ETV Bharat / bharat

ಲಕ್ಷ್ಮೀಧರ್ ಬೆಹೆರಾ ಐಐಟಿ ನಿರ್ದೇಶಕ ಸ್ಥಾನಕ್ಕೆ ಅರ್ಹ ವ್ಯಕ್ತಿಯಲ್ಲ: ಜೈರಾಮ್ ರಮೇಶ್ - prof laxmidhar behera iit mandi

ಹಿಮಾಚಲ ಪ್ರದೇಶದ ಐಐಟಿ ಮಂಡಿಯ ನಿರ್ದೇಶಕ ಪ್ರೊ. ಲಕ್ಷ್ಮೀಧರ್ ಬೆಹೆರಾ ಅವರು ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.

Jairam Ramesh
ಜೈರಾಮ್ ರಮೇಶ್
author img

By PTI

Published : Sep 8, 2023, 8:41 AM IST

ನವದೆಹಲಿ : ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತದಂಥ ಘಟನೆಗಳು ಮಾಂಸಾಹಾರ ಸೇವನೆಯಿಂದಾಗಿ ಸಂಭವಿಸುತ್ತಿವೆ ಎಂದು ಹೇಳಿಕೆ ನೀಡಿರುವ ಐಐಟಿ ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಅವರು ಆ ಸ್ಥಾನಕ್ಕೆ ಅರ್ಹರಾದ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಬೆಹೆರಾ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ ಆ್ಯಪ್​ನಲ್ಲಿ ಅಭಿಪ್ರಾಯ ಹಂಚಿಕೊಂಡ ರಮೇಶ್, "ಪ್ಲಾಸ್ಟಿಕ್ ಸರ್ಜರಿ ನಮ್ಮ ಪೂರ್ವಜರಿಗೆ ತಿಳಿದಿತ್ತು ಎಂದು ಪ್ರಧಾನಿ ಮಾತನಾಡಿದ್ದರು. ಹವಾಮಾನ ಬದಲಾಗುವುದಿಲ್ಲ, ನಾವು ಬದಲಾವಣೆ ಮಾಡುತ್ತೇವೆ ಎಂದು ಮಕ್ಕಳಿಗೆ ತಿಳಿಸಿದ್ದರು. ಹಿರಿಯ ಮಂತ್ರಿಯೊಬ್ಬರು ನ್ಯೂಟನ್ ಮತ್ತು ಐನ್‌ಸ್ಟೈನ್‌ ಅವರನ್ನೇ ಗೊಂದಲಗೊಳಿಸಿದರೆ ಮತ್ತೊಬ್ಬರು ಡಾರ್ವಿನ್‌ನನ್ನು ಪಠ್ಯಪುಸ್ತಕಗಳಿಂದ ಹೊರಗಿಡುವುದನ್ನು ಸಮರ್ಥಿಸಿಕೊಂಡಿದ್ದರು. ಈಗ, ಪ್ರತಿಷ್ಠಿತ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಧರ್ ಬೆಹೆರಾ ಅವರ ಈ ಹೇಳಿಕೆ ಅವೈಜ್ಞಾನಿಕವಾಗಿದೆ. ಇದು ನಿಜವಾಗಿಯೂ ಅವರು ಆ ಹುದ್ದೆ ಹೊಂದಲು ಯೋಗ್ಯರಲ್ಲ ಎಂದು ತೋರಿಸುತ್ತದೆ. ಇಂತಹ ಹೇಳಿಕೆಗಳು ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚು ಹಾನಿ ಮಾಡುತ್ತವೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ , ಒಂದೇ ಕುಟುಂಬದ ಐವರು ನಾಪತ್ತೆ, ಮತ್ತೆ ಪ್ರವಾಹ ಪರಿಸ್ಥಿತಿ : ವಿಡಿಯೋ

ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಂದೊಂದು ವಿಷಯ. ಆದರೆ, ಅಧಿಕಾರದಲ್ಲಿರುವ ಜನರು ಹೇಳುತ್ತಿರುವ ವಿಜ್ಞಾನ ಮತ್ತು ಕ್ರ್ಯಾಕ್‌ಪಾಟ್ ಸಿದ್ಧಾಂತಗಳು (Crackpot Theories) ವಿಭಿನ್ನವಾಗಿವೆ. ಪ್ರಾಣಿಗಳ ಮೇಲಿನ ಕ್ರೌರ್ಯದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ ಎನ್ನುವ ಮೂಲಕ ಲಕ್ಷ್ಮೀಧರ್ ಬೆಹೆರಾ ಇನ್ನು ಮುಂದೆ ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : Cloud burst : ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು

ವಿವಾದಿತ ಹೇಳಿಕೆ ಏನು? : ಲಕ್ಷ್ಮೀಧರ್ ಬೆಹೆರಾ ಅವರು ಮಾತನಾಡಿರುವ ವೈರಲ್‌ ವಿಡಿಯೋದಲ್ಲಿ, ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ದುರಂತವನ್ನು ಮನುಷ್ಯರು ಮಾಂಸಹಾರ ತಿನ್ನುವುದರೊಂದಿಗೆ ಜೋಡಿಸಿ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ, ಮಕ್ಕಳಿಗೆ ಮಾಂಸಾಹಾರ ಸೇವಿಸದಂತೆಯೂ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ನೀವು ಮುಗ್ಧ ಪ್ರಾಣಿಗಳನ್ನು ಕಡಿಯುತ್ತಿದ್ದೀರಿ, ಇದು ಪರಿಸರ ಅವನತಿ ಹೊಂದಲು ಪ್ರಮುಖ ಕಾರಣ. ಇದರಿಂದಾಗಿ ಭೂಕುಸಿತ, ಮೇಘಸ್ಫೋಟ ಸೇರಿದಂತೆ ಇತರೆ ಹಲವು ಪ್ರಾಕೃತಿಕ ವಿಕೋಪಗಳು ಮರುಕಳಿಸುತ್ತಿರುತ್ತವೆ. ಆದ್ದರಿಂದ ನೀವು ಒಳ್ಳೆಯ ಮನುಷ್ಯರಾಗಲು ಏನು ಮಾಡಬೇಕು ಅಂದರೆ ಮಾಂಸ ತಿನ್ನುವುದನ್ನು ನಿಲ್ಲಿಸಬೇಕು, ಎಲ್ಲರೂ ಮಾಂಸಹಾರ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದ್ದಾರೆ. (ಪಿಟಿಐ)

ಇದನ್ನೂ ಓದಿ : ಧಾರಾಕಾರ ಮಳೆ , ಪ್ರವಾಹಕ್ಕೆ ತತ್ತರ.. ಪ್ರವಾಹದಲ್ಲಿ ಸಿಲುಕಿದ ಐವರು ಅರಣ್ಯಾಧಿಕಾರಿಗಳು ಸೇರಿ 10 ಜನ ರಕ್ಷಿಸಿದ ಸೇನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.