ETV Bharat / bharat

ಉದ್ಯೋಗವೇ ಇಲ್ಲದ ಮೇಲೆ ಮೀಸಲಾತಿ ಯಾಕೆ? - ಕೇಂದ್ರಕ್ಕೆ ರಾಹುಲ್ ಪ್ರಶ್ನೆ - ಕೇಂದ್ರ ಸರ್ಕಾರ

ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟದ ನಿರ್ಧಾರವನ್ನು ಟೀಕಿಸಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

Rahul Gandhi
ರಾಹುಲ್ ಗಾಂಧಿ
author img

By

Published : Aug 28, 2021, 12:45 PM IST

ನವದೆಹಲಿ: ಉದ್ಯೋಗದಲ್ಲಿ ಮೀಸಲಾತಿಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಉದ್ಯೋಗಗಳೇ ಇಲ್ಲದಿದ್ದ ಮೇಲೆ ಮೀಸಲಾತಿಯ ಉಪಯೋಗವೇನು ಎಂದು ಪ್ರಶ್ನಿಸಿದ್ದಾರೆ.

  • ‘मित्रि’करण की सूनामी-

    न रोज़गार है, न आने वाले सालों में होगा तो आरक्षण का क्या मतलब?#IndiaOnSale

    — Rahul Gandhi (@RahulGandhi) August 27, 2021 " class="align-text-top noRightClick twitterSection" data=" ">

ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್​ ಮಾಡಿರುವ ರಾಗಾ, ಇದು 'ಸ್ನೇಹ'ದ ಸುನಾಮಿ. ಉದ್ಯೋಗಗಳೇ ಇಲ್ಲದ ಮೇಲೆ ಅಥವಾ ಮುಂಬರುವ ವರ್ಷಗಳಲ್ಲಿ ಉದ್ಯೋಗಗಳೇ ಇಲ್ಲದಿದ್ದರೆ ಮೀಸಲಾತಿ ನೀಡಿ ಏನು ಪ್ರಯೋಜನ? ಎಂದು ಬರೆದು #IndiaOnSale ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿದ್ದಾರೆ.

  • खेत को रेत नहीं होने देंगे,
    मित्रों को भेंट नहीं देने देंगे।

    कृषि विरोधी क़ानून वापस लो! #FarmersProtest

ಇದನ್ನೂ ಓದಿ: ರಸ್ತೆ, ರೈಲ್ವೆ ಸೇರಿ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಕೇಂದ್ರ ಸರ್ಕಾರದ ನಿರ್ಧಾರ.. ಕಾರಣ?

ದೇಶದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಆಸ್ತಿಗಳನ್ನು ನಗದೀಕರಣಗೊಳಿಸಿ 6 ಲಕ್ಷ ಕೋಟಿ ರೂಪಾಯಿ ಸಂಗ್ರಹಕ್ಕೆ ಕೇಂದ್ರ ಮುಂದಾಗಿದೆ. ಈ ಬಗ್ಗೆ ಮತ್ತೊಂದು ಟ್ವೀಟ್​ ಮಾಡಿ ರಾಹುಲ್​ ಗಾಂಧಿ ಕಿಡಿ ಕಾರಿದ್ದಾರೆ. "ನಾವು ಹೊಲವನ್ನು ಕಾಂಕ್ರೀಟ್‌ ಮಾಡಲು ಬಿಡುವುದಿಲ್ಲ, ಅವುಗಳನ್ನು 'ಸ್ನೇಹಿತರಿಗೆ' (ಉದ್ಯಮಿಗಳಿಗೆ) ಉಡುಗೊರೆಯಾಗಿ ನೀಡಲು ಅನುಮತಿಸುವುದಿಲ್ಲ. ಮೊದಲು ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.