, 5:19 PM IST

ವೃದ್ಧಾಪ್ಯದಲ್ಲಿ ಆರೋಗ್ಯದ ಏರಿಳಿತಗಳು ಸಾಮಾನ್ಯ. ಹೀಗಾಗಿ ವೃದ್ಧಾಪ್ಯದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದ ಮೂಲಕ ಸೂಕ್ತ ಪರಿಹಾರಗಳು ಇಲ್ಲಿವೆ.

bone health
bone health

ಹೈದರಾಬಾದ್: ವೃದ್ಧಾಪ್ಯವು ಜೀವನದ ಅನಿವಾರ್ಯ ಹಂತವಾಗಿದೆ. ಆರೋಗ್ಯ ರೇಖೆಯಲ್ಲಿನ ಏರಿಳಿತಗಳು ಈ ಹಂತದಲ್ಲಿ ಸಾಮಾನ್ಯ. ಅನೇಕರು ಉಸಿರಾಟ, ವಿಸರ್ಜನೆ ಮತ್ತು ನರಮಂಡಲದ ವೈಫಲ್ಯಗಳಿಂದ ಬಳಲುತ್ತಿದ್ದಾರೆ.

ಆದ್ದರಿಂದ ಉಸಿರಾಟದ ತೊಂದರೆ, ಕೆಮ್ಮು ಮತ್ತು ಅಲರ್ಜಿಕ್ ಬ್ರಾಂಕೈಟಿಸ್ ಹಾಗೂ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮುಂತಾದ ಉಸಿರಾಟದ ತೊಂದರೆಗಳಿಗೆ ಆಯುರ್ವೇದದ ಮೂಲಕ ಸೂಕ್ತ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ.

  • ಕೆಮ್ಮು ಕಡಿಮೆಯಾಗುವವರೆಗೆ 5 ರಿಂದ 10 ಗ್ರಾಂ ಹರಿತಕಿ ಚೂರ್ಣವನ್ನು 5 ರಿಂದ 10 ಮಿಲಿ ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ.
  • 2 ರಿಂದ 3 ಗ್ರಾಂ ತ್ರಿಕಾತು ಚೂರ್ಣವನ್ನು ಜೇನುತುಪ್ಪ ಅಥವಾ ಬೆಚ್ಚಗಿನ ನೀರಿನಿಂದ ಕೆಲವು ದಿನಗಳವರೆಗೆ ತೆಗೆದುಕೊಳ್ಳಿ.
  • ಕೆಮ್ಮಿನ ವಿರುದ್ಧ ಹೋರಾಡಲು 10 ಗ್ರಾಂ ವಾಸಕಂತಕರಿ ಲೇಹ ಸೇವಿಸಿ.
  • ಗಂಟಲು ಕಿರಿಕಿರಿ ತಪ್ಪಿಸಲು ಸೀತೋಫಲಾದಿ ಚೂರ್ಣ ಅಥವಾ ತಾಲಿಸಾಡಿ ಚೂರ್ಣ ತೆಗೆದುಕೊಳ್ಳಿ.

ವಯಸ್ಸಾದಂತೆ, ಮೂಳೆಗಳು ಮತ್ತು ಸ್ನಾಯುಗಳು ತಮ್ಮ ಸ್ವಾಧೀನ ಕಳೆದುಕೊಳ್ಳುತ್ತವೆ ಮತ್ತು ಇದು ಕೀಲು ನೋವಿಗೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ.

  • ಪೀಡಿತ ಕೀಲುಗಳಲ್ಲಿ ಕಾರ್ಪೂರಾದಿ ಎಣ್ಣೆಯನ್ನು ದಿನಕ್ಕೆ ಎರಡು ಬಾರಿ ಹಚ್ಚಿ.
  • ನೋವು ತೀವ್ರವಾಗಿದ್ದರೆ ಎರಡು ಬಾರಿ ನಿರ್ಗುಂಡಿ ಎಣ್ಣೆಯನ್ನು ಹಚ್ಚಿ.
  • ತ್ರಯೋದಸಂಗ ಗುಗ್ಗುಳು ಎರಡು ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ.

ವೃದ್ಧಾಪ್ಯದಲ್ಲಿ, ಮೂತ್ರದ ಹರಿವು, ಆಗಾಗ್ಗೆ ಮೂತ್ರ ವಿಸರ್ಜನೆ, ಪ್ರಾಸ್ಟೇಟ್ ಗ್ರಂಥಿಯ ವಿರೂಪಗೊಳ್ಳುವಿಕೆ ಮತ್ತು ಹಿಗ್ಗುವಿಕೆ, ಪುರುಷರಲ್ಲಿ ಸೆಮಿನಲ್ ಡಿಸ್ಚಾರ್ಜ್ ವಿಳಂಬ ಮತ್ತು ಸ್ತ್ರೀಯರಲ್ಲಿ ಅಲ್ಪ ಮುಟ್ಟಿನ ಅಥವಾ ದೀರ್ಘಕಾಲದ ಮುಟ್ಟಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ.

  • 5 ಗ್ರಾಂ ಕೊತ್ತಂಬರಿ ಬೀಜದ ಪುಡಿಯನ್ನು 100 ಮಿಲಿ ಲೀಟರ್ ನೀರಿನಲ್ಲಿ 12 ಗಂಟೆಗಳ ಕಾಲ ನೆನೆಸಿಡಿ. ನಂತರ ಫಿಲ್ಟರ್ ಮಾಡಿ, ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ.
  • ಒಂದು ತಿಂಗಳ ಕಾಲ ಪ್ರತಿದಿನ ಚಂದ್ರಪ್ರಭಾ ವಟಿಯ 2 ಟ್ಯಾಬ್‌ಗಳನ್ನು ತೆಗೆದುಕೊಳ್ಳಿ.

ಪಾರ್ಕಿನ್ಸನ್, ಆಲ್​ಝೈಮರ್, ಕ್ಯಾನ್ಸರ್, ನಿದ್ರಾಹೀನತೆ, ಮಧುಮೇಹ, ಆತಂಕ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯ ಅಪಾಯವೂ ವೃದ್ಧಾಪ್ಯದಲ್ಲಿದೆ. ಸಮೀಪದೃಷ್ಟಿ, ಗ್ಲುಕೋಮಾ, ಕಣ್ಣಿನ ಪೊರೆ ಮುಂತಾದ ಕಣ್ಣಿನ ತೊಂದರೆಗಳು, ಕಿವುಡುತನ ಮತ್ತು ತುರಿಕೆ ಮುಂತಾದ ಚರ್ಮದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಪರಿಹಾರ ಇಲ್ಲಿದೆ.

  • ಕ್ಷೀಣತೆ, ಶಕ್ತಿ ನಷ್ಟ ಮತ್ತು ದೌರ್ಬಲ್ಯಕ್ಕೆ ಅಶ್ವಗಂಧ ರಸಾಯನ 5 ಗ್ರಾಂ, ದಿನಕ್ಕೆ ಎರಡು ಬಾರಿ 100 ಮಿಲಿ ಲೀಟರ್ ಹಾಲಿನೊಂದಿಗೆ ತೆಗೆದುಕೊಳ್ಳಿ.
  • ಪಾರ್ಕಿನ್ಸನ್ ಕಾಯಿಲೆಗೆ, ಮೂರು ತಿಂಗಳ ಕಾಲ ಮಲಗುವ ಮೊದಲು 100 ಮಿಲಿ ಲೀಟರ್ ಹಾಲಿನೊಂದಿಗೆ 5 ಗ್ರಾಂ ಕಪಿಕಾಚು ಪುಡಿಯನ್ನು ತೆಗೆದುಕೊಳ್ಳಿ.
  • ನಿದ್ರಾಹೀನತೆಗೆ ನಿದ್ರೆಯ ಮೊದಲು 5ರಿಂದ 10 ನಿಮಿಷಗಳ ಕಾಲ ಪಾದಗಳಿಗೆ ಕ್ಷೀರಬಾಲ ತೈಲದಿಂದ ಮಸಾಜ್ ಮಾಡಿ.
  • ಮಾನಸಿಕ ಅಸ್ವಸ್ಥತೆಗೆ 1 ರಿಂದ 3 ತಿಂಗಳುಗಳವರೆಗೆ ದಿನಕ್ಕೆ ಎರಡು ಬಾರಿ ಗುಡುಚಿ ಮತ್ತು ಬ್ರಾಹ್ಮಿ ಪುಡಿಗಳನ್ನು ಸಮಾನ ಪ್ರಮಾಣದಲ್ಲಿ 5 ಗ್ರಾಂ ನೀರಿನೊಂದಗೆ ಮಿಶ್ರಣ ಮಾಡಿ ತೆಗೆದುಕೊಳ್ಳಿ.

ಕೆಳಗಿನ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿ:

  • ಎದೆಯ ಎಕ್ಸ್​ ರೇ
  • ರಕ್ತದಲ್ಲಿನ ಸಕ್ಕರೆ ಮಟ್ಟ, ಲಿಪಿಡ್ ಪ್ರೊಫೈಲ್, ಹಿಮೋಗ್ಲೋಬಿನ್ ಶೇಕಡಾವಾರು, ರಕ್ತ ಯೂರಿಯಾ ಮತ್ತು ಸೀರಮ್ ಕ್ರಿಯೇಟಿನೈನ್ ಅನ್ನು ಆರು ತಿಂಗಳಿಗೊಮ್ಮೆ ಪರಿಶೀಲಿಸಿ
  • ವರ್ಷಕ್ಕೊಮ್ಮೆ ಹೊಟ್ಟೆಯ ಅಲ್ಟ್ರಾಸೌಂಡ್
  • ಪ್ರತಿವರ್ಷ ಮೂಳೆ ಸಾಂದ್ರತೆ ಪರೀಕ್ಷೆ, ವಿಟಮಿನ್ ಡಿ, ಬಿ 12 ಮತ್ತು ಕ್ಯಾಲ್ಸಿಯಂ ಪರೀಕ್ಷೆ
  • ಪ್ರತಿ ವರ್ಷ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ತಪಾಸಣೆ
  • ಮಹಿಳೆಯರಲ್ಲಿ ಪ್ರತಿವರ್ಷ ಮ್ಯಾಮೊಗ್ರಾಮ್, ಶ್ರೋಣಿಯ ಪರೀಕ್ಷೆ, ಪ್ಯಾಪ್ ಸ್ಮೀಯರ್ ಮತ್ತು ಎಚ್‌ಪಿವಿ ಪರೀಕ್ಷೆ
  • ವರ್ಷಕ್ಕೊಮ್ಮೆ ಮೂತ್ರ ಪರೀಕ್ಷೆ
  • ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ
  • ಯಾವುದೇ ಶ್ರವಣ ದೋಷ ಕಂಡುಬಂದಲ್ಲಿ ಶ್ರವಣ ಪರೀಕ್ಷೆ
  • ವರ್ಷಕ್ಕೊಮ್ಮೆ ದಂತ ಪರೀಕ್ಷೆ
  • ವರ್ಷಕ್ಕೊಮ್ಮೆ ಯಕೃತ್ತಿನ ಕಾರ್ಯ ಪರೀಕ್ಷೆಗಳು (ಎಲ್‌ಎಫ್‌ಟಿ) ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು (ಆರ್‌ಎಫ್‌ಟಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.