ಔರಂಗಾಬಾದ್: ಬಿಹಾರದ ಗಯಾ ಮತ್ತು ಔರಂಗಾಬಾದ್ ಗಡಿ ಪ್ರದೇಶದಲ್ಲಿ ನಿಷೇಧಿತ ನಕ್ಸಲೀಯ ಸಂಘಟನೆಯಾದ ಸಿಪಿಐ-ಮಾವೋವಾದಿ ಐಇಡಿ ಸ್ಫೋಟಕವನ್ನು ಇಟ್ಟಿತ್ತು. ಇದು ಸ್ಫೋಟಿಸಿದ ಪರಿಣಾಮ ಓರ್ವ ರೈತ ಸಾವಿಗೀಡಾಗಿದ್ದಾನೆ. ಗಯಾ-ಔರಂಗಾಬಾದ್‌ನ ಛಕರ್‌ಬಂಧ ಮತ್ತು ಮದನ್‌ಪುರ ಪೊಲೀಸ್ ಠಾಣೆಗಳ ನಡುವಿನ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪ್ರಸ್ತುತ ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳ ಭದ್ರತಾ ಪಡೆಗಳು ಆಯಾ ಗಡಿ ಪ್ರದೇಶಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಮಾಹಿತಿಯ ಪ್ರಕಾರ, ಕಯಿಲ್ ಮಾಂಝಿ ಎಂಬ ರೈತ ತನ್ನ ದನಗಳನ್ನು ಓಡಿಸುತ್ತಾ ಗಯಾ - ಔರಂಗಾಬಾದ್‌ನ ಗಡಿ ಪ್ರದೇಶಕ್ಕೆ ಹೋಗಿದ್ದಾನೆ. ಈ ನಡುವೆ ಔರಂಗಾಬಾದ್‌ನ ಗಯಾದ ಛಕರ್‌ಬಂದಾ ಪೊಲೀಸ್ ಠಾಣೆಯ ಗಡಿ ಮತ್ತು ಮದನ್‌ಪುರದ ಮೂಲಕ ಹಾದುಹೋಗುವಾಗ, ನಕ್ಸಲೀಯರು ಹಾಕಿದ ಐಇಡಿ ಬಾಂಬ್ನನ್ನು ತುಳಿದಿದ್ದಾನೆ. ಬಾಂಬ್ ಸ್ಫೋಟಿಸಿದ ಬಳಿಕ ರೈತನ ದೇಹ ಛಿದ್ರ-ಛಿದ್ರವಾಗಿದೆ. ಮೃತರನ್ನು 55 ವರ್ಷದ ಕಯಿಲ್ ಮಾಂಝಿ ಎಂದು ಗುರುತಿಸಲಾಗಿದೆ. ಅವರು ತಾರ್ಚುವಾನ್ ಗ್ರಾಮದ ನಿವಾಸಿಯಾಗಿದ್ದರು.
ಇದನ್ನೂ ಓದಿ: ಚಂದ್ರಶೇಖರ್ ಆಜಾದ್ ಬೆಂಗಾವಲು ಬೈಕ್ಗೆ ಡಿಕ್ಕಿ ಹೊಡೆದ ಹಸು... ಯುವಕ ಸ್ಥಳದಲ್ಲೇ ಸಾವು
ನಕ್ಸಲೀಯರ ವಿರುದ್ಧ ಶೋಧ ಕಾರ್ಯಾಚರಣೆ ತೀವ್ರ: ರೈತ ಬಹಳ ಹೊತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಇದಾದ ನಂತರ ಘಟನೆಯ ಕುರಿತು ಔರಂಗಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರೈತ ಸಾವಿಗೀಡಾಗಿರುವುದು ತಿಳಿದು ಬಂದಿದೆ. ಇದೇ ವೇಳೆ ನಕ್ಸಲೀಯರ ವಿರುದ್ಧ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಭದ್ರತಾ ಪಡೆಗಳ ಮೇಲೆ ದಾಳಿಗೆ ಸಂಚು: ನಕ್ಸಲೀಯರು ಎರಡು ರೀತಿಯ ಐಇಡಿ ಪ್ಲಾಂಟ್‌ಗಳನ್ನು ಮಾಡುತ್ತಿದ್ದು, ಭದ್ರತಾ ಪಡೆಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಕ್ಸಲೀಯರು ಇಂತಹ ಹತ್ತಾರು ಬಾಂಬ್ಗಳನ್ನು ತಮ್ಮ ನೆಲೆ ಪ್ರದೇಶದಲ್ಲಿ ಇಟ್ಟಿದ್ದಾರೆ ಎನ್ನಲಾಗುತ್ತದೆ. ಐಇಡಿ ಇಟ್ಟಿರುವ ಪ್ರದೇಶಕ್ಕೆ ಹೋದಾಗ ಗ್ರಾಮಸ್ಥರು ಬಲಿಯಾಗುತ್ತಿದ್ದಾರೆ.