ETV Bharat / bharat

ಕ್ಯೂಎಸ್​ ವರ್ಲ್ಡ್​​ ರ‍್ಯಾಂಕಿಂಗ್​​​​​ನಲ್ಲಿ ಸ್ಥಾನ ಪಡೆದ ಐಐಟಿ ಬಾಂಬೆ - ಜಾಗತಿಕ ಯೂನಿವರ್ಸಿಟಿ ಶ್ರೇಯಾಂಕ

ಕ್ಯೂಎಸ್​​ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು ವಿಶ್ವವಿದ್ಯಾನಿಲಯದ ಶ್ರೇಯಾಂಕಗಳ ಪ್ರತಿ ವರ್ಷ ಪ್ರಕಟಿಸುತ್ತದೆ.

IIT Bombay ranked in QS world ranking
IIT Bombay ranked in QS world ranking
author img

By

Published : Jun 28, 2023, 10:59 AM IST

ಮುಂಬೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮುಡಿಗೆ ಹೊಸ ಕಿರೀಟವೊಂದು ಏರಿದೆ. ಜಾಗತಿಕ ಯೂನಿವರ್ಸಿಟಿ ಶ್ರೇಯಾಂಕದ ಕ್ವಾಕ್ವಾರೆಲ್ಲಿ ಸೈಮಂಡ್ಸ್ (ಕ್ಯೂಎಸ್)ನಲ್ಲಿ ಪ್ರಕಟವಾದ ವಿಶ್ವದ ಅಗ್ರ 150 ವಿಶ್ವವಿದ್ಯಾನಿಲಯಗಳಲ್ಲಿ ಇದು ಕೂಡ ಸ್ಥಾನಗಳಿಸಿದೆ.

ಮುಂಬೈ ಐಐಟಿ ಈ ಸ್ಥಾನ ಪಡೆದಿದ್ದಕ್ಕೆ ಕ್ಯೂಎಸ್​ ಸಂಸ್ಥಾಪಕ ಮತ್ತು ಸಿಇಒ ನುನ್ಜಿಒ ಕ್ವಕ್ವೆರೆಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವರ್ಷ ಈ ಪಟ್ಟಿಯಲ್ಲಿ 2900 ಸಂಸ್ಥೆಗಳು ಈ ಶ್ರೇಯಾಂಕದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ ಭಾರತದ 45 ವಿಶ್ವ ವಿದ್ಯಾಲಯಗಳು ಕೂಡ ಈ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ.

ಕ್ಯೂಎಸ್​​ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು ವಿಶ್ವವಿದ್ಯಾನಿಲಯದ ಶ್ರೇಯಾಂಕಗಳ ಪ್ರತಿ ವರ್ಷ ಪ್ರಕಟಿಸುತ್ತದೆ. ಅದು ಜಾಗತಿಕ ಒಟ್ಟಾರೆ ಮತ್ತು ವಿಷಯದ ಶ್ರೇಯಾಂಕಗಳನ್ನು ಒಳಗೊಂಡಿದೆ. ಈ ಮೊದಲು ಅಂದರೆ 2016ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) 147 ರ ಶ್ರೇಯಾಂಕದೊಂದಿಗೆ ಅಗ್ರ 200ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.

ಈಗಾಗಲೇ ಮುಂಬೈ ಐಐಟಿ ಭಾರತದಲ್ಲಿ ನಂಬರ್​ 1 ಸ್ಥಾನದಲ್ಲಿದೆ. ಕಳೆದ ವರ್ಷ ಕ್ಯೂಎಸ್​​ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಇದು 177 ನೇ ಶ್ರೇಯಾಂಕವನ್ನು ಪಡೆದುಕೊಂಡಿತ್ತು. ಈ ವರ್ಷ 149 ನೇ ಶ್ರೇಯಾಂಕಕ್ಕೆ ಏರಿಕೆ ಕಂಡಿದೆ. ಇದೇ ಮೊದಲ ಬಾರಿಗೆ ಐಐಟಿ ಬಾಂಬೆ ಕ್ಯೂಎಸ್ ಶ್ರೇಯಾಂಕದಲ್ಲಿ ಅಗ್ರ 150 ರೊಳಗೆ ಸ್ಥಾನ ಪಡೆದಿದೆ. 2023ರಲ್ಲಿ ಸಂಸ್ಥೆಯು ಕಾರ್ಯಕ್ಷಮತೆಯನ್ನು 23 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದೆ.

ಸಂಸ್ಥೆಯು ಉದ್ಯೋಗದಾತ ಖ್ಯಾತಿಯಲ್ಲಿ 81.9 ಅಂಕಗಳನ್ನು ಪಡೆದುಕೊಂಡಿದೆ. ಪ್ರತಿ ಅಧ್ಯಾಪಕರಿಗೆ ಉಲ್ಲೇಖದಲ್ಲಿ 73.1, ಶೈಕ್ಷಣಿಕ ಖ್ಯಾತಿಯಲ್ಲಿ 55.5, ಉದ್ಯೋಗದ ಫಲಿತಾಂಶದಲ್ಲಿ 47.4, ಸುಸ್ಥಿರತೆಯಲ್ಲಿ 54.9, ಅಧ್ಯಾಪಕ-ವಿದ್ಯಾರ್ಥಿ ಅನುಪಾತದಲ್ಲಿ 18.9, ಅಂತಾರಾಷ್ಟ್ರೀಯ ಅಧ್ಯಾಪಕರ ಅನುಪಾತದಲ್ಲಿ 4.7 ಮತ್ತು ಅಂತಾರಾಷ್ಟ್ರೀಯ ಅಧ್ಯಾಪಕರಲ್ಲಿ 4.5 ಅಂಕಗಳನ್ನು ಪಡೆದುಕೊಂಡಿದೆ. ಈ ಒಂಬತ್ತು ನಿಯತಾಂಕಗಳಲ್ಲಿ, ಉದ್ಯೋಗದಾತರ ಖ್ಯಾತಿಯು ಜಾಗತಿಕವಾಗಿ 69 ರ ಶ್ರೇಣಿಯೊಂದಿಗೆ ಐಐಟಿ ಬಾಂಬೆಗೆ ಪ್ರಬಲವಾದ ಸ್ಥಾನದಲ್ಲಿದೆ.

ಭಾರತೀಯ ವಿಶ್ವವಿದ್ಯಾನಿಲಯಗಳ ಕಾರ್ಯಕ್ಷಮತೆಯನ್ನು ಈ ಪಟ್ಟಿ ಎತ್ತಿ ತೋರಿಸಿದೆ. ಕ್ಯೂಎಸ್​​ ಮುಖ್ಯಸ್ಥರು ಈ ವರ್ಷದ ಶ್ರೇಯಾಂಕಕ್ಕಾಗಿ 2900 ಸಂಸ್ಥೆಗಳನ್ನು ರೇಟ್ ಮಾಡಿದ್ದಾರೆ ಮತ್ತು 45 ವಿಶ್ವವಿದ್ಯಾಲಯಗಳು ಈ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿ ಹೋಲಿಸಿದರೆ ಶೇ 297 ಹೆಚ್ಚಳವಾಗಿದೆ ಎಂಬುದನ್ನು ತೋರಿಸುತ್ತಿದೆ.

ಕ್ಯೂಎಸ್​​ ವಿಶ್ವ ವಿಶ್ವವಿದ್ಯಾನಿಲಯದ ಶ್ರೇಯಾಂಕದ 20 ನೇ ಆವೃತ್ತಿಯನ್ನು ಪ್ರಾರಂಭಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು QS ಸಂಸ್ಥಾಪಕ ಮತ್ತು CEO, ನುಂಜಿಯೊ ಕ್ವಾಕ್ವಾರೆಲ್ಲಿ ಹೇಳಿದ್ದಾರೆ. ಕಾರ್ಯಕ್ಷಮತೆಯನ್ನು ಸುಧಾರಿಸಲು ಭಾರತೀಯ ವಿಶ್ವವಿದ್ಯಾಲಯಗಳನ್ನು ನಾನು ಅಭಿನಂದಿಸುತ್ತೇನೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ. ’’ ಈ ವರ್ಷದ ಶ್ರೇಯಾಂಕ ವ್ಯವಸ್ಥೆಗಾಗಿ ನಾವು ಶ್ರೇಯಾಂಕ ನೀಡಿದ್ದೇವೆ. ನಾವು 2900 ಸಂಸ್ಥೆಗಳನ್ನು ರೇಟ್ ಮಾಡಿದ್ದೇವೆ. 45 ಭಾರತೀಯ ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿ 297ರಷ್ಟು ಹೆಚ್ಚಳವಾಗಿದೆ ಎಂದು ಕ್ವಾಕ್ವಾರೆಲ್ಲಿ ವಿವರಿಸಿದ್ದಾರೆ.

ಚಂಡೀಗಢ ವಿಶ್ವವಿದ್ಯಾನಿಲಯವು 780 ರ‍್ಯಾಂಕ್​​​ ಗಳಿಸಿ ಉತ್ತಮ ಸಾಧನೆ ಮಾಡಿದ್ದು, ಅದಕ್ಕೆ ಕೂಡ ಅಭಿನಂದಿಸುತ್ತೇನೆ Qs ಸಿಇಒ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಭಾರತೀಯ ವಿಶ್ವವಿದ್ಯಾಲಯಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾವು ನೋಡುತ್ತೇವೆ ಎಂದು QS ಸಂಸ್ಥಾಪಕ ಮತ್ತು CEO ಹೇಳಿದ್ದಾರೆ.

ಇದನ್ನೂ ಓದಿ: ಪ್ರಸಿದ್ಧ ಪುರಿ ಜಗನ್ನಾಥದಲ್ಲಿಂದು ಬಹುದಾ ಯಾತ್ರೆಯ ಸಂಭ್ರಮ.. ಏನಿದು ಬಹುದಾ ಯಾತ್ರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.