ಭೋಪಾಲ್ (ಮಧ್ಯಪ್ರದೇಶ): ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಕಾಂಗ್ರೆಸ್ನಿಂದ ಬುಡಕಟ್ಟು ಜನಾಂಗದ ಜನರ ನಿರ್ಲಕ್ಷ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ್ದು, ಇದೀಗ ನಿರ್ಲಕ್ಷಿಸಲ್ಪಟ್ಟ ಬುಡಕಟ್ಟು ಸಮುದಾಯದವರು ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ ಎಂದರು.
ಬುಡಕಟ್ಟು ಸಮುದಾಯ ಭಾರತೀಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಭಗವಾನ್ ರಾಮ ಕೂಡ ವನವಾಸದ ಸಂದರ್ಭದಲ್ಲಿ ಆದಿವಾಸಿಗಳಿಂದ ಸ್ಫೂರ್ತಿ ಪಡೆದುಕೊಂಡಿದ್ದನು. ಬುಡಕಟ್ಟು ಜನರೊಂದಿಗೆ ರಾಮ ಕಳೆದ ಸಮಯ ಅವರ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿತ್ತು. ಜೊತೆಗೆ ಅವರನ್ನು ಅತ್ಯಂತ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿತ್ತು ಎಂದು ಹೇಳಿದರು.
-
Madhya Pradesh: PM Narendra Modi pays floral tribute to tribal freedom fighter #BirsaMunda and greets people at Janjatiya Gaurav Diwas Mahasammelan in Bhopal. pic.twitter.com/QKCiAfTzdA
— ANI (@ANI) November 15, 2021 " class="align-text-top noRightClick twitterSection" data="
">Madhya Pradesh: PM Narendra Modi pays floral tribute to tribal freedom fighter #BirsaMunda and greets people at Janjatiya Gaurav Diwas Mahasammelan in Bhopal. pic.twitter.com/QKCiAfTzdA
— ANI (@ANI) November 15, 2021Madhya Pradesh: PM Narendra Modi pays floral tribute to tribal freedom fighter #BirsaMunda and greets people at Janjatiya Gaurav Diwas Mahasammelan in Bhopal. pic.twitter.com/QKCiAfTzdA
— ANI (@ANI) November 15, 2021
ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಶತದಿನೋತ್ಸವವನ್ನು ಜನ್ಜಾತೀಯ (Janjatiya Gaurav Diwas) ಗೌರವ ದಿವಸವಾಗಿ ಆಚರಣೆ ಮಾಡಲಾಗುತ್ತಿದ್ದು, ಅದರಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಆದಿವಾಸಿಗಳು ಇದೀಗ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ. ಬಿಜೆಪಿ ಸರ್ಕಾರ ಆರಂಭಿಸಿರುವ ಅನೇಕ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ ಹಾಗೂ ಸರ್ದಾರ್ ಪಟೇಲ್ ಜಯಂತಿಯ ರೀತಿಯಲ್ಲೇ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಶತಮಾನೋತ್ಸವವನ್ನು ಆಚರಣೆ ಮಾಡಲಾಗುವುದು ಎಂದರು.
-
Addressing the Janjatiya Gaurav Divas Mahasammelan in Bhopal. https://t.co/WrVPZrqni0
— Narendra Modi (@narendramodi) November 15, 2021 " class="align-text-top noRightClick twitterSection" data="
">Addressing the Janjatiya Gaurav Divas Mahasammelan in Bhopal. https://t.co/WrVPZrqni0
— Narendra Modi (@narendramodi) November 15, 2021Addressing the Janjatiya Gaurav Divas Mahasammelan in Bhopal. https://t.co/WrVPZrqni0
— Narendra Modi (@narendramodi) November 15, 2021
ಇದನ್ನೂ ಓದಿ: 6 ವರ್ಷಗಳ ಹಿಂದೆ ನಮ್ಮ ರೈಲ್ವೇ ನಿಲ್ದಾಣಕ್ಕೆ ಬರುತ್ತಿದ್ದವರು ಪರಿಸ್ಥಿತಿ ನೋಡಿ ಶಪಿಸುತ್ತಿದ್ದರು: ಮೋದಿ
ಈ ಹಿಂದೆ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಬುಡಕಟ್ಟು ಜನಾಂಗಕ್ಕೆ ಆದ್ಯತೆ ನೀಡಿರಲಿಲ್ಲ. ದೇಶದ ಶೇ. 10ರಷ್ಟು ಬುಡಕಟ್ಟು ಜನರು ನಿರ್ಲಕ್ಷ್ಯಕ್ಕೊಳಗಾಗಿದ್ದರು. ಆದರೆ ಇದೀಗ ಅಂತಹ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು. ಇದೇ ವೇಳೆ ಕೋವಿಡ್-19 ವಿರುದ್ಧದ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಆದಿವಾಸಿಗಳು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು.