ETV Bharat / bharat

ಹಳಿ ತಪ್ಪುವುದರಲ್ಲಿ ಭಾರತೀಯ ರೈಲ್ವೆ ಇಲಾಖೆ ವಿಶ್ವದಾಖಲೆ ನಿರ್ಮಿಸಿದೆ: ಮಮತಾ ಬ್ಯಾನರ್ಜಿ ವ್ಯಂಗ್ಯ - Mamata on Railways derailments

author img

By PTI

Published : 3 hours ago

ರೈಲುಗಳು ಪದೆ ಪದೇ ಹಳಿ ತಪ್ಪಿದ ಘಟನೆಗಳು ವರದಿಯಾಗುತ್ತಿದ್ದು, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ (ETV Bharat)

ಕೋಲ್ಕತ್ತಾ (ಪಶ್ಚಿಮಬಂಗಾಳ): ಜಲಪೈಗುರಿಯಲ್ಲಿ ಗೂಡ್ಸ್​​ ರೈಲು ಹಳಿ ತಪ್ಪಿದ್ದನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದಾರೆ. ಭಾರತೀಯ ರೈಲ್ವೆಗಳು ಹಳಿ ತಪ್ಪುವುದರಲ್ಲಿ ವಿಶ್ವದಾಖಲೆ ಸೃಷ್ಟಿಸಿವೆ. ಹಳಿ ತಪ್ಪಿದ ಘಟನೆಗಳು ವರದಿಯಾಗುತ್ತಲ್ಲೇ ಇವೆ ಎಂದು ಲೇವಡಿ ಮಾಡಿದ್ದಾರೆ.

ಹಳಿ ತಪ್ಪುದರಲ್ಲಿ ಭಾರತೀಯ ರೈಲ್ವೆ ಇಲಾಖೆ ವಿಶ್ವ ದಾಖಲೆ ನಿರ್ಮಿಸಿದೆ. ನಮ್ಮ ರಾಜ್ಯದ ಜಲಪೈಗುರಿ ಜಿಲ್ಲೆಯಲ್ಲಿ ಖಾಲಿ ಗೂಡ್ಸ್ ರೈಲಿನ ಕೆಲವು ವ್ಯಾಗನ್‌ಗಳು ಹಳಿಗಳನ್ನು ತಪ್ಪಿವೆ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ಭಾರತೀಯ ರೈಲ್ವೆ ಇಲಾಖೆ ಎಷ್ಟು ಗಂಭೀರವಾಗಿದೆ ಎಂಬುದು ತಿಳಿಯುತ್ತದೆ ಎಂದು ಛೇಡಿಸಿದ್ದಾರೆ.

ಬಿರ್ಭೂಮ್‌ನಲ್ಲಿ ಮಂಗಳವಾರ ನಡೆದ ಆಡಳಿತ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರಿಗೆ ಮಾತನಾಡಿದ ಅವರು, "ರೈಲ್ವೆಯಲ್ಲಿ ಏನಾಗುತ್ತಿದೆ? ಇವತ್ತಿಗೂ ಹಳಿ ತಪ್ಪಿದ ಸುದ್ದಿಗಳು ಬರುತ್ತಲೇ ಇವೆ. ರೈಲು ಹಳಿತಪ್ಪುವುದರಲ್ಲಿ ವಿಶ್ವ ದಾಖಲೆ ನಿರ್ಮಿಸಿರಬೇಕು. ಆದರೂ, ಈ ಬಗ್ಗೆ ಸರ್ಕಾರ ಏನೊಂದು ಹೇಳಿಕೆಯನ್ನೂ ನೀಡುತ್ತಿಲ್ಲ" ಎಂದರು.

"ಜನರ ಸುರಕ್ಷತೆ ಮತ್ತು ಭದ್ರತೆ ಅಪಾಯದಲ್ಲಿದೆ. ಅವರು ರೈಲುಗಳಲ್ಲಿ ಪ್ರಯಾಣಿಸಲು ಜನರು ಹೆದರುತ್ತಾರೆ. ರೈಲ್ವೆ ಸಚಿವರು ಎಲ್ಲಿದ್ದಾರೆ? ಚುನಾವಣೆ ಸಮಯದಲ್ಲಿ ಕೇವಲ ಮತ ಕೇಳುವುದರಿಂದ ಪ್ರಯೋಜನವಾಗುವುದಿಲ್ಲ. ಜನರು ಅಪಾಯದಲ್ಲಿದ್ದಾಗ ಅವರ ಜೊತೆಗಿರಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಮಂಗಳವಾರ ಬೆಳಗ್ಗೆ ಜಲ್ಪೈಗುರಿ ಜಿಲ್ಲೆಯ ನ್ಯೂ ಮೇನಗುರಿ ರೈಲು ನಿಲ್ದಾಣದಲ್ಲಿ ಖಾಲಿ ಗೂಡ್ಸ್ ರೈಲಿನ ಐದು ವ್ಯಾಗನ್‌ಗಳು ಹಳಿತಪ್ಪಿದವು. ಬೆಳಗ್ಗೆ 6.20ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ತಾವು ರೈಲ್ವೆ ಸಚಿವರಾಗಿದ್ದಾಗ, ಬಂಗಾಳಕ್ಕೆ 2 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಿದ್ದೇನೆ. ಇಲಾಖೆಯನ್ನು ಅತಿ ಸುಗಮವಾಗಿ ನಡೆಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ರೈಲ್ವೇ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ದೇಶಾದ್ಯಂತ ರೈಲುಗಳನ್ನು ಹಳಿತಪ್ಪಿಸಲು ಆಗಸ್ಟ್‌ನಿಂದ ಇಲ್ಲಿಯವರೆಗೂ 18 ಪ್ರಯತ್ನಗಳು ನಡೆದಿವೆ ಎಂದು ಉಲ್ಲೇಖಿಸಿದೆ. ಇದು ಆತಂಕಕಾರಿ ವಿಚಾರವಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಮತ್ತೊಂದು ಗೂಡ್ಸ್​ ರೈಲು: ನಾಲ್ಕು ತಿಂಗಳಲ್ಲಿ ಮೂರನೇ ಅವಘಡ - GOODS TRAIN DERAILED

ETV Bharat Logo

Copyright © 2024 Ushodaya Enterprises Pvt. Ltd., All Rights Reserved.