ETV Bharat / bharat

ಬಿಜೆಪಿ ನಮಗೆ 8-10 ಸ್ಥಾನ ನೀಡದಿದ್ದರೆ ಯುಪಿಯಲ್ಲಿ ಸ್ವತಂತ್ರ ಸ್ಪರ್ಧೆ: ಕೇಂದ್ರ ಸಚಿವ ಅಠವಾಳೆ

author img

By

Published : Jan 10, 2022, 9:09 PM IST

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮಗೆ 8 ರಿಂದ 10 ಸ್ಥಾನಗಳನ್ನು ನೀಡುವಂತೆ ರಿಪಬ್ಲಿಕನ್​ ಪಕ್ಷದ ಅಧ್ಯಕ್ಷ, ಕೇಂದ್ರ ಸಚಿವ ರಾಮದಾಸ್​ ಅಠವಾಳೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ, ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

Ramdas Athavale on UP Election
Ramdas Athavale on UP Election

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಒಟ್ಟು ಏಳು ಹಂತಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಇದೀಗ ವಿವಿಧ ಪಕ್ಷಗಳ ನಡುವಿನ ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಮದಾಸ್​ ಅಠವಾಳೆ ಮಾತನಾಡಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಮದಾಸ್‌ ಅಠವಾಳೆ ಇದೀಗ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ 8-10 ಸ್ಥಾನ ನೀಡುವಂತೆ ಕೇಳಿಕೊಂಡಿದ್ದಾರೆ. ಇಷ್ಟೊಂದು ಸ್ಥಾನ ನೀಡದಿದ್ದರೆ ತಾವು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ನಾವು ಬಿಜೆಪಿ ಜೊತೆ ಇರುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ರಿಪಬ್ಲಿಕನ್​​ ಪಕ್ಷಕ್ಕೆ 8ರಿಂದ 10 ಸ್ಥಾನ ನೀಡಬೇಕು. ಮೈತ್ರಿ ಹೊಂದಾಣಿಕೆ ಆಗದಿದ್ದರೆ ನಾವೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಅಭಿನಂದನ್ ವರ್ಧಮಾನ್​​ ರೀತಿ ಮೀಸೆ ಬಿಟ್ಟ ಕಾನ್ಸ್‌ಟೇಬಲ್‌ ಅಮಾನತು, ಮರು ಸೇರ್ಪಡೆ

ಗೋವಾ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡದೇ ಬಿಜೆಪಿ ಜೊತೆ ಇರಲು ನಿರ್ಧರಿಸಿದ್ದೇವೆ. ಬಿಜೆಪಿ ಮತಗಳಿಗೆ ಕತ್ತರಿ ಹಾಕುವ ಯಾವುದೇ ಕೆಲಸ ನಾವು ಮಾಡಲ್ಲ. ಪಂಜಾಬ್​ನಲ್ಲಿ ಕಾಂಗ್ರೆಸ್ ಜನರ ನಂಬಿಕೆ ಕಳೆದುಕೊಂಡಿದೆ. ಬರುವ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.