ETV Bharat / bharat

ಅಕ್ರಮ ಗಣಿಗಾರಿಕೆ: ಸಿಎಂ ಹೇಮಂತ್ ಸೊರೇನ್ ಆಪ್ತನಿಗೆ ಸೇರಿದ 30 ಕೋಟಿ ಮೌಲ್ಯದ ಹಡಗು ಜಪ್ತಿ - 30 ಕೋಟಿ ಮೌಲ್ಯದ ಹಡಗು ಜಪ್ತಿ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಅವರನ್ನು ಇತ್ತೀಚಿಗೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಮಿಶ್ರಾ ಅವರಿಗೆ ಸೇರಿದ ಹಡಗನ್ನು ಜಪ್ತಿ ಮಾಡಲಾಗಿದೆ.

illegal-mining-ed-seizes-rs-30-cr-vessel-operated-by-man-linked-to-jkhand-cm-aide
ಅಕ್ರಮ ಗಣಿಗಾರಿಕೆ: ಸಿಎಂ ಹೇಮಂತ್ ಸೊರೇನ್ ಆಪ್ತನಿಗೆ ಸೇರಿದ 30 ಕೋಟಿ ಮೌಲ್ಯದ ಹಡಗು ಜಪ್ತಿ
author img

By

Published : Jul 27, 2022, 11:01 PM IST

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಬಂಧಿತ ಆಪ್ತನ ಮಾಹಿತಿ ಮೇರೆಗೆ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಕಲ್ಲಿನ ಚಿಪ್ಸ್ ಮತ್ತು ಕಲ್ಲು ಬಂಡೆಗಳನ್ನು ಸಾಗಿಸಲು ಬಳಸಲಾಗಿದ್ದ 30 ಕೋಟಿ ರೂಪಾಯಿ ಮೌಲ್ಯದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಅವರನ್ನು ಇತ್ತೀಚಿಗೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಡಗು ಪಂಕಜ್ ಮಿಶ್ರಾ ಅವರಿಗೆ ಸೇರಿದ್ದು, ಇದಕ್ಕೆ ಇನ್ಫ್ರಾಲಿಂಕ್-III ಎಂದು ಹೆಸರಿಡಲಾಗಿದೆ. ಸುಕರ್‌ಗಢ್ ಘಾಟ್‌ನಲ್ಲಿ ಯಾವುದೇ ಅನುಮತಿಯಿಲ್ಲದೇ, ಕಾನೂನುಬಾಹಿರವಾಗಿ ಈ ಹಡಗನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ರಾಜೇಶ್ ಯಾದವ್ ಅಲಿಯಾಸ್ ದಹು ಯಾದವ್ ಅವರ ನಿರ್ದೇಶನದ ಮೇರೆಗೆ ಪಂಕಜ್ ಮಿಶ್ರಾ ಮತ್ತು ಇತರರೊಂದಿಗೆ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಕಲ್ಲಿನ ಚಿಪ್ಸ್ , ಕಲ್ಲು ಬಂಡೆಗಳನ್ನು ಸಾಗಿಸಲು ಹಡಗನ್ನು ನಡೆಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಈ ಹಿಂದೆ ಬಿಷ್ಣು ಯಾದವ್ ಮತ್ತು ಪವಿತ್ರಾ ಯಾದವ್ ಅವರಿಗೆ ಸೇರಿದ ಮಾ ಅಂಬಾ ಸ್ಟೋನ್ ವರ್ಕ್ಸ್‌ನ ಎರಡು ಕಲ್ಲು ಕ್ರಷರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೊತೆಗೆ ಸಾಹೇಬ್‌ಗಂಜ್‌ನ ಮೌಜಾ ಮಜಿಕೋಲಾದಲ್ಲಿ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಸಾಗಿಸುತ್ತಿದ್ದ ಮೂರು ಟ್ರಕ್‌ಗಳನ್ನು ಇಡಿ ಜಪ್ತಿ ಮಾಡಿತ್ತು.

ಇದನ್ನೂ ಓದಿ: ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಮತ್ತೆ ₹15 ಕೋಟಿ ನಗದು ಪತ್ತೆ.. ಮುಂದುವರಿದ ಎಣಿಕೆ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.