ETV Bharat / bharat

ಅಗತ್ಯಬಿದ್ದರೆ ಲವ್​ ಜಿಹಾದ್​ ವಿರುದ್ಧ ಕಠಿಣ ನಿಯಮ ಜಾರಿ: ಮಧ್ಯಪ್ರದೇಶ ಸಿಎಂ - ಈಟಿವಿ ಭಾರತ್​ ಕನ್ನಡ

ಕೆಲವರು ಬುಡಕಟ್ಟು ಮಹಿಳೆಯರ ಆಸ್ತಿ ಕಬಳಿಕೆ ಉದ್ದೇಶದಿಂದ ಅವರನ್ನು ಮದುವೆಯಾಗುತ್ತಿರುವುದು ಕಂಡು ಬಂದಿದೆ.

rules against love jihad
ಮಧ್ಯಪ್ರದೇಶ ಸಿಎಂ
author img

By

Published : Dec 5, 2022, 10:28 AM IST

ಇಂದೋರ್(ಮಧ್ಯಪ್ರದೇಶ): ಪರಿಶಿಷ್ಟ ಬುಡಕಟ್ಟು ಮಹಿಳೆಯರ ಭೂಮಿ ಕಸಿಯುವ ಉದ್ಧೇಶದಿಂದ ಮದುವೆಯಾಗುತ್ತಿರುವ​ ವಿರುದ್ಧ ಅಗತ್ಯ ಬಿದ್ದರೆ ಕಠಿಣ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ. ಈಗಾಗಲೇ ಲವ್​ ಜಿಹಾದ್​ ವಿರುದ್ಧ ರಾಜ್ಯದಲ್ಲಿ ನಿಯಮ ರೂಪಿಸಲಾಗಿದ್ದು, ಅಗತ್ಯ ಬಿದ್ದರೆ ಇದನ್ನು ಇನ್ನಷ್ಟು ಕಠಿಣಗೊಳಿಸಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಲವಂತವಾಗಿ, ಪ್ರಭಾವ, ಬಲವಂತ, ಆಮಿಷ, ಅಥವಾ ಮದುವೆಯ ಭರವಸೆ ಸೇರಿದಂತೆ ಇತರೆ ಮೋಸದ ವಿಧಾನ ಬಳಸಿ ಧಾರ್ಮಿಕವಾಗಿ ಮತಾಂತರ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಕಠಿಣ ಸಂದೇಶ ರವಾನಿಸಿದರು.

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ತಾಂತ್ಯ ಭಿಲ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನೆರೆದಿದ್ದ ಬುಡಕಟ್ಟು ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಲವ್​ ಜಿಹಾನ್​ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಇದರಿಂದಾಗಿ ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಬುಡಕಟ್ಟು ಮಹಿಳೆಯರ ಆಸ್ತಿ ಕಬಳಿಕೆ ಉದ್ದೇಶದಿಂದ ಅವರನ್ನು ಮದುವೆಯಾಗುತ್ತಿರುವುದು ಕಂಡು ಬಂದಿದೆ. ಸ್ವಾತಂತ್ರ್ಯದ ಹಕ್ಕಿನ ನಿಯಮವನ್ನು ಕಠಿಣಗೊಳಿಸಿ, ಭೂಮಿ ಕಬಳಿಕೆಗಾಗಿ ಮದುವೆಯಾಗಿರುವ ಪ್ರಕರಣಗಳನ್ನು ಪರಿಶೀಲನೆ ನಡೆಸಲಾಗುವುದು. ಇದು ಭೂಮಿ ಕಬಳಿಕೆಗೆ ನಡೆಸುವ ಲವ್​ ಜಿಹಾದ್​ ಅನ್ನು ನಿಲ್ಲಿಸಲಿದೆ ಎಂದರು.

ನಾನು ಪಂಚಾಯತ್‌ಗಳ ವಿಸ್ತರಣೆಯನ್ನು ಪರಿಶಿಷ್ಟ ಪ್ರದೇಶಗಳ ಕಾಯ್ದೆ ಬಗ್ಗೆ ಅರಿತಿದ್ದೇನೆ. ಅದರ ಬಗ್ಗೆ ವಿವರವಾಗಿ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದೇನೆ. ಈ ಕಾಯ್ದೆಯು ಆಯಾ ಗ್ರಾಮಸಭೆಗಳಿಗೆ ಹಲವು ಹಕ್ಕುಗಳು ಮತ್ತು ಅಧಿಕಾರಗಳನ್ನು ನೀಡಿರುವುದರಿಂದ ಬುಡಕಟ್ಟು ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.

ಪಂಚಾಯಿತಿಗಳಿಗೆ ಕಂದಾಯ ದಾಖಲೆಗಳ ಮೇಲೆ ಹಿಡಿತವಿಲ್ಲ ಎಂಬ ಕಾರಣಕ್ಕಾಗಿಯೇ ಅನೇಕ ಪ್ರಭಾವಿ ವ್ಯಕ್ತಿಗಳು ತಮ್ಮ ಜಾಗದಲ್ಲಿ ಜಮೀನುಗಳನ್ನು ತಮ್ಮ ಸೇವಕರ ಹೆಸರಿಗೆ ಅವರಿಗೇ ತಿಳಿಯದಂತೆ ಖರೀದಿಸುತ್ತಿದ್ದಾರೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಲು ಅವರ ಜಮೀನಿನ ದಾಖಲೆಗಳನ್ನು ಗ್ರಾಮಸಭೆಯಲ್ಲಿ ಇಡಬೇಕಾಗುತ್ತದೆ. ಐದು ವರ್ಷಗಳಲ್ಲಿ ಸಮುದಾಯದ ಜನರ ವಲಸೆ ನಿಲ್ಲುವ ರೀತಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಉದ್ಯೋಗ ಒದಗಿಸುವ ಯೋಜನೆ ಕುರಿತು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹೀಗೊಂದು ಲವ್ ಜಿಹಾದ್: ಸಿಖ್ ಎಂದು ಸುಳ್ಳು ಹೇಳಿ ಮದುವೆಯಾದ ಭೂಪ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.