ETV Bharat / bharat

ದೇಶದ ಶೇ.30 ಮುಸ್ಲಿಮರು ಒಗ್ಗೂಡಿದ್ರೆ 4 ಪಾಕಿಸ್ತಾನ ರಚಿಸಬಹುದು: ಟಿಎಂಸಿ ನಾಯಕ

ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆ ಸಮೀಪಿಸುತ್ತಿದೆ. ಇಲ್ಲಿನ ನ್ಯಾನೂರ್ (ಎಸ್‌ಸಿ) ಬಿರ್ಭುಮ್‌ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಎಂಸಿ ಪಕ್ಷದ ಅಭ್ಯರ್ಥಿ ಬಿಧಾನ್ ಚಂದ್ರ ಮಾಜಿ ಪರ ಪ್ರಚಾರ ನಡೆಸುತ್ತಿರುವಾಗ ಶೇಖ್ ಆಲಂ ಭಾರತವನ್ನು ಛಿದ್ರಗೊಳಿಸುವ ವಿವಾದಿತ ಹೇಳಿಕೆ ನೀಡಿದ್ದಾರೆ.

author img

By

Published : Mar 25, 2021, 7:08 PM IST

If 30% Muslims unite in India, 4 Pakistans will be formed, says TMC leader
ಟಿಎಂಸಿ ನಾಯಕ

ಕೋಲ್ಕತಾ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಪಕ್ಷದ ವ್ಯಾಪ್ತಿ ಮೀರಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಭಾರತವನ್ನು ತುಂಡರಿಸುವ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಆಲಂ ಬೆಚ್ಚಿ ಬೀಳಿಸುವ ಹೇಳಿಕೆ ನೀಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಬಿರ್ಭುಮ್ ಪ್ರದೇಶದ ನ್ಯಾನೂರ್‌ನ ಬಾಸಾದಲ್ಲಿ ಟಿಎಂಸಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಮುಸ್ಲಿಂ ಜನಸಂಖ್ಯೆಯ ಶೇಕಡಾ 30 ರಷ್ಟು ಜನರು ಒಗ್ಗೂಡಿದರೆ ನಾವು ನಾಲ್ಕು ಹೊಸ ಪಾಕಿಸ್ತಾನಗಳನ್ನು ಕಟ್ಟಬಹುದು ಎಂದಿದ್ದಾರೆ.

ನಾವು ಜನಸಂಖ್ಯೆಯಲ್ಲಿ ಶೇ 30ರಷ್ಟು ಇದ್ದೇವೆ. ಅವರು (ಹಿಂದೂಗಳು) ಶೇ.70 ಇದ್ದಾರೆ. ಅವರು ಶೇಕಡಾ 70 ರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಾರೆ. ನಮ್ಮ ಮುಸ್ಲಿಂ ಜನಸಂಖ್ಯೆಯು ಒಂದು ಬದಿಗೆ ಹೋದರೆ ನಾಲ್ಕು ಹೊಸ ಪಾಕಿಸ್ತಾನಗಳನ್ನು ರಚಿಸಬಹುದು. ಆಗ 70 ರಷ್ಟು ಜನಸಂಖ್ಯೆ ಎಲ್ಲಿಗೆ ಹೋಗುತ್ತದೆ? ಊಹಿಸಿಕೊಳ್ಳಿ ಎಂದು ಟಿಎಂಸಿ ನಾಯಕ ಬೆಂಕಿ ಹಚ್ಚಿದ್ದಾರೆ.

ನ್ಯಾನೂರ್ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಎಂಸಿ ಅಭ್ಯರ್ಥಿ ಬಿಧಾನ್ ಚಂದ್ರ ಮಾಜಿ ಪರ ಪ್ರಚಾರ ನಡೆಸುತ್ತಿರುವಾಗ ಶೇಖ್ ಈ ರೀತಿಯ ಕೆಟ್ಟ ಹೇಳಿಕೆ ನೀಡಿದ್ದಾರೆ.

  • TMC leaders like Sheikh Alam have the audacity to dream of 4 Pakistan because of Mamata Banerjee’s brazen appeasement politics over the last 10 years. She reduced the majority community in WB to second grade citizens, where they had to seek court approval even for Durga visarjan! https://t.co/OqCssgOSWi

    — Amit Malviya (@amitmalviya) March 25, 2021 " class="align-text-top noRightClick twitterSection" data=" ">

ಶೇಖ್ ಅವರ ಹೇಳಿಕೆಯನ್ನು ಬಿಜೆಪಿ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣದಿಂದಾಗಿ ಟಿಎಂಸಿ ನಾಯಕರು ಇಂತಹ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಟಿಎಂಸಿ ಮುಖ್ಯಸ್ಥರು ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಲ್ವಿಯಾ ಕಿಡಿ ಕಾರಿದ್ದಾರೆ.

ಶೇಖ್ ಆಲಂ ಅವರಂತಹ ಟಿಎಂಸಿ ನಾಯಕರು ಕಳೆದ 10 ವರ್ಷಗಳಲ್ಲಿ ಮಮತಾ ಬ್ಯಾನರ್ಜಿಯವರ ಲಜ್ಜೆಗೆಟ್ಟ ರಾಜಕಾರಣದಿಂದಾಗಿ ನಾಲ್ಕು ಪಾಕಿಸ್ತಾನದ ಕನಸು ಕಾಣುವ ಧೈರ್ಯ ಹೊಂದಿದ್ದಾರೆ. ಅವರು ರಾಜ್ಯದಲ್ಲಿನ ಬಹುಸಂಖ್ಯಾತ ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರಿಗೆ ಇಳಿಸಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.