ETV Bharat / bharat

ಆರ್​ಟಿಇ ಸೀಟು ಕೊಡದಿದ್ರೆ ನಿಮ್ಗೆ ಜೈಲು ಸೀಟು ಗ್ಯಾರಂಟಿ: ಅಧಿಕಾರಿಗಳಿಗೆ ಆಂಧ್ರ ಹೈಕೋರ್ಟ್ ಎಚ್ಚರಿಕೆ - ಆಂಧ್ರ ಹೈಕೋರ್ಟ್ ಎಚ್ಚರಿಕೆ

ಆರ್​ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಬಡಮಕ್ಕಳಿಗೆ ಸೀಟು ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಪ್ರದೇಶ ಹೈಕೋರ್ಟ್, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಆರ್​ಟಿಇ ಸೀಟು ಕೊಡದಿದ್ರೆ ನಿಮ್ಗೆ ಜೈಲು ಸೀಟು ಗ್ಯಾರಂಟಿ: ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ
you are guaranteed a jail seat: Andhra High Court warns
author img

By

Published : Sep 2, 2022, 1:10 PM IST

ಅಮರಾವತಿ: ಖಾಸಗಿ ಶಾಲೆಗಳಲ್ಲಿನ ಶೇ 25 ರಷ್ಟು ಪ್ರಥಮ ದರ್ಜೆಯ ಸೀಟುಗಳನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್​ಟಿಇ) ಉಚಿತವಾಗಿ ತುಂಬಿಕೊಳ್ಳಲು ವಿಫಲವಾದ ಆಂಧ್ರ ಪ್ರದೇಶ ಸರ್ಕಾರದ ನಡೆಗೆ ಹೈಕೋರ್ಟ್ ಆಕ್ಷೇಪಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರ್​ಟಿಇ ಸೀಟುಗಳನ್ನು ತುಂಬಿಕೊಳ್ಳುವಂತೆ ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸದ ಸರ್ಕಾರ, ಆ ಶಾಲೆಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುತ್ತಿದೆ ಎಂದು ಕೋರ್ಟ್ ಹೇಳಿದೆ. ಬಡ ವಿದ್ಯಾರ್ಥಿಗಳ ಜೀವನೊಂದಿಗೆ ಯಾಕೆ ಆಟವಾಡುತ್ತಿರುವಿರಿ ಎಂದು ಪ್ರಶ್ನಿಸಿರುವ ಕೋರ್ಟ್, ಕಾಯ್ದೆಯನ್ನು ಕೇವಲ ಮಾತಿನಲ್ಲಿ ಅಲ್ಲದೆ ಕೃತಿಯಲ್ಲಿ ಜಾರಿ ಮಾಡುವಂತೆ ತಾಕೀತು ಮಾಡಿದೆ.

25ರಷ್ಟು ಸೀಟುಗಳನ್ನು ಭರ್ತಿ ಮಾಡಿದ ಪುರಾವೆ ತೋರಿಸದಿದ್ದಲ್ಲಿ ಅಧಿಕಾರಿಗಳಿಗೆ ಜೈಲು ಸೀಟು ಹಂಚಿಕೆ ಮಾಡುವುದಾಗಿ ನ್ಯಾಯಾಲಯ ನಿಂದನೆ ಪ್ರಕರಣದ ಪ್ರತಿವಾದಿಗಳಾದ ಮುಖ್ಯ ಕಾರ್ಯದರ್ಶಿ (ಸಿಎಸ್), ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಮಕ್ಕಳು ಶಾಲೆಗೆ ಸೇರಬೇಕು. ಇಲ್ಲವಾದರೆ ನೀವು ಜೈಲಿನಲ್ಲಿರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಆರ್​ಟಿಇ ಅಡಿಯಲ್ಲಿ ಶಾಲೆಗಳಿಗೆ ಎಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂಬ ವಿವರವನ್ನು ಹಾಜರುಪಡಿಸಬೇಕು. ನೀಡಿದ ವಿವರಗಳು ತೃಪ್ತಿಕರವಾಗಿಲ್ಲದಿದ್ದರೆ, ವೈಯಕ್ತಿಕ ಹಾಜರಾತಿಗೆ ಆದೇಶಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು ವಿವರ ಸಲ್ಲಿಸಲು ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 7ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಡಿವಿಎಸ್ ಎಸ್ ಸೋಮಯಾಜುಲು ಅವರನ್ನೊಳಗೊಂಡ ಪೀಠ ಗುರುವಾರ ಈ ಆದೇಶ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ಹಂಚಿಕೆ ಮಾಡುವ ನ್ಯಾಯಾಲಯದ ತೀರ್ಪು ಜಾರಿಯಾಗುತ್ತಿಲ್ಲ ಎಂದು ವಕೀಲ ತಾಂಡವ ಯೋಗೇಶ್ ಅವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಪೀಠ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಗುರುವಾರ ಈ ಪ್ರಕರಣ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ವಿಚಾರಣೆಗೆ ಬಂದಿತ್ತು. ವಕೀಲ ಯೋಗೇಶ್ ವಾದಿಸಿ, ಸೀಟುಗಳ ಬದಲಾವಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದ 16 ಸಾವಿರ ಖಾಸಗಿ ಶಾಲೆಗಳಲ್ಲಿ ತಲಾ ಕನಿಷ್ಠ ಐದು ಸೀಟು ಹಂಚಿಕೆ ಮಾಡಿದರೂ ಒಟ್ಟು 80 ಸಾವಿರ ಮಕ್ಕಳಿಗೆ ಉಚಿತ ಪ್ರವೇಶ ಸಿಗಲಿದೆ ಎಂದರು.

ಸರ್ಕಾರಿ ವಕೀಲ ನಾಗರಾಜು ಮಾತನಾಡಿ, ಸೀಟುಗಳ ಬದಲಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತಿದ್ದೇವೆ. ವಿವರಗಳನ್ನು ನ್ಯಾಯಾಲಯದ ಮುಂದೆ ಇಡಲು ಕಾಲಾವಕಾಶ ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.